Advertisment

ಪದವೀಧರರಿಗೆ ಸರ್ಕಾರಿ ಕೆಲಸ.. ಸ್ಯಾಲರಿ ₹95,000; ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?

author-image
Bheemappa
Updated On
ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ?
Advertisment
  • ಅಧಿಸೂಚನೆ ಗಮನಿಸಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು
  • ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ
  • ಈ ಹುದ್ದೆಗಳಿಗೆ ಯಾರು ಯಾರು ಅರ್ಜಿ ಸಲ್ಲಿಕೆ ಮಾಡಬಹುದು..?

ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ (ತಾಂತ್ರಿಕ) ಹುದ್ದೆಗಳಿಗೆ ಭಾರತ ಸರ್ಕಾರ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಿಡುಗಡೆಗೊಂಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಬಳಿಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಸೆಕ್ರೆಟರಿಯೇಟ್‌ನಲ್ಲಿ ಗ್ರೂಪ್ ಬಿ, ಗೆಜೆಟೆಡ್ ಅಲ್ಲದ ವರ್ಗದಲ್ಲಿನ ಖಾಲಿ ಹುದ್ದೆಗಳನ್ನು ಸದ್ಯಕ್ಕೆ ಭರ್ತಿ ಮಾಡಲಾಗುತ್ತಿದೆ.

Advertisment

ಇದನ್ನೂ ಓದಿ: ಡಿಗ್ರಿ ಮಾಡಿದವರಿಗೆ ಗುಡ್​ನ್ಯೂಸ್​​; ಕೆನರಾ ಬ್ಯಾಂಕ್​​ನಲ್ಲಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಅಧಿಸೂಚನೆಯಲ್ಲಿ ನೀಡಲಾಗಿರುವ ಎಲ್ಲ ವಿವರಗಳನ್ನು ಅಭ್ಯರ್ಥಿಗಳು ಸರಿಯಾಗಿ ಮನನ ಮಾಡಿಕೊಳ್ಳಬೇಕು. ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಸಕ್ತರು ಈ ಆರ್ಟಿಕಲ್ ಅನ್ನು ಸರಿಯಾಗಿ ಗಮನಿಸಿ ಬಳಿಕ ಹುದ್ದೆಗಳಿಗೆ ಅಪ್ಲೇ ಮಾಡಿ. ಈ ಹುದ್ದೆಗೆ ಸಂಬಂಧಿಸಿದ ಲಿಂಕ್ ಹಾಗೂ ದಿನಾಂಕಗಳನ್ನು ಕೆಳಗೆ ನಮೂದು ಮಾಡಲಾಗಿರುತ್ತದೆ. ಹುದ್ದೆಯ ಫಾರ್ಮ್​ ಅನ್ನು ಡೌನ್​​ಲೋಡ್ ಮಾಡಿಕೊಂಡು ಅದನ್ನು ಇಲಾಖೆಗೆ ಕಳುಹಿಸಿ ಕೊಡಬೇಕು.

ಇದನ್ನೂ ಓದಿ:EXAMS: ಪೊಲೀಸ್​​, ವಿಲೇಜ್​ ಅಕೌಂಟೆಂಟ್​​, ಕೆಸೆಟ್​​ ಸೇರಿ ಹಲವು ಪರೀಕ್ಷೆಗಳ ವೇಳಾಪಟ್ಟಿ ಔಟ್

Advertisment

publive-image

ತಿಂಗಳಿಗೆ ಸಂಬಳ- 95,000 ರೂಪಾಯಿಗಳು

ಹುದ್ದೆಯ ಹೆಸರು- ಡೆಪ್ಯೂಟಿ ಫೀಲ್ಡ್ ಆಫೀಸರ್ (ಟೆಕ್ನಿಕಲ್)
ಒಟ್ಟು ಪೋಸ್ಟ್​ಗಳು- 160
ಉದ್ಯೋಗದ ಸ್ಥಳ- ದೆಹಲಿ

ವಯಸ್ಸಿನ ಮಿತಿ-

  • 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
  • ಎಸ್​​ಸಿ, ಎಸ್​ಟಿ, ಒಬಿಸಿ ಸರ್ಕಾರಿ ಅಧಿಕಾರಿಗಳು, ಮಾಜಿ ಸೈನಿಕರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ

ವಿದ್ಯಾರ್ಹತೆ-

  • ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ ಪೂರ್ಣ ಆಗಿರಬೇಕು
  • ವಿಜ್ಞಾನ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ
  • GATE ಅಲ್ಲಿ ಪಡೆದ ಅಂಕಗಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ
Advertisment

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

  • ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಅನ್ನು ಸಿದ್ಧಪಡಿಸಲಾಗುತ್ತದೆ
  • ಸಂದರ್ಶನ ಏರ್ಪಡಿಸಲಾಗುತ್ತದೆ
  • ಅರ್ಜಿಯಲ್ಲಿ ಸಂದರ್ಶನದ ಸ್ಥಳ ಅಭ್ಯರ್ಥಿಗಳೇ ನಿರ್ಧರಿಸಬೇಕು
  • GATE ಅಲ್ಲಿ ಪಡೆದ ಅಂಕಗಳು ಹಾಗೂ ಸಂದರ್ಶನದಲ್ಲಿನ ಪರ್ಫಾಮೆನ್ಸ್​ ನೋಡಿ ಆಯ್ಕೆ ಮಾಡಲಾಗುತ್ತದೆ

ಫಾರ್ಮ್​ ಜೊತೆ ಯಾವ್ಯಾವ ದಾಖಲೆಗಳನ್ನು ನೀಡಬೇಕು..?

  • ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು
  • SSLC, ಸೆಕೆಂಡ್ ಪಿಯುಸಿ, ಪದವಿ ಅಂಕ ಪಟ್ಟಿಗಳು
  • GATE ಅಲ್ಲಿ ಪಡೆದ ಅಂಕ ಪಟ್ಟಿ
  • ಜಾತಿ ಪ್ರಮಾಣಪತ್ರ
  • ಎಲ್ಲಿಯಾದರೂ ಕೆಲಸ ಮಾಡುತ್ತಿದ್ದರೇ ಎನ್​​ಒಸಿ ಕೊಡಬಹುದು
  • ಮಾಜಿ ಸೈನಿಕ ಆಗಿದ್ದರೇ ಸರ್ಟಿಫಿಕೆಟ್
  • ಇತ್ತೀಚಿನ 2 ಪಾಸ್​​ಪೋರ್ಟ್​ ಫೋಟೋಗಳು

ಅರ್ಜಿ ಫಾರ್ಮ್​ ಬೇಕಿದ್ದರೇ ಈ ಲಿಂಕ್​ಗೆ ಭೇಟಿ ನೀಡಿ- https://drive.google.com/file/d/1f8jIBTktisgg4D38HnpGpl1F_bNBR0gG/view

Advertisment

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- ಸೆಪ್ಟೆಂಬರ್ 21
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಅಕ್ಟೋಬರ್ 21

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment