/newsfirstlive-kannada/media/media_files/2026/01/29/central-bank-of-india-2026-01-29-17-13-28.jpg)
ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಕೆರಿಯರ್ ಬಿಲ್ಡ್ ಮಾಡಬೇಕು ಅಂತ ಅಂದುಕೊಂಡಿರುವ ಯುವಜನತೆಗೆ ಇದೊಂದು ಗ್ರೇಟ್ ಅಪಾರ್ಚುನಿಟಿ. ದೇಶದ ಫೇಮಸ್ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫಾರಿನ್ ಎಕ್ಸ್​ಚೇಂಜ್​ ಆಫೀಸರ್ ಮತ್ತು ಮಾರ್ಕೆಟಿಂಗ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಎರಡು ಪೋಸ್ಟ್‌ಗಳಿಗೆ ಅಪ್ಲಿಕೇಶನ್ ಹಾಕುವ ಪ್ರೊಸೆಸ್ ಜನವರಿ 20 ರಿಂದಲೇ ಶುರುವಾಗಿದ್ದು, ಇಂಟರೆಸ್ಟ್ ಇರೋ ಅಭ್ಯರ್ಥಿಗಳು ನಿಗದಿತ ಟೈಮ್ ಒಳಗಡೆ ಅಪ್ಲೈ ಮಾಡಬಹುದು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ರಿಕ್ರೂಟ್ಮೆಂಟ್ ಮೂಲಕ ಟೋಟಲ್ 350 ಹುದ್ದೆಗಳನ್ನು ಭರ್ತಿ ಮಾಡ್ತಾ ಇದೆ. ನೀವು ಬ್ಯಾಂಕ್‌ನ ಅಫೀಶಿಯಲ್ ವೆಬ್‌ಸೈಟ್ centralbank.bank.in ಗೆ ವಿಸಿಟ್ ಮಾಡಿ ಆನ್‌ಲೈನ್ ಮೂಲಕವೇ ಅಪ್ಲೈ ಮಾಡಬೇಕು. ಅಪ್ಲಿಕೇಶನ್ ಹಾಕಲು ಫೆಬ್ರವರಿ 3 ಲಾಸ್ಟ್ ಡೇಟ್ ಆಗಿದೆ. ಅಪ್ಲಿಕೇಶನ್ ಫೀಸ್ ಬಗ್ಗೆ ಹೇಳೋದಾದ್ರೆ, ಜನರಲ್ ಕೆಟಗರಿ ಅಭ್ಯರ್ಥಿಗಳಿಗೆ 850 ರೂಪಾಯಿ ಹಾಗೂ ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕೇವಲ 175 ರೂಪಾಯಿ ಫೀಸ್ ನಿಗದಿ ಮಾಡಲಾಗಿದೆ.
ಕ್ವಾಲಿಫಿಕೇಶನ್ ವಿಷಯಕ್ಕೆ ಬಂದರೆ, ಫಾರಿನ್ ಎಕ್ಸ್​ಚೇಂಜ್​ ಆಫೀಸರ್ ಹುದ್ದೆಗೆ ಯಾವುದೇ ಡಿಗ್ರಿ ಮುಗಿಸಿದವರು ಅಪ್ಲೈ ಮಾಡಬಹುದು. ಆದರೆ CFA, CA ಅಥವಾ MBA ಅಂತಹ ಪ್ರೊಫೆಷನಲ್ ಕ್ವಾಲಿಫಿಕೇಶನ್ ಇರೋರಿಗೆ ಹೆಚ್ಚಿನ ಪ್ರಿಫರೆನ್ಸ್ ಸಿಗುತ್ತೆ. ಇನ್ನು ಮಾರ್ಕೆಟಿಂಗ್ ಆಫೀಸರ್ ಪೋಸ್ಟ್‌ಗೆ ಅಪ್ಲೈ ಮಾಡುವವರು ಡಿಗ್ರಿ ಜೊತೆಗೆ MBA, ಪಿಜಿ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ ಅಥವಾ ಬಿಸಿನೆಸ್ ಅನಾಲಿಟಿಕ್ಸ್‌ನಂತಹ ಹೈಯರ್ ಎಜುಕೇಶನ್ ಮುಗಿಸಿರಬೇಕು.
ಈ ಆಫೀಸರ್ ಹುದ್ದೆಗಳಿಗೆ ಸೆಲೆಕ್ಷನ್ ಪ್ರೊಸೆಸ್ ಹೇಗಿರುತ್ತೆ ಅಂದ್ರೆ, ಮೊದಲು ರಿಟನ್ ಎಕ್ಸಾಮ್ ಮತ್ತು ಆಮೇಲೆ ಇಂಟರ್ವ್ಯೂ ಇರುತ್ತೆ. ರಿಟನ್ ಎಕ್ಸಾಮ್‌ನಲ್ಲಿ ಟೋಟಲ್ 100 ಕ್ವಶ್ಚನ್ಸ್‌ಗಳಿದ್ದು, 100 ಮಾರ್ಕ್ಸ್ ಇರುತ್ತೆ. ಪರೀಕ್ಷೆ ಬರೆಯಲು 2 ಗಂಟೆ ಟೈಮ್ ಸಿಗುತ್ತೆ. ಜನರಲ್ ಕೆಟಗರಿಗೆ 50% ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 45% ಕ್ವಾಲಿಫೈಯಿಂಗ್ ಮಾರ್ಕ್ಸ್ ಫಿಕ್ಸ್ ಮಾಡಲಾಗಿದೆ. ಈ ಎಕ್ಸಾಮ್ ಫೆಬ್ರವರಿ ಅಥವಾ ಮಾರ್ಚ್ 2026 ರಲ್ಲಿ ಆನ್‌ಲೈನ್ ಮೂಲಕ ನಡೆಯಲಿದ್ದು, ಆಮೇಲೆ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಇಂಟರ್ವ್ಯೂ ನಡೆಸಲಾಗುತ್ತೆ.
ಬ್ಯಾಂಕಿಂಗ್ ಫೀಲ್ಡ್‌ನಲ್ಲಿ ಒಂದು ಸೆಟಲ್ಡ್ ಮತ್ತು ಗೌರವಯುತ ಕರಿಯರ್ ರೂಪಿಸಿಕೊಳ್ಳಲು ಇದೊಂದು ಬೆಸ್ಟ್ ಚಾನ್ಸ್. ಆಸಕ್ತಿ ಇರೋ ಅಭ್ಯರ್ಥಿಗಳು ಲಾಸ್ಟ್ ಡೇಟ್ ವರೆಗೂ ವೇಟ್ ಮಾಡದೆ ಕೂಡಲೇ ಆನ್‌ಲೈನ್ ಮೂಲಕ ಅಪ್ಲೈ ಮಾಡಿ. ಹೆಚ್ಚಿನ ಡಿಟೇಲ್ಸ್ ಮತ್ತು ಅಫೀಶಿಯಲ್ ನೋಟಿಫಿಕೇಶನ್ ಚೆಕ್ ಮಾಡಲು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್‌ಗೆ ಲಾಗಿನ್ ಆಗಿ. ಆಲ್ ದಿ ಬೆಸ್ಟ್!
/filters:format(webp)/newsfirstlive-kannada/media/media_files/2026/01/29/central-bank-of-india-1-2026-01-29-17-14-35.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us