/newsfirstlive-kannada/media/media_files/2025/12/16/cbse-schools-in-bangalore-2025-12-16-15-54-44.jpg)
ಹೆಚ್ಚಾದ ಸಿಬಿಎಸ್‌ಇ ಸಿಲಬಸ್‌ಗೆ ಶಿಫ್ಟ್ ಆಗುವ ಶಾಲೆಗಳ ಸಂಖ್ಯೆ!
ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ 375 ಖಾಸಗಿ ಶಾಲೆಗಳು ರಾಜ್ಯ ಸಿಲಬಸ್ ನಿಂದ ಸಿಬಿಎಸ್‌ಇ ಸಿಲಬಸ್‌ಗೆ ಶಿಫ್ಟ್ ಆಗಿವೆ. 2022-2024ರ ಅವಧಿಯಲ್ಲಿ ಸಿಬಿಎಸ್‌ಇ ಸಿಲಬಸ್ ಗೆ ಶಿಫ್ಟ್ ಆದ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಅಂಕಿಅಂಶಗಳನ್ನು ರಾಜ್ಯದ ಶಿಕ್ಷಣ ಇಲಾಖೆಯೇ ವಿಧಾನಸಭೆಯಲ್ಲಿ ಲಿಖಿತ ಉತ್ತರವಾಗಿ ನೀಡಿದೆ. 2022 ರಲ್ಲಿ ರಾಜ್ಯದಲ್ಲಿ 62 ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮದಿಂದ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಶಿಫ್ಟ್ ಆಗಿವೆ. 2023 ರಲ್ಲಿ 169 ಖಾಸಗಿ ಶಾಲೆಗಳು ಸಿಬಿಎಸ್‌ಇ ಪಠ್ಯಕ್ರಮವನ್ನು ಅಳವಡಿಸಿಕೊಂಡಿವೆ. 2024 ರಲ್ಲಿ 144 ಖಾಸಗಿ ಶಾಲೆಗಳು ಸಿಬಿಎಸ್‌ಇ ಪಠ್ಯಕ್ರಮವನ್ನು ಅಳವಡಿಸಿಕೊಂಡಿವೆ.
ರಾಜ್ಯದಲ್ಲಿ ಸೆಂಟ್ರಲ್ ಬೋರ್ಡ್ ಸಿಲಬಸ್ ಅಳವಡಿಸಿಕೊಳ್ಳುವ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೆಂಟ್ರಲ್ ಬೋರ್ಡ್ ಸಿಲಬಸ್ ಅಳವಡಿಸಿಕೊಳ್ಳಲು ಶಾಲೆಯ ಮೂಲಭೂತ ಸೌಕರ್ಯದ ವಿಷಯದಲ್ಲೂ ಸೆಂಟ್ರಲ್ ಬೋರ್ಡ್ ನಿಯಮಗಳು ಹೆಚ್ಚು ವಾಸ್ತವಿಕತೆಯಿಂದ ಕೂಡಿವೆ. ಆದರೇ, ರಾಜ್ಯ ಶಿಕ್ಷಣ ಇಲಾಖೆಯ ನಿಯಮಗಳು ಕಠಿಣವಾಗಿವೆ ಎಂದು ಖಾಸಗಿ ಶಾಲೆಗಳ ಅಸೋಸಿಯೇಷನ್ ಸೆಕ್ರೆಟರಿ ಶಶಿ ಕುಮಾರ್ ಹೇಳಿದ್ದಾರೆ.
