/newsfirstlive-kannada/media/post_attachments/wp-content/uploads/2024/08/SHIEK-HASInA-1.jpg)
ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಆದ ಬೆಳವಣಿಗೆಗಳು ಅಲ್ಲಿನ ರಾಜಕೀಯ ವಲಯದಲ್ಲಿ ಕ್ಷಿಪ್ರ ಕ್ರಾಂತಿಯನ್ನುಂಟು ಮಾಡಿವೆ. ಮೊದ ಮೊದಲು ಮೀಸಲಾತಿಯ ನೆಪದಲ್ಲಿ ಆರಂಭವಾದ ಪ್ರತಿಭಟನೆ ಮುಂದೆ ಬೇರೆಯದ್ದೇ ಕಾವನ್ನು ಪಡೆದು ಬಾಂಗ್ಲಾದೇಶದ ಅಂದಿನ ಪ್ರಧಾನಿ ಶೇಖ್ ಹಸೀನಾ ಪದತ್ಯಾಗದವರೆಗೂ ಹೋಗಿ ನಿಂತಿತು. ಸದ್ಯ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಮೊಹಮ್ಮದ್ ಯೂನಸ್ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಒಂದು ಕಡೆ ಬಾಂಗ್ಲಾದಲ್ಲಿ ಕ್ಷಿಪ್ರಕ್ರಾಂತಿಯಿಂದಾಗಿ ಅಲ್ಲಿಯ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಬಂದು ನೆಲೆಸುವಂತಾಗಿದೆ. ಶೇಖ್ ಹಸೀನಾ ಇದೇ ಮೊದಲ ಬಾರಿ ಭಾರತದ ಆಶ್ರಯ ಬಯಸಿ ಬಂದಿದ್ದಲ್ಲ. ಈ ಹಿಂದೆ ಅವರ ತಂದೆ ಶೇಖ್ ಮುಜಿಬುರ್ರ ರೆಹಮಾನ್ ಬಾಂಗ್ಲಾದೇಶದಲ್ಲಿ ಹತ್ಯೆಯಾದಗಲೂ ಕೂಡ ಇದೇ ಶೇಖ್ ಹಸೀನಾ ಆಶ್ರಯ ಕೋರಿ ಭಾರತಕ್ಕೆ ಬಂದಿದ್ದರು. ಆಗಲೂ ಕೂಡ ಶೇಖ್ ಹಸೀನಾರ ತಲೆಯನ್ನು ಭಾರತ ಕಾಯ್ದಿತ್ತು.
ಈಗ ಕಾಲ ಸರಿದಿದೆ. ಢಾಕಾದ ಬುರಿಗಂಗಾದಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಹಾಗೆಯೇ ರಾಜಕೀಯ ಅಖಾಡದಲ್ಲಿ ಬಾಂಗ್ಲಾದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ. ಈಗ ಶೇಖ್ ಹಸೀನಾ ಭಾರತಕ್ಕೇನೋ ಬಂದಿದ್ದಾರೆ. ಆದ್ರೆ ಒಂದು ಹಂತದಲ್ಲಿ ಭಾರತ-ಬಾಂಗ್ಲಾದೇಶದ ನಡುವಿನ ಆಂತರಿಕ ಸಂಬಂಧಕ್ಕೆ ಒಂದು ಹಂತಕ್ಕೆ ತಲೆನೋವಾಗಿ ಕಾಡುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಬಾಂಗ್ಲಾದೇಶದ ನೂತನ ಸರ್ಕಾರ ಭಾರತಕ್ಕೆ ಮಾಡಿಕೊಂಡ ಆ ಮನವಿ
ಶೇಖ್ ಹಸೀನಾರನ್ನು ಹಸ್ತಾಂತರ ಮಾಡುವಂತೆ ಯೂನಸ್ ಸರ್ಕಾರದ ಮನವಿ
ಯೂನಸ್ ಸರ್ಕಾರ, ಭಾರತದಲ್ಲಿ ಸದ್ಯ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿಯನ್ನು ನಮಗೆ ಹಸ್ತಾಂತರಿಸಿ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಈಗಾಗಲೇ ಈ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವ ಮೊಹಮ್ಮದ್ ತೌಹಿದ್ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಒಂದು ಕೊಲೆ ಕೇಸ್ ಕೂಡ ಇದೆ ಈ ಕಾರಣದಿಂದಾಗಿ ಭಾರತಕ್ಕೆ ಹಸೀನಾರನ್ನು ಹಸ್ತಾಂತರಿಸುವಂತೆ ನಾವು ಮನವಿ ಮಾಡುತ್ತಿದ್ದೇವೆ ಎಂದು ಮೊಹಮ್ಮದ್ ತೌಹಿದ್ ಹೇಳಿದ್ದಾರೆ.
