/newsfirstlive-kannada/media/media_files/2026/02/05/aircraft-maintenance-engineer-2-2026-02-05-15-14-07.jpg)
ನಾವು ಈಗ ಏವಿಯೇಷನ್ ಸೆಕ್ಟರ್‌ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರೋ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಅಥವಾ ಎಎಂಇ ಕರಿಯರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಎಎಂಇ ಅನ್ನೋದು ಒಂದು ಲೈಸೆನ್ಸ್​ಡ್​​ ಪ್ರೊಫೆಷನಲ್ ಪ್ರೋಗ್ರಾಂ ಆಗಿದ್ದು, ವಿಮಾನಗಳ ಸೇಫ್ಟಿ, ಸರ್ವಿಸಿಂಗ್ ಮತ್ತು ರಿಪೇರಿ ಮಾಡುವುದು ಇವರ ಮುಖ್ಯ ಕೆಲಸವಾಗಿರುತ್ತದೆ. ನೀವು ಡಿಜಿಸಿಎ ಇಂದ ಲೈಸೆನ್ಸ್ ಪಡೆದರೆ, ವಿಮಾನಗಳು ಹಾರಾಟ ನಡೆಸುವ ಮೊದಲು ಅವುಗಳ ಫಿಟ್‌ನೆಸ್ ಸರ್ಟಿಫೈ ಮಾಡುವ ದೊಡ್ಡ ಜವಾಬ್ದಾರಿ ನಿಮ್ಮದಾಗಿರುತ್ತದೆ.
ಇನ್ನೂ ಕೋರ್ಸ್​ ಮಾಡಲು ಅರ್ಹತೆ ಏನು ಅಂತಾ ನೋಡೋದಾದ್ರೆ!
ಈ ಕರಿಯರ್ ಶುರು ಮಾಡಲು ನೀವು ಪಿಯುಸಿಯಲ್ಲಿ (10+2) ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾಥ್ಸ್ (PCM) ವಿಷಯಗಳನ್ನು ಓದಿರಬೇಕು. ಅಷ್ಟೇ ಅಲ್ಲದೆ, ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಮಾಡಿದವರು ಕೂಡ ಇದಕ್ಕೆ ಎಲಿಜಿಬಲ್ ಇರುತ್ತಾರೆ. ಇನ್ನು ಮೆಡಿಕಲ್ ಫಿಟ್‌ನೆಸ್ ವಿಷಯಕ್ಕೆ ಬಂದರೆ, ನಿಮಗೆ ಕಲರ್ ಬ್ಲೈಂಡ್‌ನೆಸ್ ಇರಬಾರದು ಮತ್ತು ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು. ಸಾಮಾನ್ಯವಾಗಿ 16 ರಿಂದ 28 ವರ್ಷದ ಒಳಗಿನವರು ಈ ಕೋರ್ಸ್‌ಗೆ ಅಪ್ಲೈ ಮಾಡಬಹುದು.
ಅಡ್ಮಿಷನ್ ಪ್ರೊಸೆಸ್ ಬಗ್ಗೆ ಹೇಳುವುದಾದರೆ, ನೀವು ಎಎಂಇ ಸಿಇಇನಂತಹ ನ್ಯಾಷನಲ್ ಲೆವೆಲ್ ಎಂಟ್ರನ್ಸ್ ಎಕ್ಸಾಮ್ ಬರೆಯಬೇಕಾಗುತ್ತದೆ. ಈ ಎಕ್ಸಾಮ್‌ನಲ್ಲಿ ನೀವು ಪಡೆಯುವ ಱಂಕ್​ ಆಧಾರದ ಮೇಲೆ ನಿಮಗೆ ಟಾಪ್ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ. ಕೆಲವು ಇನ್​ಸ್ಟಿಟ್ಯೂಟ್‌ಗಳು ಮೆರಿಟ್ ಮೇಲೆ 100% ವರೆಗೂ ಸ್ಕಾಲರ್‌ಶಿಪ್ ಕೂಡ ನೀಡುತ್ತವೆ. ಅಡ್ಮಿಷನ್ ಪಡೆಯುವ ಮೊದಲು ಆ ಕಾಲೇಜು ಡಿಜಿಸಿಎ ಯಿಂದ ಅಪ್ರೂವ್ ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ
/filters:format(webp)/newsfirstlive-kannada/media/media_files/2026/02/05/aircraft-maintenance-engineer-2026-02-05-15-15-21.jpg)
ಕೋರ್ಸ್ ಅವಧಿ ಮತ್ತು ಫೀಸ್ ಬಗ್ಗೆ ನೋಡುವುದಾದರೆ, ಎಎಂಇ ಪ್ರೋಗ್ರಾಂ ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷ ಇರುತ್ತದೆ. ಇದರಲ್ಲಿ ಥಿಯರಿ ಜೊತೆಗೆ ಲೈವ್ ಏರ್‌ಕ್ರಾಫ್ಟ್ ಮೇಲೆ ಪ್ರಾಕ್ಟಿಕಲ್ ಟ್ರೈನಿಂಗ್ ಕೂಡ ಇರುತ್ತದೆ. ಈ ಕೋರ್ಸ್‌ನ ಒಟ್ಟು ಫೀಸ್ ಸುಮಾರು 3 ಲಕ್ಷದಿಂದ 6 ಲಕ್ಷ ರೂಪಾಯಿಗಳವರೆಗೆ ಇರಬಹುದು (ಇದು ಕಾಲೇಜು ಮತ್ತು ಸೀಟಿಗೆ ತಕ್ಕಂತೆ ಬದಲಾಗುತ್ತದೆ). ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಈ ಕೋರ್ಸ್ ನೀಡುವ ಉತ್ತಮ ಏವಿಯೇಷನ್ ಅಕಾಡೆಮಿಗಳಿವೆ.
/filters:format(webp)/newsfirstlive-kannada/media/media_files/2026/02/05/aircraft-maintenance-engineer-1-2026-02-05-15-16-19.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us