/newsfirstlive-kannada/media/media_files/2026/01/29/big-tech-company-n-start-up-company-1-2026-01-29-16-49-17.jpg)
ಇಂದಿನ ಟೆಕ್ನಿಕಲ್ ಯುಗದಲ್ಲಿ ಜಾಬ್ ಆಯ್ಕೆ ಮಾಡುವಾಗ ಯುವಕರ ಮುಂದೆ ಎರಡು ಪ್ರಮುಖ ಆಪ್ಷನ್‌ಗಳು ಕಾಣಿಸುತ್ತವೆ. ಒಂದೆಡೆ ಬಿಗ್ ಟೆಕ್ ಕಂಪನಿಗಳು, ಮತ್ತೊಂದೆಡೆ ಸ್ಟಾರ್ಟ್‌ಅಪ್ ಸಂಸ್ಥೆಗಳು. ಬಿಗ್ ಟೆಕ್ ಕಂಪನಿಗಳು ಸ್ಟೇಬಲ್ ಜಾಬ್, ಹೈ ಸ್ಯಾಲರಿ ಮತ್ತು ಸೆಟಲ್ಡ್​​ ಲೈಫ್ ಸ್ಟೈಲ್ ನೀಡುತ್ತವೆ. ಇತ್ತ ಸ್ಟಾರ್ಟ್‌ಅಪ್‌ಗಳು ಇನೊವೇಷನ್, ಫಾಸ್ಟ್ ಲರ್ನಿಂಗ್ ಮತ್ತು ನ್ಯೂ ಥಿಂಗ್ಸ್ ಬಿಲ್ಡ್ ಮಾಡುವ ಎಕ್ಸೈಟ್‌ಮೆಂಟ್ ಕೊಡುತ್ತವೆ. ಹೀಗಿರುವಾಗ ಯಾವ ಜಾಬ್ ನಿಮ್ಮ ಕ್ಯಾರಿಯರ್‌ಗೆ ಸೂಕ್ತ? ಈ ಡಿಸಿಷನ್ ನಿಮ್ಮ ಲೈಫ್‌ನನ್ನೇ ಚೇಂಜ್ ಮಾಡಬಲ್ಲದು. ಆದ್ದರಿಂದ ಜಾಬ್ ಅಕ್ಸೆಪ್ಟ್ ಮಾಡುವ ಮೊದಲು ಪರಿಗಣಿಸಬೇಕಾದ ಇಂಪಾರ್ಟೆಂಟ್ ಪಾಯಿಂಟ್‌ಗಳು ಯಾವು ಅಂತಾ ಹೇಳ್ತೀವಿ ನೋಡಿ..!
ಜಾಬ್ ಸ್ಟೆಬಿಲಿಟಿ ಮತ್ತು ಫೈನಾನ್ಷಿಯಲ್ ಸೆಕ್ಯೂರಿಟಿ ದೃಷ್ಟಿಯಿಂದ ನೋಡಿದರೆ, ಬಿಗ್ ಟೆಕ್ ಕಂಪನಿಗಳು ಸ್ಟ್ರಾಂಗ್ ಬ್ಯಾಕಪ್ ಮತ್ತು ಕ್ಲಿಯರ್ ವರ್ಕ್ ಸ್ಟ್ರಕ್ಚರ್ ಹೊಂದಿರುತ್ತವೆ. ಆದರೆ ಸ್ಟಾರ್ಟ್‌ಅಪ್‌ಗಳಲ್ಲಿ ಫೈನಾನ್ಷಿಯಲ್ ಅನ್‌ಸರ್ಟೆಂಟಿ, ಫಂಡಿಂಗ್ ರೌಂಡ್ಸ್ ಮತ್ತು ಇನ್ವೆಸ್ಟರ್ ಡಿಪೆಂಡೆನ್ಸ್ ಇರುವುದರಿಂದ ಜಾಬ್ ಸ್ಟೆಬಿಲಿಟಿ ಕೆಲವೊಮ್ಮೆ ಕ್ವೆಶ್ಚನ್ ಮಾರ್ಕ್ ಆಗಿರುತ್ತದೆ.
ಸ್ಯಾಲರಿ ಮತ್ತು ಬೆನಿಫಿಟ್ಸ್ ವಿಷಯದಲ್ಲಿ ಬಿಗ್ ಟೆಕ್ ಕಂಪನಿಗಳು ಹೈ ಸ್ಯಾಲರಿ, ಬೋನಸ್, ಹೆಲ್ತ್ ಇನ್ಸುರೆನ್ಸ್ ಮತ್ತು ಸ್ಟಾಕ್ ಆಪ್ಷನ್‌ಗಳೊಂದಿಗೆ ರಿಚ್ ಪ್ಯಾಕೇಜ್ ನೀಡುತ್ತವೆ. ಸ್ಟಾರ್ಟ್‌ಅಪ್‌ಗಳಲ್ಲಿ ಇನಿಶಿಯಲ್ ಸ್ಯಾಲರಿ ಕಡಿಮೆ ಇರಬಹುದು, ಆದರೆ ಇಕ್ವಿಟಿ ಅಥವಾ ಇಎಸ್‌ಒಪಿ ಮೂಲಕ ಫ್ಯೂಚರ್‌ನಲ್ಲಿ ಹ್ಯೂಜ್ ರಿಟರ್ನ್ಸ್ ಪಡೆಯುವ ಸಾಧ್ಯತೆ ಇರುತ್ತದೆ.
