ದೆಹಲಿ ಚುನಾವಣೆಗೆ ಮೆಗಾ ಟ್ವಿಸ್ಟ್.. ಕೇಜ್ರಿವಾಲ್‌ಗೆ ಟಕ್ಕರ್ ಕೊಟ್ಟ ಪರ್ವೇಶ್ ವರ್ಮಾ ಯಾರು? ಸಿಎಂ ಆಗ್ತಾರಾ?

author-image
Gopal Kulkarni
Updated On
ದೆಹಲಿ ಚುನಾವಣೆಗೆ ಮೆಗಾ ಟ್ವಿಸ್ಟ್.. ಕೇಜ್ರಿವಾಲ್‌ಗೆ ಟಕ್ಕರ್ ಕೊಟ್ಟ ಪರ್ವೇಶ್ ವರ್ಮಾ ಯಾರು? ಸಿಎಂ ಆಗ್ತಾರಾ?
Advertisment
  • ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರವಾಲ್​ಗೆ ಹೀನಾಯ ಸೋಲು
  • ಅರವಿಂದ್ ಕೇಜ್ರಿವಾಲ್​ರನ್ನು ಸೋಲಿಸಿದ ಬಿಜೆಪಿಯ ಪರ್ವೇಶ್ ವರ್ಮಾ ಸಿಎಂ?
  • ದೆಹಲಿ ಸಿಎಂ ಗದ್ದುಗೆ ಏರಲಿದ್ದಾರಾ ಪರ್ವೇಶ್? ಯಾರು ಈ ಪರ್ವೇಶ್​ ವರ್ಮಾ?

ನವದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಒಂದು ಹಂತಕ್ಕೆ ಬಂದು ನಿಂತಿದೆ. ಬಿಜೆಪಿ ಭರ್ಜರಿ ಗೆಲುವಿನೊಂದಿಗೆ 27 ವರ್ಷಗಳ ಬಳಿಕ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ. ಇದರ ನಡುವೆ ಎದ್ದಿರುವ ಪ್ರಶ್ನೆ ಅಂದ್ರೆ, ಗೆಲುವಿನ ನಗಾರಿ ಭಾರಿಸಿದ ಬಿಜೆಪಿಯಿಂದ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಅನ್ನೋದು. ಅದರಲ್ಲಿ ಪ್ರಮುಖವಾಗಿ ಮುನ್ನೆಲೆಗೆ ಬರುವ ಹೆಸರು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ. ಸದ್ಯ ನವದೆಹಲಿಯ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್​ ಅವರನ್ನು ಒಂದು ವೇಳೆ ಸೋಲಿಸಿದ್ದೇ ಆದಲ್ಲಿ. ಪರ್ವೇಶ್​ಗೆ ಪಟ್ಟ ಕಟ್ಟಲು ಬಿಜೆಪಿ ಚಿಂತನೆ ನಡೆಸಿದೆ.

ಈಗ ಬಂದಿರುವ ಟ್ರೆಂಡ್ ಪ್ರಕಾರ ನವದೆಹಲಿ ಕ್ಷೇತ್ರದಲ್ಲಿ ಪರ್ವೇಶ್ ವರ್ಮಾ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವವಾಲ್​ ಅವರನ್ನು ಪರ್ವೇಶ್ ವರ್ಮಾ ಕೇಜ್ರವಾಲ್​​ರನ್ನು ಸೋಲಿಸಿ ವಿಜಯಪತಾಕೆ ಹಾರಿಸಿದ್ದಾರೆ. ಕೊಟ್ಟ ಮಾತಿನಂತೆ ಅವರಿಗೆ ಸಿಎಂ ಪಟ್ಟ ಒಲಿಯುವುದು ನಿಶ್ಚಿತ ಎನ್ನಲಾಗಿದೆ.

ಇದನ್ನೂ ಓದಿ:27 ವರ್ಷದ ಬಳಿಕ ದೆಹಲಿಯಲ್ಲಿ ಅಧಿಕಾರದತ್ತ ಬಿಜೆಪಿ; ಭಾಷಣಕ್ಕೆ ಸಜ್ಜಾದ ಮೋದಿ! ವಿಜಯೋತ್ಸವಕ್ಕೆ ತಯಾರಿ ಹೇಗಿದೆ?

