newsfirstkannada.com

ಸಿಎಂ, ಡಿಸಿಎಂಗೆ ಸಂಪುಟ ವಿಸ್ತರಣೆ ತಲೆಬಿಸಿ; ಸಚಿವ ಸ್ಥಾನಕ್ಕಾಗಿ ಎಸ್.ಟಿ ಸಮುದಾಯದಿಂದ ಒತ್ತಡ

Share :

Published May 25, 2023 at 10:45am

Update September 25, 2023 at 10:35pm

    ಸಂಪುಟ ವಿಸ್ತರಣೆಗಾಗಿ ಸಿಎಂ ಡಿಸಿಎಂ ಸರ್ಕಸ್

    ಸಚಿವ ಸ್ಥಾನಕ್ಕಾಗಿ ST ಸಮುದಾಯ ಬೇಡಿಕೆ​

    ಇಂದು ಸಚಿವರ ಪಟ್ಟಿ ಬುಹುತೇಕ ಫೈನಲ್

ತಡರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಸಂಪುಟ ವಿಸ್ತರಣೆಯ ಸರ್ಕಸ್​​ ನಡೆದಿದೆ. ಹೈಕಮಾಂಡ್ ಜೊತೆಗೆ ಜೋಡೆತ್ತುಗಳು ಹೈವೋಲ್ಟೇಜ್​ ಮೀಟಿಂಗ್​ ನಡೆಸಿದ್ದಾರೆ. ಪ್ರಬಲ ಖಾತೆಗಾಗಿ ಸಚಿವರು ಕೂಡ ದೆಹಲಿಗೆ ಹಾರಿ ಒತ್ತಡ ಹಾಕಿದ್ದಾರೆ. ಇತ್ತ ಎಸ್​.ಟಿ ಸಮುದಾಯದ ನಾಯಕರು ಕೂಡ ಮಂತ್ರಿಗಿರಿಗಾಗಿ ಲಾಬಿ ಮಾಡಿದ್ದಾರೆ.

ಸಿಎಂ ಫೈಟ್​ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಮಂತ್ರಿಗಿರಿ ಗುದ್ದಾಟ ಜೋರಾಗಿದೆ. ಸಚಿವ ಸ್ಥಾನಕ್ಕಾಗಿ ಡಿಕೆಶಿ, ಸಿದ್ದು ಬಣದ ಶಾಸಕರ ಲಾಬಿ ಮಾಡ್ತಿದ್ದಾರೆ. ಸಂಪುಟ ಸೇರಲು ಶಾಸಕರು ದುಂಬಾಲು ಬೀಳ್ತಿದ್ದಾರೆ. ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್​ ಜೊತೆ ದೆಹಲಿಯಲ್ಲಿ ಮಿಡ್​​ನೈಟ್​ ಸರ್ಕಸ್​​ ನಡೆದಿದೆ.

ಸಂಪುಟ ವಿಸ್ತರಣೆಗಾಗಿ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸರ್ಕಸ್
​ಕ್ಯಾಬಿನೆಟ್​ ವಿಸ್ತರಣೆಗಾಗಿ ಸಿಎಂ​ ಸಿದ್ದು, ಡಿಸಿಎಂ ಡಿಕೆಶಿ ಭಾರೀ ಸರ್ಕಸ್ ನಡೆಸ್ತಿದ್ದಾರೆ. ನಿನ್ನೆ ಅಧಿವೇಶನ ಮುಗಿಯುತ್ತಿದ್ದಂತೆ ಜೋಡೆತ್ತುಗಳು ದೆಹಲಿಗೆ ಹಾರಿದ್ರು. ತಡರಾತ್ರಿ ದೆಹಲಿಯಲ್ಲಿ ಹೈಕಮಾಂಡ್​ ಜೊತೆ ಹೈವೋಲ್ಟೇಜ್​ ಮೀಟಿಂಗ್​ ನಡೆಸಿದ್ರು.

