Advertisment

ಒಂದು ಕೂಲ್ ಡ್ರಿಂಕ್ಸ್‌ಗೆ ₹16,000.. ಕಾಫಿ ಕುಡಿಯೋಣ ಅಂತ ಕರೆದಿದ್ದ ಹುಡುಗಿ ಬಲೆಗೆ ಬಿದ್ದ ಹುಡುಗರು ಶಾಕ್!

author-image
admin
Updated On
ಒಂದು ಕೂಲ್ ಡ್ರಿಂಕ್ಸ್‌ಗೆ ₹16,000.. ಕಾಫಿ ಕುಡಿಯೋಣ ಅಂತ ಕರೆದಿದ್ದ ಹುಡುಗಿ ಬಲೆಗೆ ಬಿದ್ದ ಹುಡುಗರು ಶಾಕ್!
Advertisment
  • ಡೇಟಿಂಗ್​ ನೆಪದಲ್ಲಿ ಹುಡುಗರನ್ನು ಬಲೆಗೆ ಬೀಳಿಸುತ್ತಿದ್ದ ಕಿರಾತಕರು
  • ಹೆಸರಿಗೆ ಅದು ಕೆಫೆ, ಅಲ್ಲಿ ನಡೆಯುತ್ತಿದ್ದಿದ್ದೇ ಬೇರೆಯದ್ದೇ ಆಟಗಳು
  • 1 ಗ್ಲಾಸ್ ಕೋಲ್ಡ್ರಿಂಗ್ಸ್​​ಗೆ 16,400 ರೂಪಾಯಿ, ಮುಂದೆ ಆಗಿದ್ದೇ ರೋಚಕ

ಘಾಜಿಯಾಬಾದ್: ಉತ್ತರಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಹುಡುಗರನ್ನು ಡೇಟಿಂಗ್ ನೆಪದಲ್ಲಿ ಕರೆದು ಸಾವಿರ, ಸಾವಿರ ರೂಪಾಯಿ ಪೀಕುತ್ತಿದ್ದ ಕಿಲಾಡಿ ಗ್ಯಾಂಗ್​ವೊಂದನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

Advertisment

ಸದ್ಯಕ್ಕೆ ಬಂದ ಮಾಹಿತಿಯ ಪ್ರಕಾರ ಈ ತಂಡ ಒಂದು ನಕಲಿ ಕೆಫೆಯನ್ನು ನಡೆಸುತ್ತಿತ್ತು. ವಾಟ್ಸಾಪ್​ನಲ್ಲಿ ಡೇಟಿಂಗ್ ನೆಪದಲ್ಲಿ ಹುಡುಗರನ್ನು ಪರಿಚಯ ಮಾಡಿಕೊಂಡು ಅವರನ್ನು ಈ ಕೆಫೆಗೆ ಬರುವಂತೆ ಮಾಡಲಾಗುತ್ತಿತ್ತು. ಅಲ್ಲಿಗೆ ಬಂದ ಮೇಲೆ ಕೆಫೆಯಲ್ಲಿ ದುಬಾರಿ ತಿಂಡಿಗಳನ್ನು ಆರ್ಡರ್ ಮಾಡಿ ಅದರ ದುಡ್ಡನ್ನು ಕಟ್ಟುವಂತೆ ಹೇಳಲಾಗುತ್ತಿತ್ತು. ತಿಂದಿದ್ದ ತಿಂಡಿಯ ದುಡ್ಡನ್ನು ಕಟ್ಟದೇ ಹೋದಲ್ಲಿ ಅವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬೆದರಿಸಿ ಹಣವನ್ನು ವಸೂಲಿ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಅಕ್ಟೋಬರ್ 21ರಂದು ಒಬ್ಬ ವ್ಯಕ್ತಿಗೆ ವಾಟ್ಸಾಪ್ ಮೂಲಕ ಒಂದು ಡೇಟಿಂಗ್ ಆಫರ್ ಇರುವ ಸಂದೇಶ ಬರುತ್ತದೆ. ಅದರ ಹಿಂದಿರುವ ಜಾಲವನ್ನು ಅರಿಯದ ವ್ಯಕ್ತಿ ಹುಡುಗಿಯನ್ನು ಮೀಟ್ ಮಾಡಲು ಕೌಶಾಂಬಿ ಮೆಟ್ರೋ ನಿಲ್ದಾಣಕ್ಕೆ ಹೊರಡುತ್ತಾರೆ. ಅಲ್ಲಿ ಭೇಟಿಯಾದ ಹುಡುಗಿ ಆ ವ್ಯಕ್ತಿಯನ್ನು ಟೈಗರ್​ ಕೆಫೆಗೆ ಕರೆದುಕೊಂಡು ಹೋಗುತ್ತಾಳೆ. ಆ ಕೆಫೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಗೆ ಅನೇಕ ಸಂಶಯಗಳು ಹೆಡೆಯೆತ್ತಲು ಶುರುವಾಗುತ್ತವೆ. ಆನ್​ಲೈನ್​ನಲ್ಲಿ ತೋರಿಸಿದ ಯಾವುದೇ ಬೋರ್ಡ್​ಗಳು ಅಲ್ಲಿ ಅವನಿಗೆ ಕಾಣಿಸುವುದಿಲ್ಲ. ಇಲ್ಲಿ ಏನೋ ಸರಿಯಿಲ್ಲ ಎಂದು ಗಮನಿಸಿದ ವ್ಯಕ್ತಿ ಕೂಡಲೇ ತನ್ನ ಗೆಳೆಯನಿಗೆ ಲೈವ್​ ಲೋಕೇಷನ್ ಶೇರ್ ಮಾಡುತ್ತಾನೆ. ಅದರ ಜೊತೆಗೆ ತನ್ನ ಪರಿಸ್ಥಿತಿಯನ್ನು ಮೆಸೇಜ್​ನಲ್ಲಿ ವಿವರಿಸುತ್ತಾನೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮದ್ವೆಯಾಗಲು ಹೊರಟ ಅನುರಾಗ್​ ಕಶ್ಯಪ್​ ಮಗಳು! ವಿದೇಶಿ ಯುವಕನ ಜೊತೆ ಪಿಪಿ ಡುಂಡುಂ 