ಅರವಿಂದ್ ಕೇಜ್ರಿವಾಲ್​​ಗೆ ಟಕ್ಕರ್ ಕೊಟ್ಟಿರುವ ಪರ್ವೇಶ್ ವರ್ಮಾ, ಈ ಹಿಂದೆ ಎರಡು ಬಾರಿ ಸಂಸದರಾಗಿದ್ದಾರೆ. ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಈ ಪರ್ವೇಶ್​ ವರ್ಮಾ. ಮೊದಲಿನಿಂದಲೂ ಆರ್​ಎಸ್​ಎಸ್​​ನಲ್ಲಿ ಗುರುತಿಸಿಕೊಂಡು ಬಂದಿರುವ ವ್ಯಕ್ತಿ. 2014ರಲ್ಲಿ ಪಶ್ಚಿಮ ದೆಹಲಿ ಕ್ಷೇತತ್ರದಿಂದ 2014ರಲ್ಲಿ 5.78 ಮತಗಳನ್ನು ಪಡೆದು ಕಾಂಗ್ರೆಸ್​ನ ಮಹಾಬಲ ಮಿಶ್ರಾ ಅವರನ್ನು ಸೋಲಿಸಿ ಲೋಕಸಭೆಗೆ ಎಂಟ್ರಿ ಪಡೆದಿದ್ದರು.
2019ರಲ್ಲಿ ಲೋಕಸಭಾ ಟಿಕೆಟ್ ನೀಡಲು ಪಕ್ಷ ನಿರಾಕರಿಸಿತ್ತು. ಈ ವೇಳೆ ಬಿಜೆಪಿ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯರಾಗಿ ಪರ್ವೇಶ್ ಸೇವೆ ಸಲ್ಲಿಸಿದರು. 2013ರಲ್ಲಿ ದೆಹಲಿ ಚುನಾವಣಾ ಸಮಿತಿಯ ಸದಸ್ಯರಾಗಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಶಾಹಿನ್ ಭಾಗ್​​ನಲ್ಲಿ ಸಿಎಎ ವಿರುದ್ಧದ ಹೋರಾಟದಲ್ಲಿ ವಿರೋಧಿಗಳಿಗೆ ಧಮ್ಕಿ ಹಾಕಿದ ಆರೋಪವು ಕೂಡ ಪರ್ವೇಶ ಮೇಲೆ ಇದೆ. ದೆಹಲಿಯಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಂದೇ ಗಂಟೆಯಲ್ಲಿ ಎಲ್ಲರನ್ನು ಹೊಡೆದು ಹಾಕುತ್ತೇವೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:DelhiElectionResults: ಎಎಪಿಗೆ ಆಘಾತದ ಮೇಲೆ ಆಘಾತ; ಕೇಜ್ರಿವಾಲ್‌ ಗೆಲ್ಲುವ ಸಾಧ್ಯತೆ ಎಷ್ಟಿದೆ?

ಆರಂಭದಿಂದಲೂ ಕೇಜ್ರಿವಾಲ್​ಗೆ ಠಕ್ಕರ್​ ಕೊಡುತ್ತಲೇ ಬಂದಿದ್ದ ಪರ್ವೇಶ್ ವರ್ಮಾ ಕೊನೆಗೂ ಕೇಜ್ರಿವಾಲ್​ರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಪರ್ವೇಶ್ ವರ್ಮಾ ದೆಹಲಿಯ ನೂತನ ಸಿಎಂ ಆಗಿ ಅಧಿಕಾರವಹಿಸುವುದು ಬಹುತೇಕ ಖಚಿತವಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಪರ್ವೇಶ್ ಜೊತೆಗೆ ಸಿಎಂ ರೇಸ್​ನಲ್ಲಿ ಇನ್ನೂ ಅನೇಕ ಜನರು ಆಕಾಂಕ್ಷಿಗಳು ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment