ಮಾತಿನಿಂದ ತೊಂದರೆ, ಈ ರಾಶಿಯ ಮನೆಯಲ್ಲಿ ಕಿರಿಕಿರಿ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು

author-image
Veenashree Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಮಾತಿನಿಂದ ತೊಂದರೆಯಾಗಿ ಕುಟುಂಬದ ಮೇಲೆ ಪರಿಣಾಮ ಬೀರಲಿದೆ
  • ವೃತ್ತಿ ಮತ್ತು ವ್ಯಾಪಾರದಲ್ಲಿ ಅನುಕೂಲವಿದೆ
  • ಮನೆ ಬದಲಾಯಿಸುವುದು ಸಧ್ಯಕ್ಕೆ ಬೇಡ
  • ಮನೆಯಲ್ಲಿ ಕಿರಿಕಿರಿ ಆಗಬಹುದು
  • ಆರೋಗ್ಯ, ಹಣ ಉತ್ತಮವಾಗಿರುತ್ತದೆ
  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಸರಸ್ವತಿಯನ್ನು ಪ್ರಾರ್ಥಿಸಿ

ವೃಷಭ

RASHI_BHAVISHA_VRSHABA

  • ಮಾನಸಿಕ ನೆಮ್ಮದಿ ಸಿಕ್ಕರೆ ಉಳಿದೆಲ್ಲಾ ನಿಮ್ಮ ವಶವಾಗಬಹುದು
  • ನಿಮ್ಮ ಧಾರಾಳತೆಯಿಂದ ಬೇರೆಯವರಿಗೆ ಅನುಕೂಲವಿದೆ
  • ಹಿರಿಯರ ಆಶ್ರಯದಿಂದ ಸಮಾಧಾನ ಸಿಗಲಿದೆ
  • ಇಂದು ಯಾವುದೇ ವಿವಾದಗಳು ಬೇಡ
  • ಕ್ರೀಡಾಪಟುಗಳು ವಿಶೇಷ ಎಚ್ಚರಿಕೆ ವಹಿಸಬೇಕು
  • ಈ ದಿನ ಮಾನಸಿಕ ಶಾಂತಿ ಕಡಿಮೆ ಇರಲಿದೆ
  • ಗರ್ಭಿಣಿ ಸ್ತ್ರೀಯರು ಎಚ್ಚರವಹಿಸಬೇಕು
  • ಕೃಷ್ಣನನ್ನು ತುಳಸಿಯಿಂದ ಪೂಜಿಸಿ

ಮಿಥುನ

RASHI_BHAVISHA_MITHUNA

  • ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ ಆಗಬಹುದು
  • ಆರ್ಥಿಕ ತೊಂದರೆಯಿಲ್ಲ, ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
  • ಕೇವಲ ಹಣದಿಂದ ಏನೂ ಸಾಧಿಸಲಾಗದು ಎಂದು ತಿಳಿಯಬೇಕಾದ ದಿನ
  • ಮನೆಯ ಸಮಸ್ಯೆಗಳಿಂದ ಉದ್ವೇಗಗೊಳ್ಳುತ್ತೀರಿ
  • ಮಾನಸಿಕ ಧೈರ್ಯ ಕಡಿಮೆ ಆಗುವುದರಿಂದ ಬೇಸರ
  • ಊಹಾಪೋಹಗಳಿಂದ ಮಾನಸಿಕ ಖಿನ್ನತೆ ಉಂಟಾಗಲಿದೆ
  • ಗೋವಿಗೆ ಅಕ್ಕಿಬೆಲ್ಲ ನೀಡಿ