ಲರ್ನಿಂಗ್ ಮತ್ತು ಕರಿಯರ್ ಗ್ರೋತ್ ಬಗ್ಗೆ ಮಾತನಾಡಿದರೆ, ಸ್ಟಾರ್ಟ್‌ಅಪ್‌ಗಳಲ್ಲಿ ಮಲ್ಟಿಪಲ್ ರೋಲ್ಸ್‌ನಲ್ಲಿ ವರ್ಕ್ ಮಾಡುವ ಅವಕಾಶದಿಂದ ಫಾಸ್ಟ್ ಲರ್ನಿಂಗ್ ಸಾಧ್ಯ. ಬಿಗ್ ಟೆಕ್ ಕಂಪನಿಗಳಲ್ಲಿ ಕ್ಲಿಯರ್ ಕರಿಯರ್ ಪಾಥ್ ಮತ್ತು ಸ್ಟ್ರಕ್ಚರ್ಡ್ ಪ್ರೊಮೋಷನ್ ಸಿಸ್ಟಮ್ ಇರುತ್ತದೆ, ಆದರೆ ಗ್ರೋತ್ ಕೆಲವೊಮ್ಮೆ ಸ್ಲೋ ಆಗಿರಬಹುದು.
ವರ್ಕ್–ಲೈಫ್ ಬ್ಯಾಲೆನ್ಸ್ ಮತ್ತು ಕಂಪನಿ ಕಲ್ಚರ್ ಕೂಡ ಜಾಬ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಿಗ್ ಟೆಕ್ ಕಂಪನಿಗಳು ಫ್ಲೆಕ್ಸಿಬಲ್ ಟೈಮಿಂಗ್ಸ್, ರಿಮೋಟ್ ವರ್ಕ್ ಮತ್ತು ಬೆಟರ್ ವರ್ಕ್–ಲೈಫ್ ಬ್ಯಾಲೆನ್ಸ್ ಕೊಡುತ್ತವೆ. ಸ್ಟಾರ್ಟ್‌ಅಪ್‌ಗಳಲ್ಲಿ ಲಾಂಗ್ ವರ್ಕಿಂಗ್ ಅವರ್ಸ್ ಮತ್ತು ಪ್ರೆಷರ್ ಜಾಸ್ತಿ ಇದ್ದರೂ, ವರ್ಕ್ ಮೇಲೆ ಡೈರೆಕ್ಟ್ ಓನರ್‌ಶಿಪ್ ಸಿಗುತ್ತದೆ.
/filters:format(webp)/newsfirstlive-kannada/media/media_files/2026/01/29/big-tech-company-n-start-up-company-2-2026-01-29-16-50-01.jpg)
ಹೀಗಾಗಿ ಜಾಬ್ ಆಯ್ಕೆ ಮಾಡುವ ಮೊದಲು ನಿಮ್ಮ ನೇಚರ್, ಕರಿಯರ್ ಗೋಲ್ಸ್ ಮತ್ತು ಡ್ರೀಮ್ಸ್ ಬಗ್ಗೆ ಕ್ಲಿಯರ್ ಆಗಿ ಯೋಚಿಸುವುದು ಅಗತ್ಯ. ಸ್ಟೇಬಲ್ ಮತ್ತು ಸೆಕ್ಯುರ್ ಗ್ರೋತ್ ಬೇಕಾದವರಿಗೆ ಬಿಗ್ ಟೆಕ್ ಜಾಬ್ ಸೂಕ್ತವಾಗಬಹುದು. ಇನೊವೇಷನ್, ರಿಸ್ಕ್ ಮತ್ತು ನ್ಯೂ ಐಡಿಯಾಸ್ ಬಿಲ್ಡ್ ಮಾಡುವ ಆಸಕ್ತಿ ಇರುವವರಿಗೆ ಸ್ಟಾರ್ಟ್‌ಅಪ್ ಜಾಬ್ ಉತ್ತಮ ಆಯ್ಕೆ ಆಗಿರಬಹುದು. ಯಾವ ಪಾಥ್ ಆಯ್ಕೆ ಮಾಡಿದರೂ, ಅದು ನಿಮ್ಮ ಕರಿಯರ್‌ಗೆ ಲೈಫ್-ಚೇಂಜಿಂಗ್ ಡಿಸಿಷನ್ ಅನ್ನೋದನ್ನು ಮರೆಯಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us