10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ : ಡೌನ್ ಲೋಡ್ ಮಾಡಿಕೊಳ್ಳೋದು ಹೇಗೆ?

10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯು ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿದೆ. ಈ ಮಾದರಿ ಪ್ರಶ್ನೆಪತ್ರಿಕೆಯಿಂದಲೇ ಪರೀಕ್ಷೆಗೆ ಪ್ರಶ್ನೆಗಳನ್ನು ಕೇಳೋದು ಖಚಿತ. ಈ ಪ್ರಶ್ನೆ ಪತ್ರಿಕೆಯನ್ನು ಶಿಕ್ಷಣ ಇಲಾಖೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಓದಿದರೇ, ಸಕ್ಸಸ್ ಸಿಗೋದು ಗ್ಯಾರಂಟಿ

author-image
Chandramohan
SSLC MODEL QUESTION PAPER

SSLC ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ

Advertisment

2025ರ SSLC ಎಕ್ಸಾಂ ಬರೆಯಲಿರೋ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಒಂದು ಇಂಪಾರ್ಟೆಂಟ್ ಅಪ್ಡೇಟ್ ನೀಡಿದೆ. ಈ ಸಾಲಿನ ಎಕ್ಸಾಂಗೆ ರೆಡಿಯಾಗುತ್ತಿರುವ ಸ್ಟೂಡೆಂಟ್ಸ್‌ಗಾಗಿ ಅಧಿಕೃತವಾಗಿ ಮಾಡೆಲ್ ಕ್ವೆಶ್ಚನ್ ಪೇಪರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಎಕ್ಸಾಂನಲ್ಲಿ ಸ್ಕೋರ್ ಇಂಪ್ರೂವ್ ಮಾಡಿಕೊಳ್ಳಲು ಈ ಪೇಪರ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಇಂದಿನಿಂದಲೇ ಪ್ರಾಕ್ಟೀಸ್ ಶುರು ಮಾಡಬಹುದು.
ಮೊದಲಿಗೆ ಸಬ್ಜೆಕ್ಟ್ ಮತ್ತು ಲಾಂಗ್ವೇಜ್ ಡೀಟೇಲ್ಸ್ ನೋಡೋದಾದ್ರೆ!
ಮಂಡಳಿಯು ಸದ್ಯಕ್ಕೆ ಮ್ಯಾಥ್ಸ್, ಸೈನ್ಸ್ ಮತ್ತು ಸೋಶಿಯಲ್ ಸೈನ್ಸ್ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಅಪ್‌ಲೋಡ್ ಮಾಡಿದೆ. ಬೇರೆ ಮೀಡಿಯಂ ವಿದ್ಯಾರ್ಥಿಗಳಿಗೆ ಸ್ಕೂಲ್ ಹಂತದಲ್ಲೇ ಆಯಾ ಭಾಷೆಗೆ ಟ್ರಾನ್ಸ್‌ಲೇಟ್ ಮಾಡಿ ಒದಗಿಸಲು ಸೂಚಿಸಲಾಗಿದೆ. ಇನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಲಾಂಗ್ವೇಜ್ ಪೇಪರ್‌ಗಳು ಆಯಾ ಭಾಷೆಯಲ್ಲೇ ಲಭ್ಯವಿವೆ. ಎಲ್ಲಾ ಸ್ಕೂಲ್ ಹೆಡ್‌ಮಾಸ್ಟರ್‌ಗಳು ಈ ಪೇಪರ್‌ಗಳನ್ನು ಸ್ಟೂಡೆಂಟ್ಸ್‌ಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ.
