Advertisment

ರೈಲ್ವೇ ಇಲಾಖೆಯಲ್ಲಿ 22 ಸಾವಿರ ಗ್ರೂಪ್‌ ಡಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ: ಬೇಗನೇ ಅರ್ಜಿ ಸಲ್ಲಿಸಿ

ಭಾರತೀಯ ರೈಲ್ವೇ ಇಲಾಖೆಯಲ್ಲಿ 22 ಸಾವಿರ ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಏನೇನು ಅರ್ಹತೆಗಳು ಇರಬೇಕು? ಅರ್ಜಿ ಸಲ್ಲಿಸಲು ಯಾವಾಗ ಕೊನೆಯ ದಿನ? ಎಂಬ ಫುಲ್ ಡೀಟೈಲ್ಸ್ ಇಲ್ಲಿದೆ ಓದಿ.

author-image
Chandramohan
indian railway recruitment
Advertisment

ಗವರ್ನಮೆಂಟ್ ಜಾಬ್ ಕನಸು ಕಾಣ್ತಿರೋರಿಗೆ ಒಂದು ಬಂಪರ್ ನ್ಯೂಸ್! ಇಂಡಿಯನ್ ರೈಲ್ವೇಸ್ ಈಗ ದೇಶಾದ್ಯಂತ ಖಾಲಿ ಇರೋ 22,000ಕ್ಕೂ ಹೆಚ್ಚು ಗ್ರೂಪ್-ಡಿ ಹುದ್ದೆಗಳ ಭರ್ತಿಗೆ ಅಫಿಷಿಯಲ್ ನೋಟಿಫಿಕೇಶನ್ ರಿಲೀಸ್ ಮಾಡಿದೆ. ಕೇವಲ 10ನೇ ತರಗತಿ ಅಥವಾ ಐಟಿಐ ಮುಗಿಸಿರೋ ಸ್ಟೂಡೆಂಟ್ಸ್‌ಗೆ ಇದೊಂದು ಸುವರ್ಣ ಅವಕಾಶ. ಅಖಿಲ ಭಾರತ ಮಟ್ಟದಲ್ಲಿ ನಡೆಯೋ ಈ ರಿಕ್ರೂಟ್‌ಮೆಂಟ್ ಪ್ರೊಸೆಸ್‌ನಲ್ಲಿ ಆಯ್ಕೆಯಾಗೋ ಅಭ್ಯರ್ಥಿಗಳಿಗೆ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಜಾಬ್ ನೀಡಲಾಗುತ್ತೆ.
ಈ 22,000 ಹುದ್ದೆಗಳಲ್ಲಿ ಯಾವ್​ ಯಾವ ಪೋಸ್ಟ್​ಗಳು ಇವೆ ಅಂತಾ ನೋಡೋದಾದ್ರೆ!
11,000 ಟ್ರ್ಯಾಕ್ ಮೆಂಟೆನರ್ ಹುದ್ದೆಗಳಿವೆ. ಇದರ ಜೊತೆಗೆ 5,000 ಪಾಯಿಂಟ್ಸ್‌ಮನ್, 1,500 ಅಸಿಸ್ಟೆಂಟ್ ಸೈನ್ಸ್ ಅಂಡ್ ಟೆಕ್ನಾಲಜಿ, ಮತ್ತು ಸಾವಿರಕ್ಕೂ ಹೆಚ್ಚು ಸಿ ಅಂಡ್ ಡಬ್ಲ್ಯೂ ಅಸಿಸ್ಟೆಂಟ್ ಹುದ್ದೆಗಳನ್ನ ಭರ್ತಿ ಮಾಡಲಾಗ್ತಿದೆ. ಸೆಂಟ್ರಲ್ ಗೌರ್ನಮೆಂಟ್ ರೂಲ್ಸ್ ಪ್ರಕಾರ ನಿಮಗೆ ಸಂಬಳ ಮತ್ತು ಒಳ್ಳೆ ಭತ್ಯೆ ಅಂದ್ರೆ ಅಲೋಯನ್ಸ್ ಕೂಡ ಸಿಗುತ್ತೆ. ರೈಲ್ವೇ ಇಲಾಖೆಯಲ್ಲಿ ಪರ್ಮನೆಂಟ್ ಜಾಬ್ ಪಡ್ಕೊಳ್ಳೋಕೆ ಇದಕ್ಕಿಂತ ಒಳ್ಳೆ ಚಾನ್ಸ್ ಸಿಗೋದು ಕಷ್ಟ.
