/newsfirstlive-kannada/media/media_files/2025/08/04/job_new-2-2025-08-04-21-59-33.jpg)
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಗೆ ಹೊಸ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ವು ದೇಶದ್ಯಾಂತ ನಡೆಸಿ ನೇಮಕ ಮಾಡುತ್ತದೆ.
ಜುಲೈ 29ರಂದೇ ಈ ಕೆಲಸಗಳಿಗೆ ಸಂಬಂಧಿಸಿದ ಇಪಿಎಫ್‌ಒ ಯುಪಿಎಸ್​ಸಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಖಾಲಿ ಹುದ್ದೆಗಳಿಗೆ ಬೇಕಾದ ಅರ್ಹತೆಯ ವಿವರಗಳು, ನೋಂದಣಿ, ಕೊನೆಯ ದಿನಾಂಕ, ಅರ್ಜಿ ಶುಲ್ಕ, ನೇಮಕಾತಿ ಪ್ರಕ್ರಿಯೆ ಇತ್ಯಾದಿಗಳು ಈ ಕೆಳಗಡೆ ನೀಡಲಾಗಿದೆ. ಇನ್ನು ಅಭ್ಯರ್ಥಿಗಳು ಅರ್ಜಿಯನ್ನು ಆನ್​ಲೈನ್​ ಮೂಲಕ ಮಾತ್ರ ಸಲ್ಲಿಸತಕ್ಕದ್ದು. ಉದ್ಯೋಗಕ್ಕೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಎರಡು ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ.
ಉದ್ಯೋಗದ ಹೆಸರು
Enforcement Officer (EO)
Accounts Officer (AO)
Assistant Provident Fund Commissioner (APFC)
ಒಟ್ಟು ಎಷ್ಟು ಉದ್ಯೋಗಗಳು?
230
/filters:format(webp)/newsfirstlive-kannada/media/media_files/2025/08/04/job_news-1-2025-08-04-21-59-53.jpg)
ವಿದ್ಯಾರ್ಹತೆ ಏನು?
ಯಾವುದೇ ಪದವಿ
ಕಂಪನಿ ಕಾನೂನು/ಕಾರ್ಮಿಕ ಕಾನೂನುಗಳು/ಸಾರ್ವಜನಿಕ ಆಡಳಿತದಲ್ಲಿ ಡಿಪ್ಲೊಮಾ
ವಯಸ್ಸಿನ ಮಿತಿ
30 ರಿಂದ 35 ವರ್ಷಗಳು
ಕೆಲಸ ಮಾಡುವ ಸ್ಥಳ- ದೇಶದ್ಯಾಂತ
ಮಾಸಿಕ ವೇತನ ಶ್ರೇಣಿ
43,600 ರೂಪಾಯಿಗಳಿಂದ 55,200 ರೂಪಾಯಿಗಳು
ಆಯ್ಕೆ ಪ್ರಕ್ರಿಯೆಗಳು
ಲಿಖಿತ ಪರೀಕ್ಷೆ
ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 18 ಆಗಸ್ಟ್​ 2025
ಪರೀಕ್ಷೆ ನಡೆಯುವ ದಿನಾಂಕ (ಸಾಧ್ಯತೆ)- 30 ನವೆಂಬರ್ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us