Advertisment

ರಾಜ್ಯದ ಅಗ್ನಿಶಾಮಕ, ತುರ್ತು ಸೇವೆ ಇಲಾಖೆಯಲ್ಲಿ 1,600 ಹುದ್ದೆ ನೇಮಕಾತಿ- ಡಾ.ಜಿ.ಪರಮೇಶ್ವರ್‌

ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ 1,600 ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ಸದ್ಯದಲ್ಲಿ ನೋಟೀಫಿಕೇಷನ್ ಹೊರಡಿಸಲಿದೆ.

author-image
Chandramohan
fire and emergency services recruitment
Advertisment

ಗವರ್ನಮೆಂಟ್ ಜಾಬ್‌ಗಾಗಿ ವೇಟ್ ಮಾಡ್ತಿರೋ ಸ್ಟೂಡೆಂಟ್ಸ್‌ಗೆ ಒಂದು ಗ್ರೇಟ್ ಅಪ್‌ಡೇಟ್! ಕರ್ನಾಟಕ ಹೋಮ್ ಮಿನಿಸ್ಟರ್ ಡಾ. ಜಿ. ಪರಮೇಶ್ವರ ಅವರು ಒಂದು ಬಿಗ್ ಅನೌನ್ಸ್‌ಮೆಂಟ್ ಮಾಡಿದ್ದಾರೆ. ನಮ್ಮ  ರಾಜ್ಯದ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ ಖಾಲಿ ಇರೋ ಬರೋಬ್ಬರಿ 1,600ಕ್ಕೂ ಹೆಚ್ಚು ವಿವಿಧ ಹುದ್ದೆಗಳನ್ನ ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ. ಸಮಾಜದಲ್ಲಿ ಗೌರವ ಇರೋ ಮತ್ತು ಸಾಹಸಮಯವಾಗಿರೋ ಈ ಜಾಬ್ ಪಡಿಯೋಕೆ ಸ್ಟೂಡೆಂಟ್ಸ್‌ಗೆ ಇದೊಂದು ಬೆಸ್ಟ್ ಆಪರ್ಚುನಿಟಿ ಆಗಲಿದೆ.
ನಮ್ಮ ಫೈರ್ ಡಿಪಾರ್ಟ್‌ಮೆಂಟ್ ಸಿಬ್ಬಂದಿಗಳು ತುಂಬಾ ಶಿಸ್ತಿನ ಸಿಪಾಯಿಗಳು ಮತ್ತು ರಿಯಲ್ ಲೈಫ್ ಸೇವರ್ಸ್. ಅದರಲ್ಲೂ ಮಡಿಕೇರಿ ಫ್ಲಡ್ಸ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ನಾಗರಿಕರ ಜೀವ ರಕ್ಷಣೆ ಮಾಡಿದ್ದನ್ನ ಇಡೀ ರಾಜ್ಯವೇ ಕೊಂಡಾಡಿದೆ. ಇಂತಹ ಪ್ರೆಸ್ಟೀಜಿಯಸ್ ಇಲಾಖೆಯಲ್ಲಿ ಕೆಲಸ ಮಾಡೋಕೆ ಈಗ 1,600 ಹೊಸ ವೇಕೆನ್ಸಿಗಳು ಕ್ರಿಯೇಟ್ ಆಗಿರೋದು ಸ್ಟೂಡೆಂಟ್ಸ್‌ಗೆ ಗುಡ್ ನ್ಯೂಸ್.
ಈ ರಿಕ್ರೂಟ್‌ಮೆಂಟ್ ಪ್ರೊಸೆಸ್ ಬಗ್ಗೆ ಹೇಳ್ಬೇಕಂದ್ರೆ, ಆಲ್‌ರೆಡಿ ಮುಖ್ಯಮಂತ್ರಿಯವರಿಗೆ ಪ್ರಪೋಸಲ್ ಸಬ್‌ಮಿಟ್ ಮಾಡಲಾಗಿದೆ. ಸಿಎಂ ಕಡೆಯಿಂದ ಪರ್ಮಿಷನ್ ಸಿಕ್ಕ ತಕ್ಷಣ ಅಫಿಷಿಯಲ್ ನೋಟಿಫಿಕೇಶನ್ ಹೊರಬೀಳಲಿದೆ. ಇಲಾಖೆಯಲ್ಲಿರೋ ಕೆಲಸದ ಒತ್ತಡ ಕಡಿಮೆ ಮಾಡೋಕೆ ಮತ್ತು ತುರ್ತು ಸಂದರ್ಭಗಳಲ್ಲಿ ಇನ್ನೂ ಎಫೆಕ್ಟಿವ್ ಆಗಿ ಸರ್ವಿಸ್ ಕೊಡೋಕೆ ಈ ಹೊಸ ನೇಮಕಾತಿ ತುಂಬಾ ಇಂಪಾರ್ಟೆಂಟ್ ಅಂತ ಪರಮೇಶ್ವರ ಅವರು ಹೇಳಿದ್ದಾರೆ. ಸೋ, ಫಿಸಿಕಲ್ ಫಿಟ್‌ನೆಸ್ ಇರೋ ಸ್ಟೂಡೆಂಟ್ಸ್ ನಿಮ್ಮ ಪ್ರಿಪರೇಷನ್ ಈಗಲೇ ಸ್ಟಾರ್ಟ್ ಮಾಡೋದು ಒಳ್ಳೆಯದು.
ಇನ್ನು ಇಲಾಖೆಯ ಮಾಡರ್ನೈಸೇಷನ್ ಬಗ್ಗೆಯೂ ಗವರ್ನಮೆಂಟ್ ತುಂಬಾ ಕಾಳಜಿ ವಹಿಸ್ತಿದೆ. ಫೈರ್ ಫೈಟರ್ಸ್ ಕಲ್ಯಾಣಕ್ಕಾಗಿ 'ಪೊಲೀಸ್ ಗೃಹ' ಮಾಡೆಲ್‌ನಲ್ಲೇ ಸುಸಜ್ಜಿತ ವಸತಿ ಗೃಹಗಳನ್ನ ಅಂದ್ರೆ ಹೌಸಿಂಗ್ ಸೌಲಭ್ಯವನ್ನ ಕೊಡಲಾಗುತ್ತೆ. ಜೊತೆಗೆ ಬೆಂಗಳೂರಿನ ಮಲ್ಟಿ-ಸ್ಟೋರಿ ಬಿಲ್ಡಿಂಗ್ಸ್ ಗಮನದಲ್ಲಿಟ್ಟುಕೊಂಡು 90 ಮೀಟರ್ ಹೈಟ್ ತಲುಪೋ 'ಏರಿಯಲ್ ಲ್ಯಾಡರ್ ಫ್ಲಾಟ್‌ಫಾರ್ಮ್' ವಾಹನವನ್ನ ಈಗಾಗ್ಲೇ ಹಸ್ತಾಂತರ ಮಾಡಲಾಗಿದೆ. 15 ಹೊಸ ತಾಲೂಕುಗಳಲ್ಲಿ ಹೊಸ ಫೈರ್ ಸ್ಟೇಷನ್ಸ್ ಕೂಡ ಶುರುವಾಗಲಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ಫಂಡ್ ರಿಲೀಸ್ ಆಗಿದೆ.
ಫೈನಲಿ, ಫೈರ್ ಡಿಪಾರ್ಟ್‌ಮೆಂಟ್ ಸೇರಬೇಕು ಅನ್ನೋ ಇಂಟರೆಸ್ಟ್ ಇರೋ ಸ್ಟೂಡೆಂಟ್ಸ್‌ಗೆ ಇದು ಪಕ್ಕಾ ಜಾಬ್ ಅಪ್‌ಡೇಟ್. ಗವರ್ನಮೆಂಟ್ ಅಗ್ನಿಶಾಮಕ ದಳಕ್ಕೆ ಹೈಟೆಕ್ ಸ್ಪರ್ಶ ನೀಡೋ ಜೊತೆಗೆ ಟ್ರೈನಿಂಗ್ ಸೆಂಟರ್ಸ್ ಕೂಡ ಅಪ್‌ಗ್ರೇಡ್ ಮಾಡ್ತಿದೆ. ಅಫಿಷಿಯಲ್ ನೋಟಿಫಿಕೇಶನ್ ಬಂದ ತಕ್ಷಣ ನಾವು ಫುಲ್ ಡೀಟೇಲ್ಸ್ ಕೊಡ್ತೀವಿ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Fire and emergency services recruitment Karnataka state government recruitment
Advertisment
Advertisment
Advertisment