/newsfirstlive-kannada/media/post_attachments/wp-content/uploads/2024/04/CET.jpg)
ಸಿಇಟಿ ಪರೀಕ್ಷಾ ದಿನಾಂಕ ಘೋಷಣೆ
2026 ಸಿಇಟಿ ಪ್ರವೇಶ ಪರೀಕ್ಷೆ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ಕಾಮನ್ ಎಂಟ್ರೇನ್ಸ್ ಪರೀಕ್ಷೆ ನಡೆಯಲಿದೆ. ಏಪ್ರಿಲ್ ತಿಂಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಏಪ್ರಿಲ್ 23, 24ರಂದು ಎರಡು ದಿನ ಪರೀಕ್ಷೆ ನಡೆಯಲಿದೆ. ಏಪ್ರಿಲ್ 23ನೇ ತಾರೀಖು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, ಏಪ್ರಿಲ್ 24ನೇ ತಾರೀಖು ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಪ್ರತಿ ವಿಷಯಕ್ಕೂ 60 ಅಂಕಗಳು. ಜನವರಿ 17 ರಂದು ಆನ್ಲೈನ್ ಅಪ್ಲಿಕೇಶನ್ ಸಲ್ಲಿಕೆ ಆರಂಭವಾಗುತ್ತೆ. ಉನ್ನತ ಶಿಕ್ಷಣ & ವೈದ್ಯಕೀಯ ಶಿಕ್ಷಣ ಸಚಿವರಿಂದ ಸಿಇಟಿ ದಿಕ್ಸೂಚಿ ಬಿಡುಗಡೆಯಾಗಿದೆ. ಡಾ. ಎಂ.ಸಿ.ಸುಧಾಕರ್ ಹಾಗೂ ಡಾ.ಶರಣ ಪ್ರಕಾಶ ಪಾಟೀಲರಿಂದ ಸಿಇಟಿ ದಿಕ್ಸೂಚಿ ಬಿಡುಗಡೆಯಾಗಿದೆ.
ವಿಧ್ಯಾರ್ಥಿಗಳಿಗೆ ಸಿಇಟಿ ದಿಕ್ಸೂಚಿಯಿಂದ CET ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಈ ದಿಕ್ಸೂಚಿ ನೆರವಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳ ಗೊಂದಲ ನಿವಾರಣೆಗೆ ಇದು ದಿಟ್ಟ ಹೆಜ್ಜೆಯಾಗಿದೆ . KEA ಕಚೇರಿಯ ಆಧುನೀಕರಣ, ಸಭಾಂಗಣಗಳ ಉದ್ಘಾಟನೆ ಕೂಡ ಆಗುತ್ತಿದೆ . ಇದು ಒಂದು ರೀತಿಯ ಹೊಸ ಪ್ರಯತ್ನ ಅಂತ ಹೇಳಬಹುದು. ಈಗಾಗಲೇ ಸಾಮಾಜಿಕ ಜಾಲತಾಣ, ಚಾಟ್ ಬುಕ್ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ. ಆದರೂ ವಿಧ್ಯಾರ್ಥಿಗಳು ಕೌನ್ಸೆಲಿಂಗ್ ನ ವಿವಿಧ ಹಂತಗಳಲ್ಲಿ ತಪ್ಪು ಮಾಡುತ್ತಿದ್ದರು. 3.75 ಲಕ್ಷ ದಿಕ್ಸೂಚಿ ಪ್ರತಿಗಳನ್ನು ಮುದ್ರಿಸಿ ಅಗತ್ಯವಿರುವ ವಿಧ್ಯಾರ್ಥಿಗಳಿಗೆ ತಲುಪಿಸುತ್ತೇವೆ. CET ಅನ್ನು 2026 ಏಪ್ರಿಲ್ 23 ಮತ್ತು 24 ರಂದು ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಹೊರನಾಡು, ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಏಪ್ರಿಲ್ 22 ರಂದು ಕನ್ನಡ ಭಾಷಾ ಪರೀಕ್ಷೆ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
- KRIES ಆರನೇ ತರಗತಿಯ ಪ್ರವೇಶ ಪರೀಕ್ಷೆ ಮಾರ್ಚ್ 1, MBA, MCA
- PGCET ಮೇ 14
- M.E/M.Tech PGCET ಮೇ 23
- ಲ್ಯಾಟರಲ್ ಎಂಟ್ರಿ ಇಂಜಿನಿಯರಿಂಗ್ ಕೋರ್ಸ್ DCET ಮೇ 23
- MSc ನರ್ಸಿಂಗ್, MPT, MSc AHS ಜುಲೈ 18
- KSET ಅಕ್ಟೋಬರ್ 11
- M - Pharma & M Pharma D 21 ನವೆಂಬರ್ ನಡೆಯುತ್ತದೆ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us