/newsfirstlive-kannada/media/post_attachments/wp-content/uploads/2024/11/TTD-NEW-RESOLUTION-4.jpg)
ಪಚನಕ್ರಿಯೆ ಸಮಸ್ಯೆ ನಮಗೆ ಒಂದು ಸಣ್ಣ ಆರೋಗ್ಯ ಸಮಸ್ಯೆ ಎನಿಸಬಹುದು. ಆದ್ರೆ ಇದು ಅತಿಯಾದರೆ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡುವುದು ಖಚಿತ. ಅದರಲ್ಲಿ ಹೃದಯಾಘಾತ ಕೂಡ ಒಂದು ಅಂದರೆ ನೀವು ನಂಬಲೇಬೇಕು. ಆರಂಭದಲ್ಲಿ ನಮಗೆ ಇದು ಗೊತ್ತಾಗದೇ ಹೋಗಬಹುದು. ಆದ್ರೆ, ಹಲವು ಸಂಶೋಧನೆಗಳು ಜೀರ್ಣಾಂಗವ್ಯೂಹ ಅಸ್ವಸ್ಥೆಗಳು ಅದರಲ್ಲೂ ತೀವ್ರವಾದ ಸಮಸ್ಯೆಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ಹೇಳಿವೆ.
ಕರುಳು ಮತ್ತು ಹೃದಯ ಒಂದೊಕ್ಕೊಂದು ಶಾರೀರಿಕ ಕಾರ್ಯವಿಧಾನಗಳ ನಂಟನ್ನು ಹೊಂದಿದೆ. ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ಹೃದಯ ಆರೋಗ್ಯದ ಮೇಲೆ ಅಪಾಯ ತಂದೊಡ್ಡುವ ಹಾಗೂ ಹೃದಯಾಘತಕ್ಕೆ ಕಾರಣವಾಗುವ ಉರಿಯೂತವನ್ನು ನಿಯಂತ್ರಿಸುತ್ತವೆ. ಪಚನಕ್ರಿಯೆಯ ತೊಂದರೆಗಳು ಈ ಒಂದು ವ್ಯವಸ್ಥೆಯ ಸಮತೋಲನವನ್ನೇ ಬಿಗಾಡಿಯಿಸಿ ಹಾಕುತ್ತದೆ. ಇದರಿಂದ ಹಾರ್ಟ್ ಅಟ್ಯಾಕ್ನಂತಹ ಸಮಸ್ಯೆಗಳಿಗೆ ನಾವು ಒಳಗಾಗಬೇಕಾಗುತ್ತದೆ.
ಪಚನಕ್ರಿಯೆಯ ಸಮಸ್ಯೆಯಿಂದ ನಾವು ಮಲ ವಿಸರ್ಜನೆಯನ್ನು ಮಾಡುವಾಗ ಆಯಾಸ ಶುರುವಾಗುತ್ತದೆ. ಇದರಿಂದ ಸಹಜವಾಗಿ ಮಲಬದ್ಧತೆಯಂತಹ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದು ರಕ್ತದೊತ್ತಡದ ರೋಗಗಳಿಗೆ ಕಾರಣವಾಗುತ್ತದೆ ಇದು ಸಹಜವಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ತೀವ್ರ ಮಲಬದ್ಧತೆಯೂ ಕೂಡ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಲಬದ್ಧತೆ ಸಮಸ್ಯೆ ಇದ್ದವರು ವಿಸರ್ಜನೆಯ ವೇಳೆ ಹೆಚ್ಚು ಒತ್ತಡವನ್ನು ಹಾಕಬೇಕಾಗುತ್ತದೆ. ಇದು ಸಹಜವಾಗಿ ಹೃದಯ ಮೇಲೂ ಒತ್ತಡ ಬೀಳುವುದರಿಂದ ಹೃದಯಾಘಾತದಂತಹ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ.
ಇದನ್ನೂ ಓದಿ: ‘ರುಚಿ’ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!
