/newsfirstlive-kannada/media/post_attachments/wp-content/uploads/2025/01/Husband-wife-AI.jpg)
ಜಗತ್ತು ಚಲನಶೀಲವಾಗಿರಬೇಕಾದರೆ ಕಾಮ ಎನ್ನುವುದು ಕೂಡ ಸದಾ ಚಲನಶೀಲವಾಗಿರಲೇಬೇಕು. ಇಲ್ಲಿ ಪ್ರತಿ ಜೀವಿಗಳ ಸಂತಾನ ಬೆಳೆಯಬೇಕು ಅಂದ್ರೆ ಆಯಾ ಜೀವಿಗಳ ಗಂಡು ಹೆಣ್ಣುಗಳು ಮಿಲನ ಕ್ರಿಯೆಯಲ್ಲಿ ತೊಡಗಲೇಬೇಕು. ಕಾಮ ಎಂಬುವುದು ಆಯಾ ದೇಹಗಳ ನಡುವೆ ಸಂಭ್ರಮಿಸಲಬೇಕು. ಅದಕ್ಕೆ ಒಂದು ಗಂಡು ಒಂದು ಹೆಣ್ಣು ಜೀವ ಜೊತೆಗೆ ಬೇಕೇ ಬೇಕು. ಆದ್ರೆ ಹೆಣ್ಣು ಗಂಡುಗಳ ಅವಶ್ಯವಿಲ್ಲದೇ ಮಗುವನ್ನು ಸೃಷ್ಟಿಸಲು ಸಾಧ್ಯ ಎಂಬ ಬೆರಗುಗೊಳಿಸುವ ಸತ್ಯವೊಂದನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ.
ಇದೊಂದು ರೀತಿ ಸೈನ್ಸ್ ಫಿಕ್ಷನ್ ಸಿನಿಮಾದ ಕಥೆಯಿದ್ದಂಗೆ ಇದೆ ಎಂದು ನಿಮಗೆ ಎನಿಸಬಹುದು. ಆದ್ರೆ ಯುಕೆಯ ಹ್ಯೂಮನ್ ಫರ್ಟಿಲೈಸೆಷನ್ ಆ್ಯಂಡ್ ಎಂಬ್ರಾಲಾಜಿ ಅಥಾರಿಟಿ (HFEA) ಇತ್ತೀಚೆಗೆ ಬಹಿರಂಗಗೊಳಿಸಿದ ಒಂದು ವಿಷಯ ಇಡೀ ಜಗತ್ತನ್ನೆ ಬೆಚ್ಚಿ ಬೀಳಿಸಿದೆ. ಈ ಒಂದು ಸಂಸ್ಥೆ ಹೇಳುವ ಪ್ರಕಾರ, ವಿಜ್ಞಾನಿಗಳು ಮೊಟ್ಟೆ ಹಾಗೂ ವಿರ್ಯವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಗೊಳಿಸುವ ದಾರಿಯ ಅತ್ಯಂತ ಸಮೀಪದಲ್ಲಿದ್ದಾರಂತೆ. ಇದು ಭವಿಷ್ಯದಲ್ಲಿ ಮಹಾ ಬದಲಾವಣೆ ತರಲಿದೆ. ಇದಕ್ಕೆ ವಿಟ್ರೊ ಗೆಮೆಟೀಸ್ (Vitro Gametes) ಎಂದು ಗುರುತಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಈ Vitro Gametes ಎಂಬ ಟೆಕ್ನಾಲಜಿಯ ಮೂಲಕ ಚರ್ಮ ಇಲ್ಲವೇ ಕಾಂಡಕೋಶಗಳನ್ನು (stem cells) ರಿಪ್ರೋಗ್ರಾಮ್ಮಿಂಗ್ ಮಾಡುವ ಮೂಲಕ ಮಾನವ ಮೊಟ್ಟೆಗಳನ್ನ ಇಲ್ಲವೇ ಸ್ಪರ್ಮ್​ ಅಂದ್ರೆ ವಿರ್ಯವನ್ನ ಪ್ರಯೋಗಾಲಯದಲ್ಲಿ ಸೃಷ್ಟಿಸಲಿದ್ದಾರೆ. ಈ ಮೂಲಕ ಮಕ್ಕಳನ್ನು ಗಂಡು ಹೆಣ್ಣುಗಳ ಮಿಲನವಿಲ್ಲದೇ ಹುಟ್ಟಿಸುವ ಒಂದು ಪ್ರಯೋಗ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೆಚ್​ಎಫ್​​ಇಎನ ಸಿಇಒ ಪೀಟರ್ ಥಾಂಪ್ಸನ್ ಹೇಳಿದ್ದಾರೆ. ಇದು ಮಾನವ ಸಂತಾನೋತ್ಪತ್ತಿಯಲ್ಲಿಯೇ ಮಹಾ ಕ್ರಾಂತಿಕಾರಕ ಹೆಜ್ಜೆ. ಈ ಒಂದ ತಂತ್ರ ಮಾನವ ಮೊಟ್ಟೆಗಳು ಹಾಗೂ ವಿರ್ಯಗಳು ಹೇರಳವಾಗಿ ದೊರೆಯುವಂತೆ ನೋಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಉಪಯೋಗಕ್ಕೆ ಬಾರದ 200 ಮನೆಗಳಿಂದಲೇ ಗಳಿಕೆ ಆರಂಭ; ವರ್ಷಕ್ಕೆ ಎಣಿಸಿದ್ದು ಎಷ್ಟು ಕೋಟಿ ಹಣ?
ಒಂದು ವೇಳೆ ಈ ಒಂದು ತಂತ್ರಜ್ಞಾನ ಸಂಪೂರ್ಣವಾಗಿ ಯಶಸ್ವಿಯಾದಲ್ಲಿ ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿ ಅಭಿವೃದ್ಧಿಗೊಂಡಲ್ಲಿ, ಸಮಾಜ ಇದನ್ನು ಮನಸ್ಸಪೂರ್ವಕವಾಗಿ ಒಪ್ಪಿಕೊಂಡಲ್ಲಿ ಅನೇಕ ಜನರಿಗೆ ವರದಾನವಾಗಲಿದೆ. ಯಾವ ಜೋಡಿಗಳು ಮಕ್ಕಳಿಲ್ಲ ಎಂದು ಪರದಾಡುತ್ತಾರೋ ಅವರಿಗೆ ಇದು ತುಂಬಾ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಈ ವಿಚಾರ ಅನೇಕ ಗೊಂದಲಗಳನ್ನು ಕೂಡ ಸೃಷ್ಟಿಮಾಡಿದೆ. ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಇದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ. ಗಂಡು ಹೆಣ್ಣಿನ ಮಿಲನ ಕ್ರಿಯೆಯೇ ಇಲ್ಲದೇ ಮಕ್ಕಳನ್ನು ಸೃಷ್ಟಿ ಮಾಡುವುದು ಸರಿಯಾ? ಈ ಒಂದು ಪ್ರಕ್ರಿಯೆ ಕುಟುಂಬ ಎಂಬ ಒಂದು ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಋಣಾತ್ಮಕವಾಗಿ ಬಡುಮೇಲು ಮಾಡಲಿದೆಯಾ? ಅದು ಮಾತ್ರವಲ್ಲ ಈ ಒಂದು ತಂತ್ರಜ್ಞಾನವನ್ನು ಜಗತ್ತು ಮನಸ್ಸಪೂರ್ವಕವಾಗಿ ಒಪ್ಪಿಕೊಳ್ಳುವ ಕಾಲಮಾನ ಬರಲು ಬಹಳಷ್ಟು ವರ್ಷಗಳವರೆಗೆ ಕಾಯಬೇಕು ಎಂದು ಕೂಡ ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us