/newsfirstlive-kannada/media/media_files/2025/12/25/8th-commission-pay-2025-12-25-14-54-07.jpg)
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪಾಲಿಗೆ 2026 ಸ್ಪೆಷಲ್​​​ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣ 7ನೇ ವೇತನ ಆಯೋಗ ಈ ಡಿಸೆಂಬರ್​​ ಅಂತ್ಯಕ್ಕೆ ಕೊನೆಯಾಗಲಿದ್ದು, ಹೊಸ ವರ್ಷದಿಂದ 8ನೇ ವೇತನ ಆಯೋಗ ಜಾರಿಗೆ ಬರಲಿದೆ. ಹಾಗಾಗಿ 8ನೇ ವೇತನ ಆಯೋಗದ ಹಣ ಜನವರಿ 2026ರ ಸಂಬಳದಿಂದಲೇ ಸಿಗುತ್ತಾ ಅನ್ನೋ ಪ್ರಶ್ನೆ ಕಾಡುತ್ತಲೇ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ 8ನೇ ವೇತನ ಆಯೋಗ ಜಾರಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 8ನೇ ವೇತನ ಆಯೋಗದ ಷರತ್ತುಗಳಿಗೆ ಅನುಮೋದನೆ ಸಿಕ್ಕಿದ್ದು, ಅಂತಿಮ ವರದಿ ಸಿದ್ಧತೆಗೆ ತಯಾರಿ ನಡೆಯುತ್ತಿದೆ. ಕೇಂದ್ರ ಸರ್ಕಾರ ವೇತನ ರಚನೆ, ಭತ್ಯೆಗಳು ಮತ್ತು ಪಿಂಚಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಆಯೋಗಕ್ಕೆ 18 ತಿಂಗಳುಗಳ ಸಮಯ ನೀಡಿದ್ದು, ಫೈನಲ್​ ರಿಪೋರ್ಟ್​​ಗೆ ಇನ್ನೂ ಟೈಮ್​ ಬೇಕಿದೆ ಎಂದು ವರದಿಯಾಗಿದೆ.
ಸಂಬಳ ಎಷ್ಟು ಹೈಕ್​ ಆಗಬಹುದು..?
ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಎಷ್ಟು ಏರಿಕೆ ಆಗಬಹುದು ಅನ್ನೋ ಚರ್ಚೆ ಕೂಡ ಜೋರಾಗಿದೆ. ಹಿಂದಿನ ದಾಖಲೆಗಳ ಮೇಲೆ ಸಂಬಳ ಏರಿಕೆ ಅಂದಾಜು ಮಾಡಲಾಗ್ತಿದೆ. 6ನೇ ವೇತನ ಆಯೋಗ ಜಾರಿಗೆ ಬಂದಾಗ ಶೇ. 40ರಷ್ಟು ವೇತನ ಹೆಚ್ಚಳ ಆಗಿತ್ತು. 7ನೇ ವೇತನ ಆಯೋಗದಲ್ಲಿ ಶೇ. 25ರಷ್ಟು ವೇತನ ಹೆಚ್ಚಳ ಆಗಿತ್ತು. 8ನೇ ವೇತನ ಜಾರಿಗೆ ಬಂದಲ್ಲಿ ಶೇ. 35ರಷ್ಟು ಸಂಬಳ ಹೆಚ್ಚಾಗೋ ನಿರೀಕ್ಷೆ ಇದೆ.
ಸದ್ಯ ಕೇಂದ್ರ ಸರ್ಕಾರಿ ಉದ್ಯೋಗಿ ಕನಿಷ್ಠ ಮೂಲ ವೇತನ 18 ಸಾವಿರ ರೂಪಾಯಿ ಇದೆ. 8ನೇ ವೇತನ ಆಯೋಜ ಜಾರಿಗೆ ಬಂದಲ್ಲಿ ಫಿಟ್ಮೆಂಟ್ ಅಂಶ ಶ್ರೇಣಿ ಆಧಾರದ ಮೇಲೆ ಹೊಸ ಕನಿಷ್ಠ ಮೂಲ ವೇತನ 41 ಸಾವಿರ ಆಗಲಿದೆ. ಇನ್ನೂ ಹೊಸ ಆಯೋಗ ಪರಿಷ್ಕೃತ ವೇತನ ಜನವರಿ 2026ರಲ್ಲಿ ನೀಡೋದಿಲ್ಲ, ಬದಲಿಗೆ ಆ ತಿಂಗಳಿನಿಂದ ಜಾರಿಗೆ ತರಲಾಗುತ್ತದೆ. ಅನುಮೋದನೆ ನಂತರ ಬಾಕಿ ಮೊತ್ತ ಪಾವತಿ ಮಾಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: Bus accident: ಮದ್ವೆ ತಯಾರಿಯಲ್ಲಿದ್ದರು.. ಮಗಳ ಕೊರಳಿನಲ್ಲಿದ್ದ ಸರ ನೋಡಿ ಮೃತದೇಹ ಪತ್ತೆ ಹಚ್ಚಿದ ತಂದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us