ರಾಜ್ಯ ಸರ್ಕಾರದಿಂದ 2 ಸಾವಿರ ಬೋಧಕ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್‌: ಎಲ್ಲೆಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತೆ?

ರಾಜ್ಯ ಸರ್ಕಾರ 2 ಸಾವಿರ ಬೋಧಕ ಹುದ್ದೆ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ಈ ನೇಮಕಾತಿ ಮಾಡಿಕೊಳ್ಳಲಾಗುತ್ತೆ. ಪಾಲಿಟೆಕ್ನಿಕ್ ಕಾಲೇಜು, ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ನೇಮಕಾತಿ ಮಾಡಿಕೊಳ್ಳಲಾಗುತ್ತೆ.

author-image
Chandramohan
NHAIನಿಂದ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
Advertisment


ಗವರ್ನಮೆಂಟ್ ಜಾಬ್‌ಗಾಗಿ ವೇಟ್ ಮಾಡ್ತಿರೋ ಎಲ್ಲಾ ಆಕಾಂಕ್ಷಿಗಳಿಗೆ ಒಂದು ಬಿಗ್ ನ್ಯೂಸ್ ಇದೆ. ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಈಗ ಬರೋಬ್ಬರಿ 2000 ಬೋಧಕ ಹುದ್ದೆಗಳನ್ನ ಭರ್ತಿ ಮಾಡೋಕೆ ಅಫಿಷಿಯಲ್ ಆಗಿ ಪರ್ಮಿಷನ್ ಕೊಟ್ಟಿದೆ. ಹೈಯರ್ ಎಜುಕೇಶನ್ ಡಿಪಾರ್ಟ್‌ಮೆಂಟ್‌ನಲ್ಲಿ ಖಾಲಿ ಇರೋ ಈ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಈಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ವರ್ಷದ ಬಜೆಟ್‌ನಲ್ಲಿ ಅನೌನ್ಸ್ ಮಾಡಿದಂತೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಳಿಸಿದ್ದ ಪ್ರಪೋಸಲ್‌ಗೆ ಈಗ ಅನುಮೋದನೆ ಸಿಕ್ಕಿರೋದು ತುಂಬಾ ಇಂಪಾರ್ಟೆಂಟ್ ಅಪ್‌ಡೇಟ್ ಆಗಿದೆ.
ಈ 2000 ಜಾಬ್ಸ್ ಎಲ್ಲೆಲ್ಲಿ ಇವೆ ಅಂತ ಡೀಟೇಲ್ ಆಗಿ ನೋಡೋದಾದ್ರೆ, ಅತಿ ಹೆಚ್ಚು ವೇಕೆನ್ಸಿಗಳು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿವೆ. ಇಲ್ಲಿ ಒಟ್ಟು 941 ಲೆಕ್ಚರರ್ ಹುದ್ದೆಗಳನ್ನ ಭರ್ತಿ ಮಾಡಲಾಗ್ತಿದೆ. ಅದೇ ರೀತಿ, ಗವರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜುಗಳಲ್ಲಿ 825 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಮೂಲಕ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿರೋ ಬೋಧಕರ ಕೊರತೆಯನ್ನ ನೀಗಿಸೋಕೆ ಗವರ್ನಮೆಂಟ್ ಪ್ಲ್ಯಾನ್ ಮಾಡಿದೆ.
ಇನ್ನು ಟೆಕ್ನಿಕಲ್ ಎಜುಕೇಶನ್ ಸೈಡ್ ನೋಡೋದಾದ್ರೆ, ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 186 ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್‌ಗಳನ್ನ ಫಿಲ್ ಮಾಡಲಾಗ್ತಿದೆ. ಇದರ ಜೊತೆಗೆ ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ಅಂದ್ರೆ UVCEಯಲ್ಲಿ 47 ಬೋಧಕ ಹುದ್ದೆಗಳ ಭರ್ತಿಗೂ ಅವಕಾಶ ಸಿಕ್ಕಿದೆ. ಒಟ್ಟು 2000 ಹುದ್ದೆಗಳ ಈ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ ಅಂತ ಇಲಾಖೆಯ ಉಪ ಕಾರ್ಯದರ್ಶಿಗಳು ತಮ್ಮ ಆರ್ಡರ್‌ನಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಹುದ್ದೆಗಳನ್ನ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಡೈರೆಕ್ಟ್ ರಿಕ್ರೂಟ್‌ಮೆಂಟ್ ಮೂಲಕವೇ ಭರ್ತಿ ಮಾಡಬೇಕು ಅಂತ ಕಂಡೀಷನ್ ಹಾಕಲಾಗಿದೆ. ಅಂದ್ರೆ ನಿಗದಿತ ಎಜುಕೇಶನಲ್ ಕ್ವಾಲಿಫಿಕೇಶನ್ ಇರೋರು ನೇರ ನೇಮಕಾತಿ ಮೂಲಕ ಈ ಜಾಬ್ ಪಡೆಯಬಹುದು. ಜೊತೆಗೆ ಕಲ್ಯಾಣ ಕರ್ನಾಟಕ ರೀಜನ್‌ಗೆ ಇರೋ ರಿಸರ್ವೇಶನ್ ರೂಲ್ಸ್‌ಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ, ನಿಯಮಾನುಸಾರ ಹುದ್ದೆಗಳನ್ನ ವರ್ಗೀಕರಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ.
ಕೊನೆಯದಾಗಿ, ಯುವಿಸಿಇ ವಿಚಾರದಲ್ಲಿ ಗವರ್ನಮೆಂಟ್ ಒಂದು ಸಣ್ಣ ಕಂಡೀಷನ್ ಹಾಕಿದೆ. ಅಲ್ಲಿರೋ 47 ಹುದ್ದೆಗಳನ್ನ ಫಿಲ್ ಮಾಡೋಕು ಮುನ್ನ, ಈಗಾಗಲೇ ವಿವಿಯಲ್ಲಿ ಖಾಲಿ ಇರೋ 72 ಹುದ್ದೆಗಳ ಬಗ್ಗೆ ಕಂಪ್ಲೀಟ್ ಇನ್ಫಾರ್ಮೇಷನ್ ಮತ್ತು ಡಾಕ್ಯುಮೆಂಟ್ಸ್‌ ಅನ್ನು ಗವರ್ನಮೆಂಟ್‌ಗೆ ಸಬ್‌ಮಿಟ್ ಮಾಡಬೇಕು. ಒಟ್ಟಿನಲ್ಲಿ ಟೀಚಿಂಗ್ ಫೀಲ್ಡ್‌ನಲ್ಲಿ ಕರಿಯರ್ ಮಾಡಬೇಕು ಅನ್ಕೊಂಡಿರೋರಿಗೆ ಇದು ಸುವರ್ಣ ಅವಕಾಶ. ಸೋ, ನಿಮ್ಮ ಪ್ರಿಪರೇಶನ್ ಈಗಲೇ ಸ್ಟಾರ್ಟ್ ಮಾಡಿ .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

GOVERNMENT LECTURERS RECRUITMENT GOVT JOB RECRUITMENT
Advertisment