/newsfirstlive-kannada/media/media_files/2025/10/04/vtu-and-vc-vidya-shankar-2025-10-04-18-23-16.jpg)
VTI ಮತ್ತು ಉಪಕುಲಪತಿ ವಿದ್ಯಾಶಂಕರ್
ಈಗ ಇಂಜಿನಿಯರಿಂಗ್ ಓದಿದವರಿಗೂ ಕೆಲಸ ಸಿಗುತ್ತಿಲ್ಲ. ಇಂಜಿನಿಯರಿಂಗ್ ಕೋರ್ಸ್ ಗಳು ಔಟ್ ಡೇಟೆಡ್ ಎಂದು ಪ್ರಸಿದ್ದ ಕಂಪನಿಗಳ ಉನ್ನತಾಧಿಕಾರಿಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ವಿಟಿಯು ಸಿಲಬಸ್ ಅಪ್ ಡೇಟ್ ಆಗಿಲ್ಲ. ಓಬೀರಾಯನ ಕಾಲದ ಸಿಲಬಸ್ ಇಟ್ಟುಕೊಂಡು ಈಗಲೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದಾರೆ. ಲೇಟೆಸ್ಟ್ ಟೆಕ್ನಾಲಜಿಗೆ ತಕ್ಕಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿಲ್ಲ ಎಂಬ ದೂರುಗಳಿದ್ದವು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಗ್ಗೆ ಗೊತ್ತಿಲ್ಲ. ಐ.ಟಿ. ಕಂಪನಿಗಳ ಅಗತ್ಯತೆಗಳನ್ನು ಪೂರೈಸಲು ಇಂಜಿನಿಯರಿಂಗ್ ಪೂರೈಸಿದ ಅಭ್ಯರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಐ.ಟಿ. ಕಂಪನಿಗಳು ನೇರವಾಗಿ ಹೇಳುತ್ತಿದ್ದವು. ಹೀಗಾಗಿ ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಟಿಯು ಮುಂದಾಗಿದೆ.
ಹೀಗಾಗಿ ವಿಟಿಯು ಬಹಳ ವರ್ಷಗಳ ನಿದ್ದೆಯ ಬಳಿಕ ಈಗ ಎಚ್ಚೆತ್ತುಕೊಂಡಿದೆ. ಗಾಢ ಕುಂಭಕರ್ಣ ನಿದ್ದೆಯಿಂದ ವಿಟಿಯು ಎದ್ದಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದಲ್ಲಿ ಮಹತ್ತರ ಬದಲಾವಣೆ ಮಾಡುತ್ತಿದೆ. ಅರೇ ಏನಪ್ಪಾ ಅದು ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಗೆ ಗುಡ್ ನ್ಯೂಸ್ ಸಿಗುತ್ತಿದೆ.
ಪಠ್ಯದಲ್ಲಿ ಮಹತ್ತರ ಬದಲಾವಣೆ ತಂದ VTU
ವಿದ್ಯಾರ್ಥಿಗಳಿಷ್ಟದ ಕಾಲೇಜಿನಲ್ಲಿ ಇಂಟರ್ನ್ಶಿಪ್ ಮಾಡಲು ಅವಕಾಶ
ಪಠ್ಯದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ರಾಂತಿ!
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ತನ್ನ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಬರೇ ಪುಸ್ತಕದ ಚೌಕಟ್ಟಿಗೆ ಮಕ್ಕಳ ಸೀಮಿತ ಮಾಡದೇ ಇಂಡಸ್ಟ್ರಿಗೆ ಅನುಗುಣವಾಗಿ ವಿದ್ಯಾರ್ಥಿಗಳ ರೆಡಿ ಮಾಡುತ್ತಿದ್ದು ಅದಕ್ಕೆ ತಕ್ಕುದಾದ ಕರಿಕ್ಯುಲಂ ಸಿದ್ಧಪಡಿಸಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ AI ಕಡ್ಡಾಯ ಮಾಡಿದೆ. ಪಠ್ಯಕ್ರಮ, ಇಂಟರ್ನ್ಶಿಪ್ ಪ್ರತೀ ವಿಚಾರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ವಿಟಿಯು ಉಪಕುಲಪತಿ ವಿದ್ಯಾಶಂಕರ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿವಿಗಳಿಗೆ ಫೈಟ್ ಕೊಡಲು ವಿವಿ ಕುಲಪತಿ ವಿದ್ಯಾ ಶಂಕರ್ ಮಾಸ್ಟರ್ ಪ್ಲಾನ್ ಮಾಡಿದ್ದು ವಿದ್ಯಾರ್ಥಿಗಳು ಎಲ್ಲಿ ಬೇಕಾದ್ರೂ ಇಂಟರ್ನ್ಶಿಪ್ ಮಾಡಬಹುದು. ಎಲ್ಲಿ ಇಂಟರ್ನ್ಶಿಪ್ ಮಾಡ್ತಾರೆ ಆಯಾ ಸಂಸ್ಥೆಯ ಲೆಟರ್ ಆಫ್ ಅಪ್ರೂವಲ್ ಮಾತ್ರ ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕು. ವಿದ್ಯಾರ್ಥಿಗಳ ಕಲಿಕೆಗೆ ಡಿಜಿಟಲ್ ಸಹಾಯದಿಂದ ಮುಕ್ತ ಅವಕಾಶ ಕಲ್ಪಿಸಿ ಕೊಡಲಾಗಿದೆ.
ಅಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು, ಐಟಿ-ಬಿಟಿ ಕಂಪನಿಗಳು,2,000 ಕ್ಕೂ ಹೆಚ್ಚು ಶಿಕ್ಷಕರು ಮತ್ತು 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಇನ್ಪುಟ್ ಪಡೆದು ಈ ಸಲ ಪಠ್ಯ ರಚನೆ ಮಾಡಲಾಗಿದೆ. ಕೈಗಾರಿಕೆಗಳು ಬಯಸುವ, ಕೌಶಲ ಆಧಾರಿತವಾದ ಪಠ್ಯ ರಚನೆ ಮಾಡಲಾಗಿದೆ. ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್‌ಶಿಪ್ ತರಬೇತಿ ನೀಡಲಾಗುತ್ತೆ. ವಿದೇಶಗಳಿಗೆ ಅಧ್ಯಾಪಕರು/ವಿದ್ಯಾರ್ಥಿ ವಿನಿಯಮದಂಥ ಯೋಜನೆ ಹಾಕಿ ಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಶೈಕ್ಷಣಿಕ ವೇಳಾಪಟ್ಟಿ ಮಾದರಿಯಲ್ಲೇ ವಿವಿ ವೇಳಾಪಟ್ಟಿ ಕೂಡ ರಚನೆ ಮಾಡಲಾಗಿದೆ.
ಜೊತೆಗೆ ತ್ವರಿತವಾಗಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಗೆ ಮತ್ತಷ್ಟು ಚುರುಕು ಕೊಡಲಾಗಿದ್ದು ವಿದೇಶಕ್ಕೆ ವಿದ್ಯಾಭ್ಯಾಸ ಮಾಡುವವರಿಗೆ ಈ ಬದಲಾವಣೆ ಅನುಕೂಲವಾಗಲಿದೆ. ಕ್ವಾಂಟಮ್ ಕಂಪ್ಯೂಟಿಂಗ್, ಎಐ ಮತ್ತು ಇತರ ಇತ್ತೀಚಿನ ವಿಷಯಗಳ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದು ತಾಂತ್ರಿಕ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸುತ್ತಿರುವ ಆರ್ಟಿಫಿಯಲ್ ಇಂಟೆಲಿಜೆನ್ಸ್ VTU ಅಲ್ಲಿ ಕಡ್ಡಾಯ ಮಾಡಿದ್ದು ಅವಿಭಾಜ್ಯ ಅಂಗವಾಗಿದೆ
ಒಟ್ಟಿನಲ್ಲಿ ಶೈಕ್ಷಣಿಕ ವೇಳಾಪಟ್ಟಿ ಬದಲಾವಣೆ ವಿದೇಶದಲ್ಲಿ ಸ್ನಾತಕೋತ್ತರ ಮಾಡುವವರಿಗೆ ಅನುಕೂಲ ಆಗಲಿದ್ದು AI ಯುಗ ಹಿನ್ನಲೆಯಲ್ಲಿ AI ಕಡ್ಡಾಯ ಮಾಡಿರುವುದು ವಿದ್ಯಾರ್ಥಿಗಳಿಗೆ ಪ್ಲಸ್ ಆಗುತ್ತೆ.
ವಿವಿ ಆಧುನಿಕ ಆಲೋಚನೆ ವಿದ್ಯಾರ್ಥಿ ಸ್ನೇಹಿ ಆಗಲಿದ್ದು ಸರಳವಾಗಿ ಉದ್ಯೋಗ ಸಿಗುವ ಸಾಧ್ಯತೆಯೂ ಇರುತ್ತೆ. ಈ ರೀತಿಯಾದ ಸ್ಟೂಡೆಂಟ್ಸ್ ಫ್ರೆಂಡ್ಲಿ ಯೋಜನೆಗಳು VTU ಕಡೆಯಿಂದ ಇನ್ನು ಹೆಚ್ಚಾಗಲಿ ಅನ್ನೋದೇ ನಮ್ಮ ಆಶಯ.
ಪ್ರಗತಿ ಶೆಟ್ಟಿ
ನ್ಯೂಸ್ ಫಸ್ಟ್.
ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.