Advertisment

ಬಾಲಕನ ಕತೆ ಕೇಳಿ ಮರುಗಿದ ಸುರೇಶ್ ಕುಮಾರ್.. ಬೆಂಗಳೂರಲ್ಲಿ ಹೃದಯ ಮಿಡಿದ ಸ್ಟೋರಿ..!

ಮಾಜಿ ಸಚಿವ ಸುರೇಶ್ ಕುಮಾರ್ ಅವರು ವಾರ್ಡ್​ ಭೇಟಿ ವೇಳೆ ಬಾಲಕನೊಬ್ಬನ ಕತೆ ಕೇಳಿ ಮರುಗಿದ್ದಾರೆ. ಇದೀಗ ಪುಟಾಣಿ ಬಾಲಕನಿಗೆ ಓದಿಸುವ ಭರವಸೆ ನೀಡಿದ್ದು, ಬಡತನದಲ್ಲಿದ್ದ ಕುಟುಂಬಕ್ಕೆ ಹೊಸ ಆಸರೆ ಸಿಕ್ಕಂತಾಗಿದೆ..

author-image
Ganesh Kerekuli
Updated On
Suresh kumar
Advertisment

ಬೆಂಗಳೂರು: ಮಾಜಿ ಸಚಿವ ಸುರೇಶ್ ಕುಮಾರ್ (Suresh Kumar) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೃದಯ ಮಿಡಿಯುವ ಸ್ಟೋರಿಗಳನ್ನು ಹಂಚಿಕೊಳ್ಳುತ್ತಾರೆ. ಅದೆಷ್ಟೋ ಬಡ ಜನರ ಸಂಕಷ್ಟಕ್ಕೆ ಮರುಗಿರುವ ಅವರು, ತಮ್ಮ ಕೈಲಾದ ಸಹಾಯವನ್ನೂ ಮಾಡಿದ್ದಾರೆ. ಅಂತೆಯೇ ಇತ್ತೀಚೆಗೆ ಬಡತನದಲ್ಲಿರುವ ಬಾಲಕನೊಬ್ಬ ತನ್ನ ಕುಟುಂಬದ ನೆರವಿಗೆ ಹೇಗೆ ಸಹಾಯ ಮಾಡ್ತಿದ್ದಾನೆ ಅನ್ನೋದರ ಕುರಿತ ಇಂಟ್ರೆಸ್ಟಿಂಗ್ ವಿಚಾರವನ್ನು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Advertisment

ಪ್ರಸ್ತುತ ಸುರೇಶ್ ಕುಮಾರ್​ ಅವರು ‘ದಿನಕ್ಕೊಂದು ವಾರ್ಡ್ ನಡಿಗೆ’ ಎಂಬ ಸಂಕಲ್ಪ ತೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಜಾಜಿನಗರ ಕ್ಷೇತ್ರದಲ್ಲಿ ಬರುವ ಪ್ರತಿ ವಾರ್ಡ್​ಗಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಆಲಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಎರಡೂ ಮೂರು ದಿನಗಳ ಹಿಂದೆ, ವಾರ್ಡ್​ ಭೇಟಿ ವೇಳೆ ಕಲಬುರಗಿ ಮೂಲದ ಚರಣ್ ಎಂಬ ಬಾಲಕನೊಬ್ಬ ಶಾಸಕರ ಗಮನ ಸೆಳೆದಿದ್ದಾನೆ. 