ಅಪ್ಲೈ ಮಾಡೋಕೆ ಎಲಿಜಿಬಲಿಟಿ ಏನು ಅಂತಾ ನೋಡೋದಾದ್ರೆ!
ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು ಅಥವಾ ಐಟಿಐ ಕಂಪ್ಲೀಟ್ ಮಾಡಿರಬೇಕು. ವಯೋಮಿತಿ ಬಗ್ಗೆ ಹೇಳ್ಬೇಕಂದ್ರೆ, ಕನಿಷ್ಠ 18 ವರ್ಷದಿಂದ ಗರಿಷ್ಠ 33 ವರ್ಷದವರೆಗೆ ಏಜ್ ಲಿಮಿಟ್ ಇರುತ್ತೆ. ಸರ್ಕಾರದ ನಿಯಮದಂತೆ ರಿಸರ್ವ್ಡ್ ಕೆಟಗರಿ ಸ್ಟೂಡೆಂಟ್ಸ್‌ಗೆ ವಯೋಮಿತಿಯಲ್ಲಿ ಸಡಿಲಿಕೆ ಅಂದ್ರೆ ಏಜ್ ರಿಲ್ಯಾಕ್ಸೇಷನ್ ಕೂಡ ಅಪ್ಲೈ ಆಗುತ್ತೆ. ಸೋ, ಏಜ್ ಲಿಮಿಟ್ ಒಳಗೆ ಇರೋ ಸ್ಟೂಡೆಂಟ್ಸ್ ಮಿಸ್ ಮಾಡದೆ ಅಪ್ಲೈ ಮಾಡಿ.
ಇನ್ನೂ ಸೆಲೆಕ್ಷನ್ ಪ್ರೊಸೆಸ್ ನಾಲ್ಕು ಮುಖ್ಯ ಹಂತಗಳಲ್ಲಿ ನಡೆಯುತ್ತೆ. ಮೊದಲನೇದಾಗಿ ಹಂತ-1 ಮತ್ತು ಹಂತ-2ರಲ್ಲಿ ಕಂಪ್ಯೂಟರ್ ಬೇಸ್ಡ್ ಪರೀಕ್ಷೆ ಅಂದ್ರೆ ಸಿಬಿಟಿ ನಡೆಯುತ್ತೆ. ಇದನ್ನ ಕ್ಲಿಯರ್ ಮಾಡಿದ ಮೇಲೆ ನಿಮ್ಮ ಡಾಕ್ಯುಮೆಂಟ್ ವೆರಿಫಿಕೇಶನ್ ಮತ್ತು ಮೆಡಿಕಲ್ ಎಕ್ಸಾಮಿನೇಷನ್ ಇರುತ್ತೆ. ಈ ಎಕ್ಸಾಮ್ಸ್ ಕ್ಲಿಯರ್ ಮಾಡೋಕೆ ಈಗಿನಿಂದಲೇ ಸರಿಯಾದ ಸ್ಟಡಿ ಪ್ಲಾನ್ ಮಾಡ್ಕೊಂಡು ಪ್ರಿಪರೇಷನ್ ಸ್ಟಾರ್ಟ್ ಮಾಡೋದು ತುಂಬಾ ಇಂಪಾರ್ಟೆಂಟ್.
ಇಂಟರೆಸ್ಟ್ ಇರೋ ಸ್ಟೂಡೆಂಟ್ಸ್ indianrailways.gov.in ಅಫಿಷಿಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಕೆ ಜನವರಿ 31, 2026 ರಿಂದಲೇ ಶುರುವಾಗಿದ್ದು, ಮಾರ್ಚ್ 2, 2026 ಅರ್ಜಿ ಸಲ್ಲಿಸೋಕೆ ಲಾಸ್ಟ್ ಡೇಟ್ ಆಗಿದೆ. ನೋಟಿಫಿಕೇಶನ್ ಫುಲ್ ಓದಿ, ನಿಮ್ಮ ಇತ್ತೀಚಿನ ಫೋಟೋ ಮತ್ತು ಸಿಗ್ನೇಚರ್ ಅಪ್‌ಲೋಡ್ ಮಾಡಿ ಫಾರ್ಮ್ ಸಬ್‌ಮಿಟ್ ಮಾಡಿ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment

railway, railway jobs, jobs, Central government jobs
Advertisment
Advertisment
Advertisment