/newsfirstlive-kannada/media/post_attachments/wp-content/uploads/2023/07/CET_EXAM.jpg)
ಇನ್ನೇನು ಸೆಕೆಂಡ್ ಪಿಯುಸಿ ಆನ್ಯುವಲ್ ಎಕ್ಸಾಮ್ ಶುರುವಾಗಲಿದೆ. ಈ ಬೋರ್ಡ್ ಎಕ್ಸಾಮ್ ಮುಗಿದ ತಕ್ಷಣವೇ ನೀವು ಕೆರಿಯರ್ನ ಇಂಪಾರ್ಟೆಂಟ್ ಸ್ಟೇಜ್ ಅಂದ್ರೆ ಎಂಟ್ರೆನ್ಸ್ ಎಕ್ಸಾಮ್ಸ್ಗಳನ್ನು ಎದುರಿಸಬೇಕಾಗುತ್ತೆ. ಮುಂದಿನ ದಿನಗಳಲ್ಲಿ ಒಳ್ಳೆ ಕಾಲೇಜ್ ಸೇರಬೇಕಂದ್ರೆ ಅಥವಾ ಫ್ಯೂಚರ್ನಲ್ಲಿ ಒಳ್ಳೆ ಜಾಬ್ ಗಿಟ್ಟಿಸಿಕೊಳ್ಳಬೇಕಂದ್ರೆ ಈಗಿನಿಂದಲೇ ಕಾಂಪಿಟಿಟಿವ್ ಎಕ್ಸಾಮ್ಸ್ಗೆ ಪ್ರಿಪೇರ್ ಆಗೋದು ತುಂಬಾನೇ ಅವಶ್ಯಕ.
ಸೆಕೆಂಡ್ ಪಿಯುಸಿ ಎಕ್ಸಾಮ್ ಮುಗಿದ ಕೆಲವೇ ದಿನಗಳಲ್ಲಿ ಜೆಇಇ (JEE) ಮೇನ್ಸ್, ನೀಟ್ (NEET), ಸಿಯುಇಟಿ (CUET), ಕ್ಲ್ಯಾಟ್ (CLAT) ಮತ್ತು ಐಪಿ-ಮ್ಯಾಟ್ (IP-MAT) ನಂತಹ ನ್ಯಾಷನಲ್ ಲೆವೆಲ್ ಎಕ್ಸಾಮ್ಸ್ ನಡೆಯಲಿವೆ. ಉದಾಹರಣೆಗೆ ಜೂನ್ 19ಕ್ಕೆ ಕ್ಲ್ಯಾಟ್ ಎಕ್ಸಾಮ್ ಮತ್ತು ಜುಲೈ ಸೆಕೆಂಡ್ ವೀಕ್ನಲ್ಲಿ ಸಿಯುಇಟಿ ಎಕ್ಸಾಮ್ಸ್ ಫಿಕ್ಸ್ ಆಗಿವೆ. ಈ ಎಲ್ಲಾ ಪರೀಕ್ಷೆಗಳಿಗೆ ಪ್ರಿಪರೇಷನ್ ನಡೆಸಲು ಸ್ಟೂಡೆಂಟ್ಸ್ಗೆ ತುಂಬಾನೇ ಕಡಿಮೆ ಟೈಮ್ ಇರೋದ್ರಿಂದ, ಬೋರ್ಡ್ ಎಕ್ಸಾಮ್ ಜೊತೆಜೊತೆಗೇ ಎಂಟ್ರೆನ್ಸ್ ಎಕ್ಸಾಮ್ಸ್ ಕಡೆಗೂ ಗಮನ ಕೊಡಲೇಬೇಕು.
ನೀವು ಈ ಎಕ್ಸಾಮ್ಸ್ಗಳನ್ನು ಬ್ಯಾಲೆನ್ಸ್ ಮಾಡೋಕೆ ಒಂದು ಪ್ರಾಪರ್ ಆದ ಟೈಮ್ ಟೇಬಲ್ ಕ್ರಿಯೇಟ್ ಮಾಡಿಕೊಳ್ಳಿ. ಸದ್ಯಕ್ಕೆ ಬೋರ್ಡ್ ಎಕ್ಸಾಮ್​ಗೆ ಫಸ್ಟ್ ಪ್ರಿಫರೆನ್ಸ್ ನೀಡಿ, ಆದ್ರೆ ಎಂಟ್ರೆನ್ಸ್ ಎಕ್ಸಾಮ್ ಪ್ರಿಪರೇಷನ್ಗಾಗಿ ದಿನಕ್ಕೆ ಅಟ್ಲೀಸ್ಟ್ ಟೂ ಹವರ್ಸ್ ಮೀಸಲಿಡೋದನ್ನ ಮರೆಯಬೇಡಿ. ನೀವು ಅಂದುಕೊಂಡಿರೋ ಗೋಲ್ ರೀಚ್ ಮಾಡಬೇಕಂದ್ರೆ ಈ ಶಿಸ್ತು ತುಂಬಾನೇ ಮುಖ್ಯ. ಪ್ರತಿಯೊಂದು ಸಬ್ಜೆಕ್ಟ್ ಅನ್ನು ಡೀಪ್ ಆಗಿ ಸ್ಟಡಿ ಮಾಡೋದ್ರಿಂದ ನಿಮಗೆ ಎಂಟ್ರೆನ್ಸ್ ಎಕ್ಸಾಮ್ನಲ್ಲಿ ಕ್ವೆಶ್ಚನ್ ಸಾಲ್ವ್ ಮಾಡೋಕೆ ಈಸಿ ಆಗುತ್ತೆ.
ಎಂಟ್ರೆನ್ಸ್ ಎಕ್ಸಾಮ್ ಕ್ಲಿಯರ್ ಮಾಡಬೇಕಂದ್ರೆ ಫಸ್ಟ್ ಅದರ ಎಕ್ಸಾಮ್ ಪ್ಯಾಟರ್ನ್ ಅರ್ಥ ಮಾಡಿಕೊಳ್ಳೋದು ಇಂಪಾರ್ಟೆಂಟ್. ನೀವು ಸಿಯುಇಟಿ ಅಥವಾ ಬೇರೆ ಯಾವುದೇ ಎಕ್ಸಾಮ್ ಬರೆಯೋದಿದ್ರೆ ಆನ್ಲೈನ್ನಲ್ಲಿ ಮಾಕ್ ಟೆಸ್ಟ್ ತಗೊಳ್ಳಿ. ಟೈಮ್ ಮ್ಯಾನೇಜ್ಮೆಂಟ್ ಕಲಿಯಲು ಲಾಸ್ಟ್ ಇಯರ್ ಕ್ವೆಶ್ಚನ್ ಪೇಪರ್ಸ್ ಸಾಲ್ವ್ ಮಾಡೋದು ಬೆಸ್ಟ್ ಐಡಿಯಾ. ಇದು ನಿಮಗೆ ಎಕ್ಸಾಮ್ನಲ್ಲಿ ಎಷ್ಟು ಸ್ಪೀಡ್ ಆಗಿ ಆನ್ಸರ್ ಮಾಡಬೇಕು ಮತ್ತು ಕ್ವೆಶ್ಚನ್ಸ್ ಯಾವ ರೀತಿ ಬರುತ್ತೆ ಅನ್ನೋ ಐಡಿಯಾ ಕೊಡುತ್ತೆ.
ಇನ್ನು ಯುಪಿಎಸ್ಸಿ ತರಹದ ಕಾಂಪಿಟಿಟಿವ್ ಎಕ್ಸಾಮ್ಸ್ ಮೈಂಡ್ನಲ್ಲಿ ಇಟ್ಕೊಂಡಿರೋರು ಡೈಲಿ ನ್ಯೂಸ್ ಪೇಪರ್ ಓದೋ ಹ್ಯಾಬಿಟ್ ಬೆಳೆಸಿಕೊಳ್ಳಿ, ಇದು ನಿಮ್ಮ ಕರೆಂಟ್ ಅಫೇರ್ಸ್ ನಾಲೆಡ್ಜ್ ಜಾಸ್ತಿ ಮಾಡುತ್ತೆ. ಎಕ್ಸಾಮ್ಸ್ ಅಲ್ವಾ ಆಮೇಲೆ ಓದಿದ್ರೆ ಆಯ್ತು ಅನ್ನೋ ಆಲಸ್ಯತನ ಬಿಟ್ಟು, ಸಿಕ್ಕಿರೋ ಟೈಮ್ ಅನ್ನು ಕರೆಕ್ಟಾಗಿ ಯೂಸ್ ಮಾಡಿಕೊಳ್ಳಿ. ಒಮ್ಮೆ ಸಮಯ ಮಿಂಚಿ ಹೋದ್ರೆ ಆಮೇಲೆ ಪಶ್ಚಾತ್ತಾಪ ಪಡೋದ್ರಲ್ಲಿ ಅರ್ಥ ಇರಲ್ಲ, ಹಾಗಾಗಿ ನಿಮ್ಮ ಫ್ಯೂಚರ್ ಮತ್ತು ಒಳ್ಳೆ ಜಾಬ್ ಪ್ರೊಫೈಲ್ಗಾಗಿ ಇಂದೇ ಸ್ಟಡಿ ಪ್ಲಾನ್ ರೆಡಿ ಮಾಡಿ ಆಲ್ ದಿ ಬೆಸ್ಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us