ಸಿಎಂ ಸಿದ್ದರಾಮಯ್ಯ ದೆಹಲಿಗೆ ಬರುವ ಮುನ್ನವೇ ಮಲ್ಲಿಕಾರ್ಜುನ ಖರ್ಗೆ ಜೊತೆ ಡಿಸಿಎಂ ಡಿ.ಕೆ ಶಿವಕುಮಾರ್​ ಚರ್ಚೆ ನಡೆಸಿದ್ರು. ಬಳಿಕ ಕೆ.ಸಿ ವೇಣುಗೋಪಾಲ್​ ನಿವಾಸದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ಚರ್ಚೆ ಒಟ್ಟಿಗೆ ಸಭೆ ನಡೆಸಿದ್ರು. ಇಂಟರೆಸ್ಟಿಂಗ್​ ಅಂದ್ರೆ ಪ್ರಬಲ ಖಾತೆಗಾಗಿ ಈಗಾಗಲೇ ಮಂತ್ರಿಗಿರಿ ಗಿಟ್ಟಿಸಿಕೊಂಡಿರೋ ಸಚಿವರು ಕೂಡ ನಿನ್ನೆ ದೆಹಲಿಗೆ ದೌಡಾಯಿಸಿದ್ರು. ಸಚಿವ ಜಮೀರ್ ಅಹಮದ್, ಕೆ.ಜೆ ಜಾರ್ಜ್, ಹಾಗೂ ಸಚಿವ ಎಂಬಿ ಪಾಟೀಲ್ ಕೂಡ ದೆಹಲಿಗೆ ತೆರಳಿ, ತಮಗೆ ಪ್ರಬಲ ಖಾತೆ ನೀಡುವಂತೆ ಹೈಕಮಾಂಡ್​​ಗೆ ಒತ್ತಡ ಹಾಕಿದ್ದಾರೆ. ಇನ್ನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​ ಎರಡನೇ ಸುತ್ತಿನ ಸಭೆ ನಡೆಸೋಕೆ ತೀರ್ಮಾನಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಮತ್ತೆ ತಮ್ಮನ್ನ ಭೇಟಿಯಾಗುವಂತೆ ಜೋಡೆತ್ತುಗಳಿಗೆ ಸೂಚಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​ಗೆ ಎಸ್​.ಟಿ ಸಮುದಾಯ ಬೇಡಿಕೆ​
ಸಚಿವ ಸ್ಥಾನಕ್ಕಾಗಿ ಎಸ್​.ಟಿ ಸಮುದಾಯದ ನಾಯಕರು ಹೈಕಮಾಂಡ್​ಗೆ ಭಾರೀ ಒತ್ತಡ ಹಾಕ್ತಿದ್ದಾರೆ. ಒಬ್ಬರೇ ಡಿಸಿಎಂ ಅಂತಾ ಈಗಾಗಲೇ ಹೈಕಮಾಂಡ್​​ ಘೋಷಿಸಿದ್ರೂ, ಎಸ್​​ಟಿ ಸಮುದಾಯದ ಒಬ್ಬರಿಗೆ ಡಿಸಿಎಂ ಸ್ಥಾನ ನೀಡುವಂತೆ ಡಿಮ್ಯಾಂಡ್​ ಇಟ್ಟಿದ್ದಾರೆ.ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಎಸ್​​.ಟಿ ಸಮುದಾಯದ ನಾಯಕರು ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನ ಭೇಟಿ ಮಾಡಿದ್ರು. ಈ ಬಾರಿಯ ಚುನಾವಣೆಯಲ್ಲಿ ಎಸ್​ಟಿ ಸಮುದಾಯದ 15 ಮಂದಿ ಶಾಸಕರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಒಬ್ಬರಿಗೆ ಡಿಸಿಎಂ ಸ್ಥಾನ ನೀಡಬೇಕು. ಡಿಸಿಎಂ ಸ್ಥಾನ ನೀಡಲು ಸಾಧ್ಯವಾಗದಿದ್ರೆ, ಮೂವರಿಗೆ ಸಚಿವ ಸ್ಥಾನ ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಘುಮೂರ್ತಿ, ಡಿಎಂ ನಾಗರಾಜ್, ಸಂಡೂರು ತುಕಾರಾಂ, ಕಂಪ್ಲಿ ಗಣೇಶ್, ಡಾ ಶ್ರೀನಿವಾಸ್, ಎಂ ಕೆ ತಮ್ಮಣ್ಣನವರ್, ಖರ್ಗೆರನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಪ್ರಚಂಡ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್​ಗೆ​ ಸಂಪುಟ ವಿಸ್ತರಣೆ ನಿಜಕ್ಕೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ತಡರಾತ್ರಿ ಹೈಕಮಾಂಡ್​ ಜೊತೆ ನಡೆದ ಸಭೆ ಅದ್ಯಾಕೋ ವರ್ಕ್​​ಔಟ್​ ಆಗಿಲ್ಲ ಅನಿಸುತ್ತೆ. ಬೆಳಗ್ಗೆ ನಡೆಯೋ 2ನೇ ಸುತ್ತಿನ ಸಭೆಯಲ್ಲಿ ಸಚಿವರ ಪಟ್ಟಿ ಬುಹುತೇಕ ಫೈನಲ್​​ ಆಗೋ ಸಾಧ್ಯತೆ ಇದೆ. ಯಾರಿಗೆ ಸಿಹಿ ಯಾರಿ ಕಹಿ ಅನ್ನೋದು ಶೀಘ್ರವೇ ಹೊರಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಿಎಂ, ಡಿಸಿಎಂಗೆ ಸಂಪುಟ ವಿಸ್ತರಣೆ ತಲೆಬಿಸಿ; ಸಚಿವ ಸ್ಥಾನಕ್ಕಾಗಿ ಎಸ್.ಟಿ ಸಮುದಾಯದಿಂದ ಒತ್ತಡ

https://newsfirstlive.com/wp-content/uploads/2023/05/Siddaramaiah-Cabinet-1.jpg

Load More