ಕರ್ನಾಟಕದಲ್ಲಿ 5 ವರ್ಷದಲ್ಲಿ 947 ಸರ್ಕಾರಿ ಶಾಲೆಗಳು ಬಂದ್‌! ದೇಶದಲ್ಲಿ 18,727 ಸರ್ಕಾರಿ ಶಾಲೆ ಬಂದ್‌!

ದೇಶದಲ್ಲಿ ಕಳೆದ 5 ವರ್ಷದಲ್ಲಿ 18,727 ಸರ್ಕಾರಿ ಶಾಲೆಗಳು ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೇ ರಾಜ್ಯಸಭೆಗೆ ಲಿಖಿತವಾಗಿ ತಿಳಿಸಿದೆ. ಸಿಪಿಐ ಸದಸ್ಯ ಜಾನ್ ಬ್ರಿಟಾಸ್ ಕೇಳಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಕರ್ನಾಟಕದ್ಲಲಿ 947 ಸರ್ಕಾರಿ ಶಾಲೆ ಬಂದ್ ಆಗಿವೆ.

author-image
Chandramohan
CLOSURE OF GOVERNMENT SCHOOLS

ದೇಶದಲ್ಲಿ 5 ವರ್ಷದಲ್ಲಿ 18,727 ಸರ್ಕಾರಿ ಶಾಲೆ ಬಂದ್‌!

Advertisment
  • ದೇಶದಲ್ಲಿ 5 ವರ್ಷದಲ್ಲಿ 18,727 ಸರ್ಕಾರಿ ಶಾಲೆ ಬಂದ್‌!
  • ಕರ್ನಾಟಕದಲ್ಲಿ 5 ವರ್ಷದಲ್ಲಿ 947 ಸರ್ಕಾರಿ ಶಾಲೆ ಬಂದ್‌!
  • ರಾಜ್ಯಸಭೆಗೆ ಲಿಖಿತ ಉತ್ತರ ಕೊಟ್ಟ ಕೇಂದ್ರ ಸರ್ಕಾರ


ದೇಶದಲ್ಲಿ ಕಳೆದ 5 ವರ್ಷದ ಅವಧಿಯಲ್ಲಿ ಬರೋಬ್ಬರಿ 18,727 ಸರ್ಕಾರಿ ಶಾಲೆಗಳು ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರವೇ ಇಂದು ರಾಜ್ಯಸಭೆಯಲ್ಲಿ ಅಧಿಕೃತವಾಗಿ ತಿಳಿಸಿದೆ. ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವುದು ಹೆಚ್ಚಾಗಿದೆ. ಆದರೇ, ಅದೇ ವೇಳೆಯಲ್ಲಿ, ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ.  
ಇನ್ನೂ ಕರ್ನಾಟಕದಲ್ಲೂ ಕಳೆದ 5 ವರ್ಷದ ಅವಧಿಯಲ್ಲಿ  947  ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಕರ್ನಾಟಕದಲ್ಲಿ 2020-21 ರಲ್ಲಿ 49,791 ಸರ್ಕಾರಿ ಶಾಲೆಗಳು ಇದ್ದವು. ಆದರೇ, 2024-25 ರ ವೇಳೆಗೆ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ 48,844 ಕ್ಕೆ ಕುಸಿದಿದೆ. ಅಂದರೇ, ಕಳೆದ 5 ವರ್ಷದ ಅವಧಿಯಲ್ಲಿ 947 ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ. 

ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿರುವಾಗಲೇ ಹೆಡ್​ ಮಾಸ್ಟರ್​ಗೆ  ಹಾರ್ಟ್​ ಅಟ್ಯಾಕ್, ಕುಸಿದು ಬಿದ್ದು ನಿಧನ



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

GOVT SCHOOLS CLOSED
Advertisment