ಅಂಚೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ : ಕರ್ನಾಟಕದಲ್ಲೇ ಕೆಲಸ!

ಅಂಚೆ ಇಲಾಖೆಯು 10 ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತಿದೆ. ಪೋಸ್ಟ್ ಮಾಸ್ಟರ್ ಮತ್ತು ಅಂಚೆ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪೋಸ್ಟ್ ಮಾಸ್ಟರ್ ಹುದ್ದೆಗೆ 29,380 ರೂಪಾಯಿ ವೇತನ ಇದೆ. ಕರ್ನಾಟಕದಲ್ಲೂ ಖಾಲಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

author-image
Chandramohan
ಭಾರತೀಯ ಅಂಚೆ ಇಲಾಖೆ ಇಂದ ಭರ್ಜರಿ ಗುಡ್​ನ್ಯೂಸ್​.. 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯಿಂದ ಪೋಸ್ಟ್ ಮಾಸ್ಟರ್ ಹುದ್ದೆಗೆ ನೇಮಕಾತಿ

Advertisment
  • ಅಂಚೆ ಇಲಾಖೆಯಿಂದ ಪೋಸ್ಟ್ ಮಾಸ್ಟರ್ ಹುದ್ದೆಗೆ ನೇಮಕಾತಿ
  • ಅಂಚೆ ಸೇವಕ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ


10ನೇ ತರಗತಿ ಪಾಸ್​​ ಆದವರಿಗೆ ಒಂದು ಬಿಗ್ ನ್ಯೂಸ್ ಇದೆ! ಸರ್ಕಾರಿ ಕೆಲಸ ಮಾಡಬೇಕು ಅನ್ನೋ ಆಸೆ ಇರೋರಿಗೆ ಇದು ಒಂದು ಸುವರ್ಣ ಅವಕಾಶ. ಇಂಡಿಯಾ ಪೋಸ್ಟ್ ಜಿಡಿಎಸ್ ಅಡಿಯಲ್ಲಿ ಒಟ್ಟು 28,740 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಮತ್ತು ಅಂಚೆ ಸೇವಕ್ ಹುದ್ದೆಗಳು ಸೇರಿವೆ. ಯಾವುದೇ ಕಠಿಣ ಪರೀಕ್ಷೆ ಇಲ್ಲದೆ ನೇರವಾಗಿ ಕೆಲಸ ಪಡೆಯಲು ಇದು ಬೆಸ್ಟ್ ಚಾನ್ಸ್.
ಮೊದಲಿಗೆ ಅರ್ಹತೆ ಮತ್ತು ವಯಸ್ಸಿನ ಮಿತಿ ಎಷ್ಟು ಅಂತಾ ನೋಡೋದಾದ್ರೆ..!
ಈ ಜಾಬ್‌ಗೆ ಅಪ್ಲೈ ಮಾಡಲು ನೀವು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ನಿಂದ ಕೇವಲ 10ನೇ ತರಗತಿ ಪಾಸಾಗಿದ್ದರೆ ಸಾಕು. ಅಭ್ಯರ್ಥಿಗಳ ವಯಸ್ಸು 18 ರಿಂದ 49 ವರ್ಷದ ಒಳಗಿರಬೇಕು. ಸರ್ಕಾರದ ರೂಲ್ಸ್ ಪ್ರಕಾರ ಮೀಸಲಾತಿ ಇರುವ ಅಭ್ಯರ್ಥಿಗಳಿಗೆ ಏಜ್ ರಿಲ್ಯಾಕ್ಸೇಷನ್ ಕೂಡ ಸಿಗಲಿದೆ. ಸ್ಯಾಲರಿ ವಿಚಾರಕ್ಕೆ ಬಂದರೆ, ಪೋಸ್ಟ್ ಮಾಸ್ಟರ್‌ಗಳಿಗೆ 29,380 ರೂಪಾಯಿವರೆಗೆ ಮತ್ತು ಅಂಚೆ ಸೇವಕರಿಗೆ 24,470 ರೂಪಾಯಿವರೆಗೆ ಸಂಬಳ ಸಿಗಲಿದ್ದು, ಪ್ರತಿ ವರ್ಷ 3% ಇನ್ಕ್ರಿಮೆಂಟ್ ಕೂಡ ಇರಲಿದೆ.
ಈ ನೇಮಕಾತಿಯ ಅಫೀಶಿಯಲ್ ನೋಟಿಫಿಕೇಶನ್ ಜನವರಿ 31, 2025 ರಂದು ಬಿಡುಗಡೆಯಾಗಲಿದೆ. ಅದೇ ದಿನದಿಂದ ನೀವು ಆನ್‌ಲೈನ್ ಮೂಲಕ ಅಪ್ಲಿಕೇಶನ್ (Application) ಸಲ್ಲಿಸಲು ಲಿಂಕ್ ಓಪನ್ ಆಗುತ್ತದೆ. ಅಪ್ಲಿಕೇಶನ್ ಹಾಕಲು ಫೆಬ್ರವರಿ 14, 2025 ಕೊನೆಯ ದಿನಾಂಕವಾಗಿದೆ. ನೀವು ಅರ್ಜಿ ಸಲ್ಲಿಸಿದ ನಂತರ ಯಾವುದೇ ವೇಟಿಂಗ್ ಇರೋದಿಲ್ಲ, ಯಾಕಂದ್ರೆ ಫೆಬ್ರವರಿ 28 ರಂದೇ ಮೊದಲ ಮೆರಿಟ್ ಲಿಸ್ಟ್ ಅನೌನ್ಸ್ ಆಗಲಿದೆ.


