/newsfirstlive-kannada/media/media_files/2025/07/31/national-skill-academy-2025-07-31-21-56-53.jpg)
ಇಂದು ಎಲ್ಲರಿಗೂ ಉದ್ಯೋಗ ಬೇಕೇ ಬೇಕು. ಉದ್ಯೋಗ ಪಡೆಯಲು ಪದವಿ ಪಡೆಯಲೇಬೇಕು. ಪದವಿ ಅನಿವಾರ್ಯ ಎನ್ನುವ ಮಾತಿದೆ. ಆದರೆ, ಮುಂದಿನ ದಿನಗಳಲ್ಲಿ ಈ ಮಾತು ಎಷ್ಟು ಸರಿ ಎಂದು ಕಾದು ನೋಡಬೇಕು. ಕಾರಣ ಫ್ಯೂಚರ್ನಲ್ಲಿ ನಮಗೆ ಡಿಗ್ರಿ ಅನಿವಾರ್ಯವಾಗದೇ ಇರಬಹುದು. ಡಿಗ್ರಿ ಬದಲಿಗೆ ಬೇಕಾಗಿರೋದು ನಮ್ಮಲಿರೋ ಸ್ಕಿಲ್ಸ್. ಜಾಬ್ ನೀಡುವವರು ಕೂಡ ಕೌಶಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ಇದು ಬಹುಮುಖ್ಯವಾಗಿದೆ.
ಡಿಗ್ರಿ ಪಡೆಯುವುದು ಕಷ್ಟವೇನಲ್ಲ, ಕಾರ್ಯ ಕುಶಲತೆಯೇ ಮುಖ್ಯ. ಸದ್ಯ ಉದ್ಯೋಗದಾತರು ಕೂಡ ಈ ಕ್ಷೇತ್ರದತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅದರಲ್ಲೂ ವೃತ್ತಿಪರ ಪದವಿಗಳು ಈಗ ದಿನೇ ದಿನೇ ಅಪ್ಡೇಟ್ ಕೇಳುತ್ತಿವೆ. ಅಂದ್ರೆ ಇಂದು ನೀವು ಕಲಿತಿರುವ ಸ್ಕಿಲ್ಸ್ ಕೇವಲ ಐದು ವರ್ಷಕ್ಕೆ ಮಾತ್ರ ಸೀಮಿತವಾಗಿವೆ. ಹಾಗಾಗಿ ನೀವು ಈ ವಿಚಾರದಲ್ಲಿ ಅಪ್ಡೇಟ್ ಆಗುತ್ತಲೇ ಹೊಸ ಸ್ಕಿಲ್ಸ್ ಕಲಿಯುತ್ತಲೇ ಸಾಗಬೇಕಿದೆ. ಹೀಗೆ ಹೊಸ ಸ್ಕಿಲ್ಸ್ ಕಲಿತು ಜೀವನದಲ್ಲಿ ಮುಂದೆ ಬರಬೇಕು ಅನ್ನೋರಿಗೆ ಭರ್ಜರಿ ಗುಡ್ನ್ಯೂಸ್ ಇದೆ. ಸರ್ಕಾರದಿಂದಲೇ ಹೊಸ ಸ್ಕಿಲ್ಸ್ ಕಲಿಯಲು ಅದ್ಭುವ ಅವಕಾಶ ಇದೆ.
ಭಾರತ ಸರ್ಕಾರದಿಂದ ಅನುಮೋದನೆ ಪಡೆದಿರೋ ರಾಷ್ಟ್ರೀಯ ಕೌಶಲ್ಯ ಅಕಾಡೆಮಿ ವಿದ್ಯಾರ್ಥಿಗಳಿಗೆ 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ಕಂಪ್ಯೂಟರ್ ಸಾಫ್ಟ್‌ವೇರ್ ಕೋರ್ಸ್‌ಗಳಿಗೆ ಆನ್‌ಲೈನ್ ತರಬೇತಿ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಇಡೀ ರಾಜ್ಯದಾದ್ಯಂತ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇನ್ನೂ ಅರ್ಜಿ ಸಲ್ಲಿಸಲು ಅರ್ಹತೆ ಏನು?
ಈ ತರಬೇತಿಗೆ ಅರ್ಜಿ ಹಾಕಲು SSLC ಮತ್ತು ಪಿಯುಸಿ ಪಾಸಾಗಿರಬೇಕು. ಅದ್ರಲ್ಲೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಪಿಜಿ ಮಾಡುತ್ತಿರೋರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಪ್ರಕಾರ 100ಕ್ಕೂ ಹೆಚ್ಚು ಆಧುನಿಕ ಸಾಫ್ಟ್‌ವೇರ್ ಕೋರ್ಸ್‌ಗಳಿಂದ ಯಾವುದಾದ್ರೂ ಒಂದು ಅಥವಾ ಹೆಚ್ಚು ಕೋರ್ಸ್‌ಗಳನ್ನು ಆಯ್ಕೆಮಾಡಬಹುದು.
ಸೈಬರ್ ಸೆಕ್ಯುರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಸೈನ್ಸ್, ಬಿಗ್ ಡೇಟಾ, ಕ್ಲೌಡ್ ಕಂಪ್ಯೂಟಿಂಗ್, ಎಥಿಕಲ್ ಹ್ಯಾಕಿಂಗ್, ಪೈಥಾನ್, ಮೆಷಿನ್ ಲರ್ನಿಂಗ್, ಬಿಸಿನೆಸ್ ಅನಾಲಿಟಿಕ್ಸ್, ಫುಲ್ ಸ್ಟಾಕ್ ಡೆವಲಪ್‌ಮೆಂಟ್, ಬ್ಲಾಕ್‌ಚೇನ್, ಡೀಪ್ ಲರ್ನಿಂಗ್, ಸೆಲೆನಿಯಮ್, ಸೇಲ್ಸ್‌ಫೋರ್ಸ್, ಜಾವಾ, ಒರಾಕಲ್, ಸಾಫ್ಟ್‌ವೇರ್ ಎಂಜಿನಿಯರಿಂಗ್, ವೆಬ್ ಡಿಸೈನ್ ಮತ್ತು ಇನ್ನೂ ಹೆಚ್ಚಿನ ಕೋರ್ಸ್‌ಗಳನ್ನು ಕಲಿಸಲಾಗುತ್ತಿದೆ.
ಈ ಎಲ್ಲಾ ಕೋರ್ಸ್‌ಗಳನ್ನು ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಕಲಿಸಲಾಗುತ್ತದೆ. ತರಬೇತಿ ನಂತರ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪಾಸ್ ಆದವರಿಗೆ ಭಾರತ ಸರ್ಕಾರದಿಂದಲೇ ಸರ್ಟಿಫಿಕೇಟ್ ನೀಡಲಾಗುವುದು.
ಕೋರ್ಸ್ ಅವಧಿ 2 ರಿಂದ 6 ತಿಂಗಳವರೆಗೆ ಇರಲಿದೆ. ಇದು ವಿದ್ಯಾರ್ಥಿಗಳಿಗೆ ಆಳವಾದ ಜ್ಞಾನವನ್ನು ಸಂಪಾದಿಸಲು ಅನುಕೂಲವಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡೋದು ಹೇಗೆ?
ಆಸಕ್ತ ಅಭ್ಯರ್ಥಿಗಳು "http://www.nationalskillacademy.in/ ಎಂಬ ವೆಬ್ಸೈಟ್ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9505800050 ಅನ್ನು ಸಂಪರ್ಕಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