ಮಲಬದ್ಧತೆಯಿಂದ ಕರುಳಿನ ಭಾಗದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಈ ಒಂದು ಪ್ರಕ್ರಿಯಿಂದ ನರಮಂಡಲಗಳಲ್ಲಿ ಕೊಬ್ಬು ಶೇಖರಣೆಯಾಗುವ ಸಾಧ್ಯತೆ ಉಂಟು. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಪಚನಕ್ರಿಯೆಯ ತೊಂದರೆಗಳು ಮಲಬದ್ಧತೆಯ ಜೊತೆಗೆ ಉರಿಯೂತವನ್ನು ಕೂಡ ಸೃಷ್ಟಿ ಮಾಡುತ್ತದೆ. ಈ ಉರಿಯೂತದಿಂದಾಗಿ ಕರುಳಿನಲ್ಲಿ ಟಾಕ್ಸಿಕ್ ಅಂಶವು ಸೇರಿಕೊಳ್ಳುತ್ತದೆ ಇದು ಅನೇಕ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಈ ಎರಡು ಕಾಯಿಲೆಗಳಿಂದ ಆಚೆ ಬರಲು ಸರಳ ಮಾರ್ಗಗಳು ಕೂಡ ಇವೆ. ಸರಿಯಾದ ಆಹಾರ ಕ್ರಮವನ್ನು ನಮ್ಮದಾಗಿಸಿಕೊಳ್ಳುವುದರಿಂದ ನಾವು ಪಚನಕ್ರಿಯೆಯನ್ನು ಸರಿಯಾಗಿಸಿಕೊಂಡು ಉರಿಯೂತ ಹಾಗೂ ಮಲಬದ್ಧತೆಯಿಂದ ಆಚೆ ಬರಬಹುದು.
ಇದನ್ನೂ ಓದಿ:ವಾರದಲ್ಲಿ ಎಷ್ಟು ಬಾರಿ ಬಿಯರ್ ಕುಡಿದ್ರೆ ಸೇಫ್? ಇದರಿಂದ ಏನೆಲ್ಲಾ ಪ್ರಯೋಜನೆಗಳು ಇವೆ?
ನಮ್ಮ ಆಹಾರ ಕ್ರಮದಲ್ಲಿ ಹೆಚ್ಚು ಹಣ್ಣು ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ತರಕಾರಿಯನ್ನು ಹೆಚ್ಚು ತಿನ್ನಬೇಕು. ಧಾನ್ಯಗಳನ್ನು ಹೆಚ್ಚು ಬಳಸುವುದರಿಂದ ನಮ್ಮ ವಿಸರ್ಜನೆ ಕ್ರಿಯೆಯೂ ಸರಳವಾಗಿ ಆಗುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ.
ಸರಿಯಾಗಿ ನೀರು ಕುಡಿಯುವುದು ಸಹ ಬಹಳ ಪ್ರಮುಖವಾದದ್ದು. ಎಲ್ಲ ರೋಗಗಳಿಗೂ ರಾಮಬಾಣ ಅಂದ್ರೆ ಅದು ವ್ಯಾಯಾಮ. ನಿತ್ಯ ಒಂದಿಷ್ಟು ವ್ಯಾಯಾಮ ಮಾಡುವುದರಿಂದ ಕೇವಲ ಪಚನಕ್ರಿಯೆ ಸಮಸ್ಯೆಯನ್ನು ಮಾತ್ರವಲ್ಲ ಹಲವು ರೋಗಗಳಿಂದ ನಾವು ದೂರ ಇರಬಹುದು. ಇದು ಮಾನಸಿಕ ಒತ್ತಡವನ್ನು ಸರಿಯಾಗಿ ನಿರ್ವಹಿಸುವುದರ ಜೊತೆಗೆ ದೇಹದಲ್ಲಿ ಸರಿಯಾಗಿ ರಕ್ತಪರಿಚಲನೆ ಆಗುವಂತೆ ನೋಡಿಕೊಂಡು ಜೀರ್ಣಕ್ರಿಯೆ ಸಮಸ್ಯೆಯನ್ನು ದೂರಗೊಳಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