Advertisment

ಇನ್ನೇನು ಎದ್ದು ಹೊರಡಬೇಕು ಅನ್ನುವಷ್ಟರಲ್ಲಿ ಆ ವ್ಯಕ್ತಿಯ ಮನಸಲ್ಲಿ ಹುಟ್ಟಿದ್ದ ಸಂಶಯ ನಿಜವಾಗಿ ಬೆಳಕಿಗೆ ಬರುತ್ತದೆ. ಆ ಹುಡುಗಿ ಕುಡಿದಿದ್ದ ಒಂದೇ ಒಂದು ಕೋಲ್ಡ್ ​ಡ್ರಿಂಕ್ಸ್​ಗೆ ಅಲ್ಲಿ 16,400 ರೂಪಾಯಿ ಬಿಲ್ ನೀಡಲಾಗಿರುತ್ತೆ. ಇದನ್ನು ವಿರೋಧಿಸಿದ ವ್ಯಕ್ತಿಗೆ 50 ಸಾವಿರ ರೂಪಾಯಿ ಕೊಟ್ಟರೆ ಮಾತ್ರ ನಾನು ನಿನ್ನನ್ನು ಇಲ್ಲಿಂದ ಹೋಗಲು ಬಿಡುತ್ತೇವೆ ಎಂಬ ಧಮ್ಕಿ ಕೂಡ ಬರುತ್ತೆ.

publive-image

ಅದೃಷ್ಟವಶಾತ್ ಜಾಲದಲ್ಲಿ ಸಿಲುಕಿದವನ ಫ್ರೆಂಡ್​ಗೆ ಇನ್ನೂ ದೊಡ್ಡ ಅನುಮಾನ ಬಂದು ಆತ ಪೊಲೀಸರಿಗೆ ನಡೆದ ವಿಷಯವನ್ನು ತಿಳಿಸುತ್ತಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಈ ಡೇಟಿಂಗ್ ಜಾಲವನ್ನು ಭೇದಿಸುತ್ತಾರೆ. ಮೂವರು ಯುವಕರು ಹಾಗೂ ನಾಲ್ಕು ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರ ವಿಚಾರಣೆ ನಡೆಸಿದಾಗ ಇದೇ ಜಾಲದಲ್ಲಿ ಹಲವು ಯುವಕರನ್ನು ಬೀಳಿಸಿ ಬೇಕಾಬಿಟ್ಟಿ ಹಣ ವಸೂಲಿ ಮಾಡಿದ ವಿಚಾರ ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment