/newsfirstlive-kannada/media/post_attachments/wp-content/uploads/2023/09/Parameshwar-Siddaramaiah-Dkshivakumar.jpg)
ಬೆಂಗಳೂರು: ಬಣಗಳ ಹಗ್ಗಜಗ್ಗಾಟ, ರಾಜಕೀಯದ ಜಂಗೀಕುಸ್ತಿ ಮಧ್ಯೆ ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿದೆ. ಬಜೆಟ್ ಅಧಿವೇಶನದ ಬಳಿಕ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಶಾಸಕರು ಬಿಗಿ ಪಟ್ಟು ಹಿಡಿದಿದ್ದಾರೆ. ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರ ಬಳಿ ದುಂಬಾಲು ಬಿದ್ದಿದ್ದಾರೆ.
ಇದನ್ನೂ ಓದಿ:BJP-JDS ನಾಯಕರ ಮಹತ್ವದ ಸಭೆ.. ‘ಕೈ’ ಸರ್ಕಾರ ಕಟ್ಟಿ ಹಾಕಲು ಏನೆಲ್ಲಾ ಚರ್ಚೆ ಮಾಡಲಾಗಿದೆ?
‘ನಮಗೂ ಮಂತ್ರಿಗಿರಿ ಬೇಕು’
ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದೆ. ಇದೇ ಮಾರ್ಚ್ 7ರಂದು ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆಯನ್ನು ನಡೆಸಿದ್ದಾರೆ. 2025-26ನೇ ಸಾಲಿನ ರಾಜ್ಯ ಬಜೆಟ್ ಬಳಿಕ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಶಾಸಕರು ಒತ್ತಡ ಏರುತ್ತಿದ್ದಾರೆ.
ಪ್ರಮುಖವಾಗಿ ತಮಗೆ ಸಚಿವ ಸ್ಥಾನ ನೀಡಲು ಶಾಸಕರಾದ ಶಿವಲಿಂಗೇಗೌಡ, ಎಂ.ಕೃಷ್ಣಪ್ಪ, ಅಜಯ್ ಸಿಂಗ್, ಲಕ್ಷ್ಮಣ ಸವದಿ, ನರೇಂದ್ರ ಸ್ವಾಮಿ ಸೇರಿದಂತೆ ಹಲವು ಆಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ. ನಿರಂತರವಾಗಿ ಹೈಕಮಾಂಡ್ ನಾಯಕರು, ಸಿಎಂ ಸಿದ್ದರಾಮಯ್ಯ ಬಳಿ ದುಂಬಾಲು ಬಿದ್ದಿರುವ ಆಕಾಂಕ್ಷಿಗಳು ಪ್ರಾಂತ್ಯ, ಜಾತಿವಾರು ವಿಭಾಗದಲ್ಲಿ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