ಡೌನ್‌ಲೋಡ್ ಮಾಡುವುದು ಹೇಗೆ? ಅಂತಾ ನೋಡೋದಾದ್ರೆ!
ಈ ಮಾಡೆಲ್ ಪೇಪರ್ಸ್ ಡೌನ್‌ಲೋಡ್ ಮಾಡಲು ಮೊದಲು KSEABಯ ಅಫೀಶಿಯಲ್ ವೆಬ್‌ಸೈಟ್ kseab.karnataka.gov.in ಗೆ ವಿಸಿಟ್ ಮಾಡಿ. ಅಲ್ಲಿ ಹೋಮ್ ಪೇಜ್‌ನಲ್ಲಿರುವ 'ಮತ್ತಷ್ಟು ಓದಿ' ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ, ಲೇಟೆಸ್ಟ್ ನೋಟಿಫಿಕೇಶನ್ಸ್ ಪಟ್ಟಿಯಲ್ಲಿ '2025ರ SSLC ಎಕ್ಸಾಂ ಮಾಡೆಲ್ ಕ್ವೆಶ್ಚನ್ ಪೇಪರ್ಸ್' ಲಿಂಕ್ ಸಿಗಲಿದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಸಬ್ಜೆಕ್ಟ್ ಪೇಪರ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.
ವಿದ್ಯಾರ್ಥಿಗಳು ಒಂದು ವಿಷ್ಯ ನೆನಪಿಟ್ಟುಕೊಳ್ಳಬೇಕು, ನಿಮಗೆ ಎಕ್ಸಾಂ-1, ಎಕ್ಸಾಂ-2 ಮತ್ತು ಎಕ್ಸಾಂ-3 ಹೀಗೆ ಒಟ್ಟು ಮೂರು ಬಾರಿ ಎಕ್ಸಾಂ ಬರೆಯುವ ಅವಕಾಶ ಇರುತ್ತದೆ. ಈ ಮೂರರಲ್ಲಿ ನಿಮಗೆ ಯಾವ ಎಕ್ಸಾಂನಲ್ಲಿ ಬೆಸ್ಟ್ ರಿಸಲ್ಟ್ ಬರುತ್ತೋ, ಅದನ್ನೇ ಫೈನಲ್ ಅಂಕಪಟ್ಟಿಗೆ ಪರಿಗಣಿಸಲಾಗುತ್ತದೆ. ಇದರಿಂದ ಸ್ಟೂಡೆಂಟ್ಸ್ ಮೇಲಿರುವ ಎಕ್ಸಾಂ ಟೆನ್ಶನ್ ಕಡಿಮೆ ಆಗಲಿದ್ದು, ಹೆಚ್ಚು ಅಂಕ ಗಳಿಸಲು ಒಳ್ಳೆ ಸ್ಕೋಪ್ ಸಿಗಲಿದೆ.
ಇನ್ನು 2025ರ ಎಸ್‌ಎಸ್‌ಎಲ್‌ಸಿ ಎಕ್ಸಾಂ-1 ರ ತಾತ್ಕಾಲಿಕ ವೇಳಾಪಟ್ಟಿ ಈಗಾಗಲೇ ರಿಲೀಸ್ ಆಗಿದ್ದು, ಮಾರ್ಚ್ 20 ರಿಂದ ಏಪ್ರಿಲ್ 02 ರವರೆಗೆ ಎಕ್ಸಾಂ ನಡೆಯಲಿದೆ. ಸದ್ಯಕ್ಕೆ ಇದು ತಾತ್ಕಾಲಿಕ ಡೇಟ್ಸ್ ಆಗಿದ್ದು, ಫೈನಲ್ ಟೈಮ್‌ಟೇಬಲ್‌ನಲ್ಲಿ ಸ್ವಲ್ಪ ಚೇಂಜ್ ಇರಬಹುದು. ಸೋ, ಟೈಮ್ ವೇಸ್ಟ್ ಮಾಡದೆ ಈಗಲೇ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಮಾಡೆಲ್ ಪೇಪರ್ಸ್ ಸಾಲ್ವ್ ಮಾಡೋಕೆ ಸ್ಟಾರ್ಟ್ ಮಾಡಿ. ಆಲ್ ದಿ ಬೆಸ್ಟ್!

ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC eduction SSLC Exam SSLC MODEL QUESTION PAPER
Advertisment