ಅಪ್ಲಿಕೇಶನ್ ಫೀಸ್ ಮತ್ತು ಸೆಲೆಕ್ಷನ್ ಪ್ರೊಸೆಸ್ ನೋಡೋದಾದ್ರೆ..!
ಇನ್ನೂ, ಈ ಹುದ್ದೆಗಳಿಗೆ ಯಾವುದೇ ರಿಟರ್ನ್ ಎಕ್ಸಾಮ್ ಇರುವುದಿಲ್ಲ. ನಿಮ್ಮ 10ನೇ ತರಗತಿಯ ಮಾರ್ಕ್ಸ್ ಕಾರ್ಡ್‌ನಲ್ಲಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಅಪ್ಲಿಕೇಶನ್ ಫೀಸ್ ಕೇವಲ 100 ರೂಪಾಯಿ ಮಾತ್ರ. ಆದರೆ ಮಹಿಳೆಯರು, SC/ST, PWD ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ ಯಾವುದೇ ಫೀಸ್ ಇರುವುದಿಲ್ಲ, ಅವರು ಫ್ರೀಯಾಗಿ ಅಪ್ಲಿಕೇಶನ್ ಸಲ್ಲಿಸಬಹುದು.

ಅಪ್ಲೈ ಮಾಡುವುದು ಹೇಗೆ? ಅಂತಾ ನೋಡೋದಾದ್ರೆ..!
ಆಸಕ್ತಿ ಇರುವವರು indiapostgdsonline.gov.in ವೆಬ್‌ಸೈಟ್‌ಗೆ ವಿಸಿಟ್ ಮಾಡಿ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ತುಂಬುವಾಗ 10th ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಫೋಟೋ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳಲ್ಲೂ ಹೆಚ್ಚಿನ ವೇಕೆನ್ಸಿಗಳಿವೆ. ಈ ಕೂಡಲೇ ನಿಮ್ಮ ಡಾಕ್ಯುಮೆಂಟ್ಸ್ ರೆಡಿ ಮಾಡಿಕೊಳ್ಳಿ ಮತ್ತು ಈ ಇನ್ಫಾರ್ಮೇಶನ್ ಅನ್ನು ನಿಮ್ಮ ಫ್ರೆಂಡ್ಸ್‌ಗೆ ಶೇರ್ ಮಾಡಿ.

Video: ವಾರೆವ್ಹಾ..! ಬೆಂಗಳೂರಲ್ಲಿ ದೇಶದ ಮೊದಲ 3D ಮುದ್ರಿತ ಅಂಚೆ ಕಚೇರಿ; ಟ್ವೀಟ್ ಮಾಡಿ​ ಖುಷಿ ವ್ಯಕ್ತಪಡಿಸಿದ ಮೋದಿ



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Post department recruitment
Advertisment