ಮೈಕ್ರೋ ಫೈನಾನ್ಸ್‌ ಕಡಿವಾಣಕ್ಕೆ ಹೊಸ ಬಿಲ್‌.. ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಏನದು?

author-image
admin
Updated On
HDK ಕಾಲಘಟ್ಟದ ಹಗರಣ ಆರೋಪ; ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ ಕೇಳಿದ ವರದಿ 10 ತಿಂಗಳಿಂದ ಬಾಕಿ?
Advertisment
  • ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಕ್ಯಾಬಿನೆಟ್‌ನಲ್ಲಿ ಗಂಭೀರ ಚರ್ಚೆ
  • ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಾಲಗಾರರು
  • ಅಮಾನವೀಯವಾಗಿ ಸಾಲ, ಬಡ್ಡಿ ವಸೂಲಿ ಮಾಡ್ತಾ ಇದ್ದಾರೆ

ಬೆಂಗಳೂರು: ರಾಜ್ಯದೆಲ್ಲೆಡೆ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿ ಮೀರಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರ ಕಡಿವಾಣ ಹಾಕುವ ಕಾನೂನು ತರಲು ಮುಂದಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹೊಸ ಬಿಲ್‌ಗೆ ಒಪ್ಪಿಗೆ ನೀಡಲಾಗಿದೆ.

ಸಿಎಂ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಹೊಸ ಕಾನೂನು ತರುವ ಡ್ರಾಫ್ಟ್‌ ಬಗ್ಗೆ ಗಂಭೀರ ಮಾತುಕತೆ ನಡೆದಿದ್ದು, ಸುಗ್ರೀವಾಜ್ಞೆ ತರದೆ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧಾರ ಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೆರಡು ಜೀವ ಬಲಿ; ನ್ಯೂಸ್​​ ಫಸ್ಟ್ ವರದಿ ಬೆನ್ನಲ್ಲೇ FIR ದಾಖಲು 

ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು. ರೈತರು, ಕಾರ್ಮಿಕರು ಚಿಕ್ಕ ಅತಿ ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಾಲ ತೆಗೆದುಕೊಂಡಿದ್ದಾರೆ. ಆ ಸಾಲ ವಸೂಲಿ ಪ್ರಕ್ರಿಯೆ ನಡೆಯುತ್ತಿರೋದನ್ನ ಒಪ್ಪದಂತೆ ಆಗುತ್ತಾ ಇದೆ.

publive-image

ಮೈಕ್ರೋ ಫೈನಾನ್ಸ್ ಸಾಲಗಳಿಂದ ಜನರು ಬಹಳ ತೊಂದರೆಗೆ ಬಂದಿದ್ದಾರೆ. ಅಮಾನವೀಯವಾಗಿ ಸಾಲ, ಬಡ್ಡಿ ವಸೂಲಿ ಮಾಡ್ತಾ ಇದ್ದಾರೆ. ಸರ್ಕಾರ ಅದಕ್ಕಾಗಿ ಹೊಸ ಮಸೂದೆ ತರ್ತಾ ಇದೆ. ನಾವು ಚರ್ಚೆ ಮಾಡಿದ್ದೇವೆ. ತಾಂತ್ರಿಕ ಕಾರಣದಿಂದ ಇವತ್ತು ಸಂಜೆ 4 ಗಂಟೆಗೆ ಸಿಎಂ ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಹೊಸ ಬಿಲ್‌ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಿಎಂಗೆ ಅಧಿಕಾರ ನೀಡಿದ್ದೇವೆ ಎಂದು ಕಾನೂನು ಸಚಿವ ಹೆಚ್‌.ಕೆ ಪಾಟೀಲ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment