Advertisment

ಡಾರ್ಕ್​ ಚಾಕೊಲೇಟ್‌ಗಳು ಡಯಾಬಿಟಿಸ್ ಕಡಿಮೆ ಮಾಡುತ್ತಾ? ಅಧ್ಯಯನಗಳಿಂದ ಮಹತ್ವದ ಮಾಹಿತಿ ಬಹಿರಂಗ!

author-image
Gopal Kulkarni
Updated On
ಡಾರ್ಕ್​ ಚಾಕೊಲೇಟ್‌ಗಳು ಡಯಾಬಿಟಿಸ್ ಕಡಿಮೆ ಮಾಡುತ್ತಾ? ಅಧ್ಯಯನಗಳಿಂದ ಮಹತ್ವದ ಮಾಹಿತಿ ಬಹಿರಂಗ!
Advertisment
  • ಡಾರ್ಕ್​ ಚಾಕೊಲೇಟ್​ನಲ್ಲಿದೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಗುಣ
  • ಸರಿಯಾದ ಪ್ರಮಾಣದಲ್ಲಿ ಈ ಚಾಕೊಲೇಟ್ ತಿನ್ನುವುದರಿಂದ ಇದೆ ಲಾಭ
  • ಇನ್ಸೂಲಿನ್ ಸೆನ್ಸಿಟಿವಿಟಿ, ಒತ್ತಡ ನಿವಾರಣೆಯನ್ನು ಮಾಡುತ್ತದೆ ಚಾಕೊಲೇಟ್

ಡಾರ್ಕ್​ ಚಾಕೊಲೇಟ್​ಗಳು ತಮ್ಮ ಶ್ರೀಮಂತಿಕೆಯ ರುಚಿಯಿಂದಲೇ ಜನರನ್ನು ಆಕರ್ಷಿಸುತ್ತವೆ. ಅವುಗಳಿಂದಾಗುವ ಆರೋಗ್ಯ ಪ್ರಯೋಜನಗಳಿಂದ ಜನರನ್ನು ಹೆಚ್ಚು ಹೆಚ್ಚು ಸೆಳೆಯುತ್ತವೆ. ಇತ್ತೀಚೆಗೆ ಬಂದ ಕೆಲವು ಅಧ್ಯಯನಗಳು ಡಾರ್ಕ್​ ಚಾಕೊಲೇಟ್​ನಿಂದಾಗು ಪ್ರಯೋಜನಗಳನ್ನು ತಿಳಿಸುವಾಗ, ಅದು ಡಯಾಬಿಟಿಸ್​ ಟೈಪ್ 2 ವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದೆ.
ಡಾರ್ಕ್​ ಚಾಕೊಲೇಟ್ನಲ್ಲಿ ಪ್ಲೆವೊನೊಯ್ಡ್ಸ್ ಹಾಗೂ ಪಾಲಿಪೆನೊಲ್ಸ್​ ಎಂಬ ಅಂಶಗಳನ್ನು ಹೊಂದಿದ್ದು ಇದು ದೇಹದಲ್ಲಿ ಇನ್ಸೂಲಿನ್ ಸೆನ್ಸಿಟಿವಿಟಿಯನ್ನು ಕಡಿಮೆ ಮಾಡುತ್ತದೆ. ಮತ್ತು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಲಾಗಿದೆ.

Advertisment

ಡಾರ್ಕ್​ ಚಾಕಲೇಟ್ ಸಕ್ಕರೆ ಕಾಯಿಲೆಯನ್ನು ಹೇಗೆ ನಿಯಂತ್ರಿಸುತ್ತದೆ?
ಜರ್ನಲ್ ಆಫ್ ನ್ಯೂಟ್ರಿಷನಲ್ ಬಯೋಕೆಮೆಸ್ಟ್ರಿ ಎಂಬ ಅಧ್ಯಯನದಲ್ಲಿ ಈಗಾಗಲೇ ನಾವು ಹೇಳಿದಂತೆ ಡಾರ್ಕ್ ಚಾಕೊಲೇಟ್​ನಲ್ಲಿರುವ ಕೊಕೊದಲ್ಲಿ ಪ್ಲೆವೊನೊಯ್ಡ್ಸ್ ಕಂಡು ಬಂದಿರುವುದರಿಂದ ಇದು ಇನ್ಸೂಸಲಿನ್ ಸೆನ್ಸಿಟಿವಿಟಿಯನ್ನು ಕಡಿಮೆ ಮಾಡುತ್ತದೆ. ಇನ್ಸೂಲಿನ್​ ಕಾರ್ಯಕ್ಷಮತೆಯನ್ನ ಸುಧಾರಿಸುತ್ತದೆ.ರಕ್ತದಲ್ಲಿ ಗ್ಲುಕೋಸ್ ಅಂಶದ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರುವ ಅಪಾಯವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ:ಇಡೀ ಭಾರತೀಯರಿಗೆ ಗುಡ್‌ನ್ಯೂಸ್.. ಜಗತ್ತಿನ ಮಹಾಮಾರಿ ಕ್ಯಾನ್ಸರ್‌ಗೂ ಬಂತು ವ್ಯಾಕ್ಸಿನ್​; ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!

publive-image

ಒತ್ತಡವನ್ನು ನಿವಾರಿಸುತ್ತದೆ
ಡಾರ್ಕ್ ಚಾಕೊಲೇಟ್​ನಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್ಸ್ ಅಂಶ ಇರುವುದರಿಂದ ಇದು ಒತ್ತಡವನ್ನು ಸರಳವಾಗಿ ನಿವಾರಿಸುತ್ತದೆ. ಇದು ಕೋಶಗಳ ಮೇಲೆ ಆಗುವ ಹಾನಿಗಳನ್ನು ತಪ್ಪಿಸುವುದರಿಂದ ಒತ್ತಡ ನಿಯಂತ್ರಣಗೊಳ್ಳುತ್ತದೆ. ಸಕ್ಕರೆ ಕಾಯಿಲೆಗೆ ಪ್ರಮುಖ ಕಾರಣಗಳಲ್ಲಿ ಒತ್ತಡವೂ ಕೂಡ ಒಂದು

Advertisment

ನರಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
ಬಿಎಂಜಿ ಓಪನ್ ಹಾರ್ಟ್ ಎಂಬ ಬಿಡುಗಡೆಯಾದ ಸಂಶೋಧನೆಯಲ್ಲಿ ಡಾರ್ಕ್​ ಚಾಕೊಲೇಟ್​ನಲ್ಲಿರುವ ಕೊಕೊ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದರಿಂದಾಗಿ ಚಯಾಪಚಯ ಉತ್ತಮಗೊಂಡು ಸಕ್ಕರೆ ಕಾಯಿಲೆಯನ್ನು ತಡೆಯುವಲ್ಲಿ ಅನುಕೂಲವಾಗುತ್ತದೆ.

publive-image

ಅನಾರೋಗ್ಯಕರ ಸ್ನ್ಯಾಕ್ಸ್​ಗಳನ್ನು ತಿನ್ನುವ ಬಯಕೆ ಇರಲ್ಲ
ಡಾರ್ಕ್​ ಚಾಕೊಲೇಟ್​ಗಳಲ್ಲಿ ರಿಚ್ ಟೇಸ್ಟ್​ ಇರುವುದರಿಂದ ಇದರಲ್ಲಿ ಮಿಲ್ಕ್​ ಚಾಕೊಲೇಟ್​ಗಳಿಗಿಂತ ಕಡಿಮೆ ಸಕ್ಕರೆ ಅಂಶವಿರುತ್ತದೆ. ಇದು ಸ್ನ್ಯಾಕ್ಸ್​ಗಳನ್ನು ತಿನ್ನುವ ಕಡುಬಯಕೆಗಳನ್ನು ನಿಯಂತ್ರಿಸುತ್ತದೆ. ಅದರಲ್ಲೂ ಸಕ್ಕರೆ ಅಂಶವಿರುವ ಸ್ನ್ಯಾಕ್ಸ್​ಗಳ ಬಗ್ಗೆ ಅತಿಯಾಸೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:ಬಾಯಿಯ ಆರೋಗ್ಯಕ್ಕೆ ಈ 5 ಫುಡ್​ಗಳು ಸೂಪರ್; ಯಾವುವು ಅಂತ ಗೊತ್ತಾ?

ಹೀಗೆ ಡಾರ್ಕ್​ ಚಾಕೊಲೇಟ್​ಗಳಲ್ಲಿ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ. ಪ್ರಮುಖವಾಗಿ ಸಕ್ಕರೆ ಕಾಯಿಲೆಯಿರುವವರಿಗೆ ಇದು ನಿಜಕ್ಕೂ ರಾಮಬಾಣ, ಇದರಲ್ಲಿರುವ ಹಲವು ಪೋಷಕಾಂಶಗಳು ಜೀವಸತ್ವಗಳಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment