/newsfirstlive-kannada/media/media_files/2026/02/12/bharat-bodhan-ai-conclave-1-2026-02-12-15-04-49.jpg)
ಇಂದು ನಾವು ಎಲ್ಲೇ ಹೋದ್ರು ಕೇಳಿಬರ್ತಿರೋ ಒಂದೇ ಹೆಸರು ಎಐ ಅಂದ್ರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಎಕ್ಸ್​ಪರ್ಟ್ಸ್ ಹೇಳ್ತಿರೋ ಪ್ರಕಾರ ಮುಂಬರುವ ದಶಕಗಳು ಕಂಪ್ಲೀಟ್ ಆಗಿ ಎಐ ಯುಗ ಆಗಿರಲಿವೆ. ಇದಕ್ಕೆ ಮೊದಲು ಬಂದ ಇಂಟರ್ ನೆಟ್ ಕ್ರಾಂತಿಗಿಂತಲೂ ಜಾಸ್ತಿ ಇಂಪ್ಯಾಕ್ಟ್ ಮಾಡೋ ಶಕ್ತಿ ಇದೆ. ಎಜುಕೇಶನ್, ಹೆಲ್ತ್ ಕೇರ್ ಮತ್ತು ಅಗ್ರಿಕಲ್ಚರ್ ಹೀಗೆ ಎಲ್ಲಾ ಫೀಲ್ಡ್‌ನಲ್ಲೂ ಎಐ ದೊಡ್ಡ ಚೇಂಜಸ್ ತರುತ್ತಿದೆ. ಈ ಕಾರಣಕ್ಕೆ ಪ್ರತಿಯೊಬ್ಬ ಸ್ಟೂಡೆಂಟ್ ಕೂಡ ಎಐ ಬಗ್ಗೆ ಅಪ್‌ಡೇಟ್ ಆಗಿರೋದು ತುಂಬಾ ಇಂಪಾರ್ಟೆಂಟ್.
ಇದೇ ನಿಟ್ಟಿನಲ್ಲಿ ಭಾರತ ಸರ್ಕಾರ ಈಗ ಎಜುಕೇಶನ್ ಸಿಸ್ಟಮ್‌ನಲ್ಲಿ ಎಐ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳೋಕೆ ದೊಡ್ಡ ಹೆಜ್ಜೆ ಇಟ್ಟಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ‘ಭಾರತ್ ಬೋಧನ್ ಎಐ ಕಾನ್​ಕ್ಲೇವ್​ 2026’ ಅನ್ನೋ ನ್ಯಾಷನಲ್ ಲೆವೆಲ್ ಸಮಾವೇಶವನ್ನ ಆಯೋಜಿಸ್ತಾ ಇದೆ. ಫೆಬ್ರವರಿ 12 ಮತ್ತು 13ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಈ ಪ್ರೋಗ್ರಾಂ ನಡೆಯಲಿದ್ದು, ಇದು ಫೆಬ್ರವರಿ 16ರಿಂದ ಶುರುವಾಗೋ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಗೆ ಒಂದು ಪೂರ್ವಭಾವಿ ಕಾರ್ಯಕ್ರಮವಾಗಿದೆ.
ಈ ಕಾನ್​ಕ್ಲೇವ್​ನಲ್ಲಿ ದೇಶದ ಮೂಲೆ ಮೂಲೆಯಿಂದ ಎಜುಕೇಶನ್ ಎಕ್ಸ್​ಪರ್ಟ್ಸ್​, ರಿಸರ್ಚರ್ಸ್, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸ್ತಾರೆ. ಇಲ್ಲಿನ ಮೇನ್ ಅಜೆಂಡಾ ಅಂದ್ರೆ ‘ಎಐ-ಎನೇಬಲ್ಡ್ ಎಜುಕೇಶನ್’ ಬಗ್ಗೆ ಒಂದು ಸ್ಟ್ರಾಟಜಿ ರೆಡಿ ಮಾಡೋದು. ಅಂದ್ರೆ ಸ್ಟೂಡೆಂಟ್ಸ್‌ಗೆ ಇನ್ನು ಮುಂದೆ ಎಐ ಮೂಲಕ ಸ್ಮಾರ್ಟ್ ಆಗಿ ಪಾಠ ಕಲಿಸೋದು ಹೇಗೆ ಮತ್ತು ಎಜುಕೇಶನ್ ಫೀಲ್ಡ್‌ನಲ್ಲಿ ಟೆಕ್ನಾಲಜಿಯನ್ನ ಹೇಗೆ ಸ್ಕೇಲಬಲ್ ಮಾಡಬಹುದು ಅನ್ನೋದರ ಬಗ್ಗೆ ಇಲ್ಲಿ ಡಿಸ್ಕಷನ್ ನಡೆಯುತ್ತೆ.
ಸ್ಟೂಡೆಂಟ್ಸ್ ಪಾಯಿಂಟ್ ಆಫ್ ವ್ಯೂನಿಂದ ನೋಡೋದಾದ್ರೆ, ಇದು ಅವರ ಫ್ಯೂಚರ್ ಲರ್ನಿಂಗ್ ಸ್ಟೈಲ್ ಅನ್ನೇ ಬದಲಾಯಿಸಲಿದೆ. ನ್ಯೂ ಎಜುಕೇಶನ್ ಪಾಲಿಸಿ ಅಥವಾ ಎನ್‌ಇಪಿ 2020ರ ಪ್ರಕಾರ ಡಿಜಿಟಲ್ ಲರ್ನಿಂಗ್‌ಗೆ ತುಂಬಾ ಇಂಪಾರ್ಟೆನ್ಸ್ ನೀಡಲಾಗ್ತಿದೆ. ಎಐ ಸಹಾಯದಿಂದ ಪ್ರತಿಯೊಬ್ಬ ಸ್ಟೂಡೆಂಟ್‌ಗೆ ಅವರ ಕೆಪಾಸಿಟಿಗೆ ತಕ್ಕಂತೆ ಪರ್ಸನಲೈಸ್ಡ್ ಲರ್ನಿಂಗ್ ಎಕ್ಸ್‌ಪೀರಿಯನ್ಸ್ ಸಿಗುತ್ತೆ. ಇದು ಕೇವಲ ಸಿಟಿಯಲ್ಲಿರೋ ಸ್ಟೂಡೆಂಟ್ಸ್‌ಗೆ ಮಾತ್ರವಲ್ಲದೆ, ಹಳ್ಳಿಯಲ್ಲಿರೋ ಸ್ಟೂಡೆಂಟ್ಸ್‌ಗೂ ಕ್ವಾಲಿಟಿ ಎಜುಕೇಶನ್ ತಲುಪಿಸೋಕೆ ಹೆಲ್ಪ್ ಮಾಡುತ್ತೆ.
ಒಟ್ಟಿನಲ್ಲಿ, ‘ಭಾರತ್ ಬೋಧನ್ ಎಐ ಕಾನ್​ಕ್ಲೇವ್​’ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ತರೋದು ಖಂಡಿತ. ಎಐ ಸಹಾಯದಿಂದ ಪ್ರತಿಯೊಬ್ಬ ಸ್ಟೂಡೆಂಟ್‌ಗೂ ಸುಲಭವಾಗಿ ಮತ್ತು ಸಮಗ್ರವಾಗಿ ಶಿಕ್ಷಣ ಸಿಗುವಂತೆ ಮಾಡೋದೇ ಸರ್ಕಾರದ ಅಂತಿಮ ಗುರಿಯಾಗಿದೆ. ಸೋ ಸ್ಟೂಡೆಂಟ್ಸ್, ನೀವೆಲ್ಲರೂ ಈ ಹೊಸ ಟೆಕ್ನಾಲಜಿ ಯುಗಕ್ಕೆ ರೆಡಿಯಾಗಿ.
/filters:format(webp)/newsfirstlive-kannada/media/media_files/2026/02/12/bharat-bodhan-ai-conclave-2026-02-12-15-05-00.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us