/newsfirstlive-kannada/media/media_files/2025/08/28/sujatha-2025-08-28-11-51-45.jpg)
ಪೊಲೀಸರಿಗೆ ಸುಳ್ಳು ದೂರು ನೀಡಿದ್ದ ಸುಜಾತ ಭಟ್
ಎಸ್ ಐಟಿಯವರು ನನಗೆ ದುಡ್ಡು ಕೊಟ್ಟಿದ್ದಾರೆಂದು ಕೆಲವರು ಆರೋಪ ಮಾಡ್ತಾರೆ . ನನಗೆ ಯಾರೂ ದುಡ್ಡು ಕೊಟ್ಟಿಲ್ಲ. ಮಾನವೀಯತೆಯಿಂದ ಮೊಬೈಲ್ ಕೊಟ್ಟಿದ್ದಾರೆ. ನನ್ನ ಮೊಬೈಲ್ ಜೊತೆ ತುಂಬಾ ಅಟಾಚ್ ಆಗಿದ್ದೆ . ಅದಕ್ಕೆ ನನಗೆ ಮೊಬೈಲ್ ಕೊಟ್ಟಿದ್ದಾರೆ. ನಾನು ಅತ್ತು ಕೇಳಿದಕ್ಕೆ ಮೊಬೈಲ್ ಕೊಟ್ಟಿದ್ದಾರೆ. ಬಿ.ಪಿ. ಇರೋದಕ್ಕೆ ಚಾಕಲೇಟ್ ಕೊಟ್ಟಿದ್ದಾರೆ . ಕೆಲ ಯ್ಯೂಟ್ಯೂಬರ್ ಗಳು ಇದನ್ನೇ ಇಟ್ಟುಕೊಂಡು, ಸುಜಾತ ಭಟ್ ಗೆ ಮೊಬೈಲ್ ಭಾಗ್ಯ, ಸುಜಾತ ಭಟ್ ಗೆ ಚಾಕಲೇಟ್ ಭಾಗ್ಯ ಅಂತ ಸುದ್ದಿ ಮಾಡಿದ್ದಾರೆ . ಮಾನವೀಯತೆಯಿಂದ ಕೊಡೋದು ತಪ್ಪಾ?
ನನ್ನ ಮೊಬೈಲ್ ಅನ್ನು ತನಿಖೆಯ ಹಿತ ದೃಷ್ಟಿಯಿಂದ ಎಸ್ ಐ. ಟಿ. ಯವರು ತಗೊಂಡಿದ್ದಾರೆ . ಆ ಮೊಬೈಲ್ ಜೊತೆ ತುಂಬಾ ಅಟಾಚ್ ಆಗಿದ್ದೆ. ನನಗೆ ಮೊಬೈಲ್ ಬೇಕಿದ್ದ ಕಾರಣ ಮೊಬೈಲ್ ಕೊಡಿಸಿದ್ದಾರೆ. ನನಗೆ ಯಾವ ನಟನೂ ದುಡ್ಡು ಕೊಟ್ಟಿಲ್ಲ . ನನಗೆ ಯಾವ ಎಸ್ ಐ ಟಿಯವರು ದುಡ್ಡು ಕೊಟ್ಟಿಲ್ಲ ಎಂದಿದ್ದಾರೆ.
ಇನ್ನೂ ಯ್ಯೂಟ್ಯೂಬರ್ ಗಳ ವಿರುದ್ಧ ಸುಜಾತ ಭಟ್ ಗರಂ ಆಗಿದ್ದಾರೆ. ಯ್ಯೂಟ್ಯೂಬ್ ನಲ್ಲಿ ಏನೇನೋ ಹಾಕ್ತಾರೆ. ನನ್ನ ಬಳಿ ವಿಚಾರಿಸದೆ ಯಾವ ವಿಚಾರವನ್ನು ಹಾಕ್ಬೇಡಿ ಎಂದು ಯೂಟ್ಯೂಬರ್ ಗಳಿಗೆ ಸಿಟ್ಟಿನಿಂದಲೇ ಸುಜಾತ ಭಟ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.