ಇದನ್ನೂ ಓದಿ:ಅಬ್ಬಬ್ಬಾ.. 542 ಕೆಜಿ ತೂಕ ಇದ್ದ ದಡೂತಿ ದೇಹ ಇಷ್ಟು ಕಡಿಮೆ ಆಯ್ತಾ? ಈತನ ಭಾರ ಇಳಿಸಿದ ದೊರೆ ಯಾರು?
ಸದ್ಯ ಶೇಖ್ ಹಸೀನಾ ಇಂಗ್ಲೆಂಡ್ ಇಲ್ಲವೇ ಫಿನ್ಲ್ಯಾಂಡ್ಗೆ ಹಾರುವ ಯೋಚನೆಯಲ್ಲಿದ್ದಾರೆ. ಒಂದು ವೇಳೆ ಅದು ಆಗಿದ್ದೇ ಆದ್ರೆ ಭಾರತಕ್ಕೆ ಇರುವ ತಲೆನೋವು ಒಂದು ಹಂತಕ್ಕೆ ದೂರವಾದಂತೆ ಇಲ್ಲವಾದರೆ 2013ನೇ ಒಪ್ಪಂದವು ಮುನ್ನೆಲೆಗೆ ಬರಲಿದೆ.
ಇದನ್ನೂ ಓದಿ: ಹೊತ್ತಿ ಉರಿದ ಬಾಂಗ್ಲಾ ‘ಬೆಂಕಿ’ ಹಿಂದೆ ಅಮೆರಿಕ ಕೈವಾಡ? ಕೊನೆಗೂ ಸತ್ಯ ಬಿಚ್ಚಿಟ್ಟ ಶೇಖ್ ಹಸೀನಾ; ಏನದು?
2013ರ ಒಪ್ಪಂದದ ಪ್ರಕಾರ ದೆಹಲಿ ಮತ್ತು ಢಾಕಾದ ನಡುವೆ ಆರೋಪಿಗಳ ಹಸ್ತಾಂತರದ ವಿಚಾರದಲ್ಲಿ ಒಂದು ನಿಲುವಿಗೆ ಬರಲಾಗಿತ್ತು. ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳನ್ನು ಉಭಯ ದೇಶಗಳು ಹಸ್ತಾಂತರಿಸುವ ಕುರಿತು ಒಂದು ಒಪ್ಪಂದವಾಗಿತ್ತು. 2016ರಲ್ಲಿ ಅದಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಯ್ತು. ಒಂದು ವರ್ಷಕ್ಕಿಂತ ಹೆಚ್ಚಿಗೆ ಶಿಕ್ಷೆಯಾಗಿರುವ ಅಪರಾಧಿಗಳನ್ನು ಉಭಯ ದೇಶಗಳು ಗಡಿಪಾರು ಮಾಡುವ ಮೂಲಕ ಆ ದೇಶಕ್ಕೆ ಹಸ್ತಾಂತರಿಸಬೇಕು ಎಂದು. ಆದ್ರೆ ಒಂದು ಬದಲಾವಣೆಯೆಂದರೆ ಅದು ರಾಜಕೀಯ ಕೈದಿಗಳನ್ನು ಹೊರತುಪಡಿಸಿ ಎಂದು ನಮೂದಿಸಲಾಗಿದೆ. ಇವೆಲ್ಲವನ್ನು ನೋಡಿದಾಗ ಸದ್ಯ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಬಾಂಧವ್ಯಕ್ಕೆ ಶೇಖ್ ಹಸೀನಾ ಒಂದು ರೀತಿಯಲ್ಲಿ ಬಿಸಿ ತುಪ್ಪವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ನೊಡಬೇಕು ಅಷ್ಟೇ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