Advertisment

NEP ಗೆ ಸೆಡ್ಡು, SEP ಜಾರಿಗೆ ಸಿದ್ದತೆ : ಮುಂದಿನ ಕ್ಯಾಬಿನೆಟ್‌ ನಲ್ಲಿ ತೀರ್ಮಾನ ಸಾಧ್ಯತೆ

ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನ್ಯೂ ಎಜುಕೇಷನ್ ಪಾಲಿಸಿಗೆ ವಿರುದ್ಧ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತಿದೆ. ಎಸ್‌ಇಪಿ ಜಾರಿಗೆ ಸಿದ್ದತೆಯನ್ನು ನಡೆಸಿದೆ. ಎಸ್‌ಇಪಿ ಬಗ್ಗೆ ಸಮಿತಿ ಸಲ್ಲಿಸಿದ್ದ ವರದಿಯನ್ನು ಸಂಕ್ಷಿಪ್ತಗೊಳಿಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಿದೆ. ಸದ್ಯದಲ್ಲೇ ಈ ಬಗ್ಗೆ ತೀರ್ಮಾನವಾಗಲಿದೆ.

author-image
Chandramohan
Madhu bangarappa
Advertisment

ರಾಜ್ಯ ಪಠ್ಯಕ್ರಮದತ್ತ ನಮ್ಮ ವಿದ್ಯಾರ್ಥಿಗಳು ಸನ್ನಿಹಿತವಾಗೋ ಕಾಲ ಹತ್ತಿರವಾಗಿದೆ. ಸ್ಟೇಟ್​ ಎಜುಕೇಷನ್​​​ ಪಾಲಿಸಿಗೆ (SEP) ಅಂತಿಮ ವರದಿ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ. ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಹೊಸ ಹೆಜ್ಜೆ ಇಟ್ಟಿದ್ದು, ಕರ್ನಾಟಕದಲ್ಲಿ ಎನ್‌ಇಪಿ ಬದಲು ರಾಜ್ಯ ಶಿಕ್ಷಣ ನೀತಿಯನ್ನ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರಕ್ಕೆ ತರಲು ಸಿದ್ಧತೆ ನಡೆದಿದೆ.
ನಮ್ಮ ರಾಜ್ಯದಲ್ಲಿ ಸ್ಟೇಟ್​ ಎಜುಕೇಷನ್​ಗಿಂತ, ನ್ಯಾಷನಲ್​ ಎಜುಕೇಷನ್​ ಪಾಲಿಸಿ ಹೇರಿಕೆ ಹೆಚ್ಚಾಗಿತ್ತು. ಇದೀಗ ಈ ನೀತಿಗೆ ಕರ್ನಾಟಕ ಸೆಡ್ಡು ಹೊಡೆದಿದೆ. ರಾಜ್ಯ ಪಠ್ಯಕ್ರಮಕ್ಕೆ ಒತ್ತುಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾಗಿ ಕರ್ನಾಟಕದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಡಿ ಇಟ್ಟಿದೆ.

ಮೊದಲಿಗೆ SEP ಯಾವಾಗಿನಿಂದ ಜಾರಿ ಅಂತಾ ನೋಡೋದಾದ್ರೆ..!
ಮುಂದಿನ ವರ್ಷದಿಂದಲೇ ಪೂರ್ಣ ಪ್ರಮಾಣದಲ್ಲಿ SEP ಜಾರಿ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ SEP ವಿಸ್ತೃತ ವರದಿಯನ್ನು ಆಯೋಗ ಸಲ್ಲಿಸಿದೆ. ಪ್ರಮುಖಾಂಶಗಳ ವರದಿ ಸಂಪುಟ ಸಭೆ ಮುಂದಿಡಲು ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆ ವರದಿ ತಯಾರಿಸಿದೆ. ಮುಂದಿನ ವರ್ಷದ ಸಚಿವ ಸಂಪುಟ ಸಭೆಯಲ್ಲಿ SEP ಅಂಗೀಕಾರ ಸಾಧ್ಯತೆ ಇದೆ. 
ಕಳೆದ ವರ್ಷದಿಂದಲೇ ರಾಜ್ಯದಲ್ಲಿ ಎಸ್​ಇಪಿ ಅನುಷ್ಠಾನಕ್ಕೆ ಬರಬೇಕಿತ್ತು. ಆದ್ರೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಲು ಈವರೆಗೂ ಸಾಧ್ಯವಾಗಿಲ್ಲ. ಇದ್ರಿಂದ ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮ ಓದುವ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. 

ಇನ್ನೂ ಏನೆಲ್ಲಾ ಪರಿಷ್ಕರಣೆ ಆಗಲಿದೆ ಅಂತಾ ನೋಡೋದಾದ್ರೆ..!
ಸರ್ಕಾರಿ, ಅನುದಾನಿತ ಶಾಲಾ - ಕಾಲೇಜಿನಲ್ಲಿ SEP ಕಡ್ಡಾಯ ಅಳವಡಿಕೆ. ಸರ್ಕಾರಿ & ಅನುದಾನಿತ ಶಾಲಾ ಕಾಲೇಜಿನಲ್ಲಿ NEP ಅಳವಡಿಸುವಂತಿಲ್ಲ. ICSC & CBSC ಶಾಲಾ - ಕಾಲೇಜುಗಳಿಗೆ ರಾಜ್ಯ ಪಠ್ಯಕ್ರಮಕ್ಕೆ ಒತ್ತಡ ಹೇರುವಂತಿಲ್ಲ. ICSC ಮತ್ತು CBSC ಉಳಿದಂತೆ ಎಲ್ಲಾ ಶಾಲೆಗಳಿಗೆ SEP ಕಡ್ಡಾಯಗೊಳಿಸುವುದು. ಈ ಹಿಂದಿನ ರಾಜ್ಯ ಪಠ್ಯಕ್ರಮದ ನಿಯಮಗಳೇ ಬಹುತೇಕ ಅನ್ವಯವಾಗಲಿದೆ. 
SEP ಪಠ್ಯಕ್ರಮ ಪದವಿ 3 ವರ್ಷ,  ಸ್ನಾತಕೋತ್ತರ 2 ವರ್ಷ,  ವೃತ್ತಿಪರ ಕೋರ್ಸ್ 4 ವರ್ಷ,  ಉನ್ನತ ಶಿಕ್ಷಣದಲ್ಲಿ ದ್ವಿಭಾಷಾ ಬೋಧನೆಗೆ ಒತ್ತು, ಶಾಲೆ ಬಿಟ್ಟ, ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಮುಕ್ತ ಶಾಲಾ ವ್ಯವಸ್ಥೆ ಮುಂತಾದ ವಿಷಗಳು ಒಟ್ಟುಗೂಡಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಇದು ಯಾವ ಮಟ್ಟಿಗಿನ ಸಕಾರಾತ್ಮಕ ಪರಿಣಾಮ ಬೀರುತ್ತೆ ಕಾದು ನೋಡಬೇಕಿದೆ.

Advertisment
SEP IMPLEMENTATION IN KARNATAKA
Advertisment
Advertisment
Advertisment