ಇದರ ಜೊತೆಗೆ ಪೋಷಕರಲ್ಲೂ ಕೂಡ ಸಿಬಿಎಸ್‌ಇ ಸಿಲಬಸ್ ಬಗ್ಗೆ ಹೆಚ್ಚಿನ ಒಲವು ಬೆಳೆಯುತ್ತಿದೆ. ಮಕ್ಕಳು ಸಿಬಿಎಸ್ಇ ಸಿಲಬಸ್ ನಲ್ಲಿ ಓದಿದರೇ, ಮಾತೃಭಾಷೆಯ ಜೊತೆಗೆ ಇಂಗ್ಲೀಷ್, ಹಿಂದಿ ಭಾಷೆಯನ್ನು ಸುಲಭವಾಗಿ ಕಲಿಯುತ್ತಾರೆ. ಜೊತೆಗೆ ಪದವಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಿಬಿಎಸ್‌ಇ ಸಿಲಬಸ್ ನಲ್ಲಿ ಓದಿದರೇ, ಹೆಚ್ಚಿನ ಅನುಕೂಲವಾಗುತ್ತೆ. ಸಿಬಿಎಸ್‌ಇ ಸಿಲಬಸ್ ನಲ್ಲಿ ಮಕ್ಕಳ ಬೌದ್ದಿಕ ಸಾಮರ್ಥ್ಯ ಕೂಡ ಹೆಚ್ಚಾಗುತ್ತೆ. ರಾಜ್ಯದ ಶಿಕ್ಷಣ ಇಲಾಖೆಯ ಸಿಲಬಸ್ ನಿಂದ ಮಕ್ಕಳು ಸೀಮಿತ ಜ್ಞಾನ ಮಾತ್ರ ಪಡೆಯುತ್ತಾರೆ. ಹೀಗಾಗಿ ಸಿಬಿಎಸ್‌ಇ ಸಿಲಬಸ್ ನಲ್ಲಿ ಓದಿಸುವುದು ಉತ್ತಮ ಎಂದು ಪೋಷಕರಾದ ಯಶಸ್ವಿನಿ ಆರ್. ಹೇಳಿದ್ದಾರೆ.
ಇನ್ನೂ ರಾಜ್ಯದ ಶಿಕ್ಷಣ ಮಂಡಳಿ ಹಾಗೂ ಸೆಂಟ್ರಲ್ ಬೋರ್ಡ್ ಪಠ್ಯಕ್ರಮದಲ್ಲೂ ವ್ಯತ್ಯಾಸವಿರುತ್ತೆ. ರಾಜ್ಯದ ಪಠ್ಯಕ್ರಮ ಭೋಧಿಸುವ ಶಾಲೆಗಳಲ್ಲಿ 6ನೇ ತರಗತಿಯಿಂದ ಎನ್‌ಸಿಇಆರ್‌ಟಿ ಪಠ್ಯಕ್ರಮ ಆರಂಭವಾಗುತ್ತೆ. 1-5 ನೇ ತರಗತಿಯವರೆಗೆ ಬೇರೆ ಮಾದರಿಯನ್ನು ಅನುಸರಿಸಲಾಗುತ್ತೆ. ರಾಜ್ಯದ ಶಿಕ್ಷಣ ಇಲಾಖೆಯು ಕೂಡ ಕೇಂದ್ರದ ಬೋರ್ಡ್ ಮಾದರಿಯಲ್ಲಿ ಪಠ್ಯಕ್ರಮದಲ್ಲಿ ಬದಲಾವಣೆ ತರಬೇಕೆಂದು ಕೇಳುತ್ತಿದ್ದೇವೆ ಎಂದು ಖಾಸಗಿ ಶಾಲೆಗಳ ಅಸೋಸಿಯೇಷನ್ ಸೆಕ್ರೆಟರಿ ಶಶಿಕುಮಾರ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/16/cbse-schools-in-bangalore-1-2025-12-16-15-56-37.jpg)
ಇನ್ನೂ ಪೋಷಕರಲ್ಲೂ ಸಿಬಿಎಸ್ಇ ಶಾಲೆಗಳಲ್ಲಿ ಓದಿದರೇ, ಒಳ್ಳೆಯ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎಂಬ ಭಾವನೆ ಇದೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಸಿಲಬಸ್ ಸಿಗುತ್ತೆ ಎಂಬ ಕಾರಣದಿಂದಲೇ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂಬುದು ಕೂಡ ಸರ್ವೇ ಒಂದರಿಂದ ಗೊತ್ತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us