ಇದನ್ನೂ ಓದಿ: ಹೈಕಮಾಂಡ್ ಆಗು ಅಂದರೆ..’ ಉಪಮುಖ್ಯಮಂತ್ರಿ ಆಗುವ ಕನಸಿನ ಬಗ್ಗೆ ಜಮೀರ್ ಸ್ಫೋಟಕ ಹೇಳಿಕೆ

ಬಾಲಕನ ನೋಡಿದ ಶಾಸಕರು ಕರೆದು ಮಾತನ್ನಾಡಿಸಿದ್ದಾರೆ. ಬಳಿಕ ಆತನ ಬಗ್ಗೆ ವಿಚಾರಿಸಿ, ಓದಿಸುವ ಭರವಸೆ ನೀಡಿದ್ದಾರೆ. ಬಾಲಕ ತಮ್ಮ ಕುಟುಂಬಕ್ಕಾಗಿ, ಓದಿಗಾಗಿ ಏನು ಮಾಡುತ್ತಿದ್ದ ಅನ್ನೋ ವಿವವರವನ್ನು ಸ್ವತಃ ಸುರೇಶ್ ಕುಮಾರ್ ಅವರೇ ವಿವರಿಸಿದ್ದು ಹೀಗೆ..  

Advertisment

ಇಂದು ಬೆಳಗ್ಗೆ  #ದಿನಕ್ಕೊಂದು_ವಾರ್ಡ್_ನಡಿಗೆ ಸಂದರ್ಭದಲ್ಲಿ  ಬಸವೇಶ್ವರನಗರದ ರಸ್ತೆಯೊಂದರಲ್ಲಿ ಈ ಬಾಲಕ ಬೇಟಿಯಾದೆ. ಬಹಳ ಚುರುಕಾಗಿದ್ದ. ಮಂಜುನಾಥ ನಗರದ ಸಿದ್ದಗಂಗಾ ಶಾಲೆಯಲ್ಲಿ 6ನೇಯ ತರಗತಿಯಲ್ಲಿ ಓದುತ್ತಿರುವ ಈ ಬಾಲಕನ ಹೆಸರು ಚರಣ್. ಅವನ ಹೆಗಲ ಮೇಲೆ ದೊಡ್ಡ ಚೀಲವಿದ್ದದ್ದನ್ನು ಗಮನಿಸಿ ಮಾತನಾಡಬೇಕು ಎನಿಸಿತು.

ಪ್ರತಿ ದಿನ ಮನೆ ಮನೆಗೆ ಹಾಲಿನ ಪ್ಯಾಕೆಟ್ ವಿತರಿಸಿ ತಿಂಗಳಿಗೆ ಒಂದು ಸಾವಿರ ರೂಪಾಯಿ ದುಡಿದು ಮನೆಗೆ ಕೊಡುತ್ತಿದ್ದಾನೆ. ಈ ವಯಸ್ಸಿನಲ್ಲಿ ಈ ಕೆಲಸ ಮಾಡುತ್ತಿರುವುದು ಏಕೆ ಎಂದು ಕೇಳಿದಾಗ ಕುಟುಂಬದ ಸಮಸ್ಯೆಯೊಂದನ್ನು ನನಗೆ ತಿಳಿಸಿದ ಆ ಬಾಲಕ. 

ಮೂಲತಃ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕುಟುಂಬಕ್ಕೆ ಸೇರಿದವನು ತಂದೆ ಗಾರೆ ಕೆಲಸ ಮಾಡುತ್ತಾರೆ. ನಮ್ಮ ಕಾರ್ಯಕರ್ತರಿಗೆ ಈ ತಕ್ಷಣವೇ ಅವರ ಮನೆಗೆ ಹೋಗಿ ಅವರ ಕುಟುಂಬದ ಪರಿಸ್ಥಿತಿ ಅವಲೋಕಿಸಿ ಏನು ತುರ್ತು ಸಹಾಯ ಬೇಕು ಎಂದು ವಿಚಾರಿಸಿ ನನಗೆ ತಿಳಿಸಬೇಕೆಂದು, ನಂತರ ಸೂಕ್ತ ವ್ಯವಸ್ಥೆ ಮಾಡುತ್ತೇನೆಂದು ತಿಳಿಸಿದ್ದೇನೆ. ಬಾಲಕ ಚರಣ್​ನ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.

✍ಸುರೇಶ್ ಕುಮಾರ್, ಮಾಜಿ ಸಚಿವ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Suresh Kumar
Advertisment
Advertisment
Advertisment