ಕಟಕ

RASHI_BHAVISHA_KATAKA

  • ಕೌಟುಂಬಿಕ ಸಾಮರಸ್ಯದಿಂದ ಸಂತೋಷ ಅನುಭವಿಸಿ
  • ನಿಮ್ಮ ವ್ಯವಹಾರದಿಂದ ಬೇರೆಯವರಿಗೆ ಲಾಭ
  • ಯಾರನ್ನೂ ಹೆಚ್ಚು ಹಚ್ಚಿಕೊಳ್ಳಬೇಡಿ ದುಃಖ ಆಗಬಹುದು
  • ಇಂದು ಮಕ್ಕಳಿಂದ ಖುಷಿ ಸಿಗಲಿದೆ
  • ಆಹಾರ ವ್ಯತ್ಯಯ ಆಗುವುದರಿಂದ ಆರೋಗ್ಯ ವ್ಯತ್ಯಾಸ ಆಗಬಹುದು
  • ಮನಸ್ಸಿಗೆ ನೆಮ್ಮದಿಯಿಂದಿರುವ ದಿನ
  • ಶ್ರೀರಾಮನನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಶಿಕ್ಷಣರಂಗದ ವ್ಯಕ್ತಿಗಳಿಗೆ ಅನುಕೂಲವಿದೆ
  • ಬೇರೆಯವರ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು
  • ಬಂಧುಗಳಿಂದ ಸಹಾಯ, ಅನುಕೂಲವಿದೆ
  • ಇಂದು ಯಶಸ್ಸಿದೆ ಪ್ರಯತ್ನ ಮಾಡಿ
  • ಇಂದು ನಿಮ್ಮ ಮನಸ್ಥಿತಿಯನ್ನು ಹಾಗೇ ಕಾಯ್ದುಕೊಳ್ಳಿ
  • ಈ ದಿನ ಸಾಲಗಾರರ ಕಾಟ ಕಾಡಬಹುದು
  • ರಾಜರಾಜೇಶ್ವರಿಯನ್ನು ಅರ್ಚಿಸಿ

ಕನ್ಯಾ

RASHI_BHAVISHA_KANYA

  • ಕಾರ್ಯಕ್ಷೇತ್ರಗಳಲ್ಲಿ ಶೀಘ್ರ ಬದಲಾವಣೆಯಾಗಬಹುದು
  • ಇಂದು ಪ್ರೇಮಿಗಳಿಗೆ ಉತ್ತಮ ದಿನ
  • ನಿಮ್ಮ ಸಂತೋಷವನ್ನು ಬೇರೆಯವರಿಗೆ ಹಂಚಿ
  • ಬೇರೆಯವರ ಕಷ್ಟವನ್ನು ನಿಮ್ಮ ಹತ್ತಿರ ಹೇಳಿಕೊಳ್ಳಬಹುದು
  • ಬೇರೆಯವರ ಪ್ರೀತಿಗೆ ನೀವು ಪಾತ್ರರಾಗಬಹುದು
  • ಹಣದ ವಿಚಾರದಲ್ಲಿ ನಿಮ್ಮ ಆದಾಯ ಗಮನಿಸಿ
  • ಇಷ್ಟದೇವತಾ ಪ್ರಾರ್ಥನೆ

ತುಲಾ

RASHI_BHAVISHA_TULA

  • ಮಾನಸಿಕ ದುಃಖ ನಿಮ್ಮನ್ನು ಕಾಡಬಹುದು
  • ಮನೆಯಲ್ಲಿ ಪರಸ್ಪರ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು
  • ಇಂದು ನಿಮ್ಮ ಹತ್ತಿರ ಹಣ ಇರಲಿದೆ ಆದರೆ ನೆಮ್ಮದಿಯಿಲ್ಲ 
  • ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಬೇಕು
  • ನಿಮ್ಮ ಮಾತಿನಿಂದಲೇ ಅವಮಾನ ಪಡುತ್ತೀರಿ
  • ಇಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
  • ದುರ್ಗಾದೇವಿಯನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ವೈವಾಹಿಕ ಜೀವನದ ಏರಿಳಿತಗಳ ಅನುಭವ ಆಗಲಿದೆ
  • ಇಂದು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
  • ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
  • ಆಧ್ಯಾತ್ಮಿಕ ಲಾಭಕ್ಕಾಗಿ ಧ್ಯಾನ, ಯೋಗ ಮಾಡಿ
  • ಇಂದು ಪ್ರೇಮಿಗಳಿಗೆ ಸಾಧಾರಣವಾದ ದಿನ 
  • ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡುತ್ತದೆ
  • ವಿಷ್ಣುವನ್ನು ಸ್ಮರಿಸಿ

