/newsfirstlive-kannada/media/media_files/2025/11/11/ugc-new-2025-11-11-15-05-44.jpg)
ವಿಶ್ವವಿದ್ಯಾಲಯ ಅನುದಾನ ಆಯೋಗ ಅಂದ್ರೆ ಯೂನಿವರ್ಸಿಟಿ ಗ್ರ್ಯಾಂಟ್​ ಕಮಿಷನ್​​.. ಯೂಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಇದೇ ಡಿಸೆಂಬರ್​​​​ ನಡೆಯಲಿದೆ. ಈಗಾಗಲೇ ಡಿಸೆಂಬರ್​​ನ UGC NET ಪರೀಕ್ಷೆಗೆ ಹಾಜರಾಗಲು ಲಕ್ಷಾಂತರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ NET ಎಕ್ಸಾಂ ಬಗ್ಗೆ ಒಂದು ಬಿಗ್​ ಅಪ್ಡೇಟ್​ ಇದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಾಳೆ ಇಂದು ಅರ್ಜಿ ತಿದ್ದುಪಡಿ ವಿಂಡೋ ತೆರೆದಿದ್ದು, ಅಭ್ಯರ್ಥಿಗಳು ತಮ್ಮ ಫಾರ್ಮ್‌ಗಳಲ್ಲಿ ಆಗಿರೋ ಸಮಸ್ಯೆಗಳನ್ನು ಸರಿಪಡಿಸಬಹುದು. ತಿದ್ದುಪಡಿಗಳಿಗೆ ಕೇವಲ ಎರಡು ದಿನಗಳು ಮಾತ್ರ ಅವಕಾಶ ನೀಡಲಾಗಿದೆ. ಹಾಗಾಗಿ ನೋಂದಾಯಿತ ಅಭ್ಯರ್ಥಿಗಳು ನವೆಂಬರ್ 12ರ ಒಳಗೆ ತಮ್ಮ ಫಾರ್ಮ್‌ಗಳಿಗೆ ತಿದ್ದುಪಡಿ ಮಾಡಬಹುದು.
ದೇಶದ ವಿವಿಧ ಕೇಂದ್ರಗಳಲ್ಲಿ CBT ಮೋಡ್‌ನಲ್ಲಿ NET ಪರೀಕ್ಷೆ ನಡೆಯಲಿದೆ. ಡಿಸೆಂಬರ್ 31 ರಿಂದ ಜನವರಿ 7, 2026 ರವರೆಗೆ ಈ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಅವಧಿ 3 ಗಂಟೆ ಆಗಿದ್ದು, ವಿದ್ಯಾರ್ಥಿಗಳು ಗಮನಕೊಟ್ಟು ಎಕ್ಸಾಂ ಬರೆಯಬೇಕು.
/filters:format(webp)/newsfirstlive-kannada/media/media_files/2025/11/11/ugc-2025-11-11-15-06-19.jpg)
ಏನೇನ್​​​ ತಿದ್ದುಪಡಿ ಮಾಡಬೇಕು? ಮತ್ತು ಮಾಡಬಾರ್ದು?
ಅಭ್ಯರ್ಥಿಗಳು ಹೆಸರು, ಲಿಂಗ, ಫೋಟೋ, ಸಿಗ್ನೇಚರ್​​, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಶಾಶ್ವತ ವಿಳಾಸ, ಪತ್ರವ್ಯವಹಾರದ ವಿಳಾಸ, ಪರೀಕ್ಷಾ ನಗರ ಇತ್ಯಾದಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕೇವಲ ತಮ್ಮ ಜನ್ಮ ದಿನಾಂಕ, ವರ್ಗ, ತಂದೆ ಮತ್ತು ತಾಯಿ ಹೆಸರಿಗೆ ತಿದ್ದುಪಡಿ ಮಾಡಬಹುದು.
ತಿದ್ದುಪಡಿ ವಿಂಡೋ ಕ್ಲೋಸ್​ ಆದ ನಂತರ ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷಾ ನಗರ ಸ್ಲಿಪ್‌ಗಳನ್ನು ನೀಡಲಾಗುತ್ತದೆ. ನಂತರ ಪರೀಕ್ಷೆ ಪ್ರವೇಶ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಯುಜಿಸಿ ನೆಟ್ ಪರೀಕ್ಷೆಯನ್ನು ಸಹಾಯಕ ಪ್ರಾಧ್ಯಾಪಕ ಅರ್ಹತೆ, ಜೂನಿಯರ್ ರಿಸರ್ಚ್ ಫೆಲೋ (JRF) ಅರ್ಹತೆ ಮತ್ತು ಪಿಎಚ್‌ಡಿ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us