ಧನುಸ್ಸು

RASHI_BHAVISHA_DHANASU

  • ಮಧ್ಯವರ್ತಿಗಳಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
  • ಹಣ ಬರುತ್ತದೆ, ಅಪಮಾನವೂ ಇರುತ್ತದೆ
  • ಪ್ರಯತ್ನ ಪೂರ್ವಕವಾಗಿ ಸಂತೋಷ ಪಡಬೇಕು
  • ಈ ದಿನ ಕೋಪ ನಿಯಂತ್ರಣದಲ್ಲಿರಲಿ
  • ಕೆಲವು ಗಂಭೀರ ಸಮಸ್ಯೆಗಳು ಎದುರಾಗುತ್ತವೆ
  • ಕುಟುಂಬ ಸಂಘರ್ಷ ಉಂಟಾಗಬಹುದು
  • ಈಶ್ವರಾರಾಧನೆ ಮಾಡಿ

ಮಕರ

RASHI_BHAVISHA_MAKARA

  • ವಾದ-ವಿವಾದಗಳ ಸುಳಿಯಲ್ಲಿ ಸಿಲುಕುತ್ತೀರಿ
  • ದಾಂಪತ್ಯದಲ್ಲಿ ಅಭಿಪ್ರಾಯ ಭೇದ
  • ಇಂದು ಆಹಾರ ನಿಯಂತ್ರಣದಲ್ಲಿರಲಿ
  • ಬೇರೆಯವರ ಅವಲಂಬನೆ ಬೇಡ
  • ವೃತ್ತಿಯಲ್ಲಿ ಆರ್ಥಿಕ ನಷ್ಟ ಆಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕುಂಭ

RASHI_BHAVISHA_KUMBHA

  • ಹಳೆಯ ಗೆಳೆಯರ ಸಂಪರ್ಕದಿಂದ ಸಮಸ್ಯೆಯಾಗಬಹುದು
  • ಹೊಸ ವಸ್ತ್ರ ಖರೀದಿ ವಿಚಾರದಲ್ಲಿ ನಿರಾಸೆ ಆಗಬಹುದು
  • ಕುಟುಂಬ ಸದಸ್ಯರ ಬಗ್ಗೆ ಕಾಳಜಿಯಿರಲಿ
  • ಸಮಯೋಚಿತ ಬದಲಾವಣೆಗೆ ಆದ್ಯತೆ ನೀಡಿ
  • ಆರ್ಥಿಕ ಸಮಸ್ಯೆಯಿರುವುದಿಲ್ಲ
  • ನವಗ್ರಹರ ಆರಾಧನೆ ಮಾಡಿ

ಮೀನ

RASHI_BHAVISHA_MEENA

  • ಮಕ್ಕಳೊಂದಿಗೆ ನಿಮ್ಮ ಅಮೂಲ್ಯವಾದ ಸಮಯ ಕಳೆಯುತ್ತೀರಿ
  • ಸಹೋದರರ ಸಹಕಾರ ಸಿಗಲಿದೆ
  • ಯಾವುದೇ ರೀತಿಯ ಹೊಸ ವ್ಯವಹಾರ ಬೇಡ
  • ವೃತ್ತಿಯಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು
  • ಹಳೆಯ ನೆನಪಿನಿಂದ ಸಂತೋಷ ಸಿಗಲಿದೆ
  • ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಲಕ್ಷ್ಮಿದೇವಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment