ಕಿನ್ನರ ಅಖಾಡದ ಸಾಧ್ವಿಯರು ನೀಡೋ ನಾಣ್ಯದಲ್ಲಿ ಅಂಥದ್ದು ಏನಿದೆ? ಮಹಾಮಂಡಳೇಶ್ವರಿ ಹೇಳೋದೇನು?

author-image
Gopal Kulkarni
Updated On
ಕಿನ್ನರ ಅಖಾಡದ ಸಾಧ್ವಿಯರು ನೀಡೋ ನಾಣ್ಯದಲ್ಲಿ ಅಂಥದ್ದು ಏನಿದೆ? ಮಹಾಮಂಡಳೇಶ್ವರಿ ಹೇಳೋದೇನು?
Advertisment
  • ಶಿವ ಶಕ್ತಿಯ ರೂಪಕ್ಕೆ ಕಿನ್ನರ ಮಹಾಮಂಡಳೇಶ್ವರಿ ಹೇಳಿದ್ದೇನು?
  • ಸಂಪತ್ತಿನ ಖಜಾನೆ ತುಂಬೋ ತಾಕತ್ತು ಕಿನ್ನರ ರಹಸ್ಯ ನಾಣ್ಯಕ್ಕಿದ್ಯಾ?
  • ಏಳುಕೊಳ್ಳದ ಯಲ್ಲಮ್ಮನ ಭಕ್ತರೇ ಕಿನ್ನರ ಅಖಾಡದ ಸಾಧ್ವಿಗಳು!

ಮಹಾಕುಂಭಮೇಳ ನಡೀತಿರೋ ಪ್ರಯಾಗ್ ರಾಜ್ ಅಕ್ಷರಶಃ ಹಿಂದಿ ಹಾರ್ಟ್​​ಲ್ಯಾಂಡ್​.. ಕಟ್ಟರ್​ ಹಿಂದಿವಾಲಾಗಳ ನೆಲದಲ್ಲಿ ಯಲ್ಲಮ್ಮನ ಹಾಡುಗಳು ಕೇಳಿಸೋದು ಕಿನ್ನರ ಅಖಾಡದಲ್ಲಿ ಮಾತ್ರ. ಸಾಕ್ಷಾತ್​ ಶಿವಶಕ್ತಿಯ ಪ್ರತಿರೂಪವಾಗಿ ಈ ಕಿನ್ನರರು ಕಾಣೋದೇಕೆ? ಅಷ್ಟಕ್ಕೂ ಯಾವೆಲ್ಲಾ ದೇವಾನುದೇವತೆಗಳನ್ನ ಇವರು ಆರಾಧಿಸ್ತಾರೆ ಗೊತ್ತಾ? ಶಕ್ತಿ ದೇವತೆಯನ್ನು ಕುಣಿಸಬಲ್ಲ ವಾದ್ಯ ಇದೇ ಚೌಡಿಕೆ.. ದೇವಭೂಮಿ ಪ್ರಯಾಗದಲ್ಲಿ ತಾಯಿ ಯಲ್ಲಮ್ಮನನ್ನ ಹೀಗೆ ಸ್ತುತ್ತಿಸುತ್ತಾ ಕುಂತವರು ಇದೇ ಕಿನ್ನರ ಅಖಾಡಕ್ಕೆರ ಸೇರಿದ ಸಾಧ್ವಿಯರು.. ಇವರೆಲ್ಲರೂ ಸಹ ಕರ್ನಾಟಕದಿಂದ ಕುಂಭಮೇಳಕ್ಕೆ ಬಂದ ತಾಯಂದಿರು.

publive-image

ಏಳುಕೊಳ್ಳದ ಯಲ್ಲಮ್ಮನ ಭಕ್ತರೇ ಕಿನ್ನರ ಅಖಾಡದ ಸಾಧ್ವಿಗಳು!
ಹೌದು, ನಮ್ಮ ಏಳುಕೊಳ್ಳದ ತಾಯಿ ಯಲ್ಲಮ್ಮನಿಗೆ ಬಹುಪಾಲು ಮಂಗಳಮುಖಿ ಭಕ್ತ ಗಣವೇ ಇದೆ.. ಆಧ್ಯಾತ್ಮ ಲೋಕದಲ್ಲಿ ತೃತೀಯ ಲಿಂಗಿಗಳಿಗೆ ಮೊದಲಿನಿಂದ್ಲೂ ಅಗ್ರಸ್ಥಾನ ನೀಡಿದ್ದು ಯಲ್ಲಮ್ಮನ ಕ್ಷೇತ್ರ.. ಇತ್ತೀಚೆಗೆ ಕುಂಭಮೇಳದಲ್ಲೂ ಕಿನ್ನರ ಅಖಾಡ ಸೃಷ್ಟಿ ಆದ್ಮೇಲೆ ಭಾಗಿ ಆಗೋದಕ್ಕೆ ಅವಕಾಶ ನೀಡಲಾಗುತ್ತಿದೆ.. ಹಾಗಾಗಿಯೇ ಕರ್ನಾಟಕ ಮೂಲದ ಸಾಧ್ವಿ ಅಂಬಿಕಾ ಸಂತೋಷವನ್ನು ವ್ಯಕ್ತಪಡಿಸುತ್ತಾರೆ..
ಕಿನ್ನರ ಅಖಾಡ ಇನ್ನುಳಿದ ಅಖಾಡಗಳಂತೆಯೇ ಶಸ್ತ್ರವನ್ನೂ ಹಿಡೀತಾರೆ.. ಶಾಸ್ತ್ರವನ್ನೂ ಹೇಳ್ತಾರೆ.. ಆಧ್ಯಾತ್ಮದ ರಾಜಧಾನಿಯಲ್ಲಿ ಸಾಧು ಸಂತರು ಏನು ಮಾಡ್ತಾರೋ? ಅದೇ ಧರ್ಮ ರಕ್ಷಣೆಯ ಹೊಣೆಯನ್ನು ಈ ಸಾಧ್ವಿಯರೂ ಹೊತ್ತಿದ್ದಾರೆ.. ಹಾಗಾಗಿಯೇ ನಾವು ಶಿವ ಶಕ್ತಿಯ ಸಂಕೇತ ಅಂತಾರೆ ಕಿನ್ನರ ಅಖಾಡದ ಮಂಡಳೇಶ್ವರಿ.

ಶೃಂಗಾರ ತಾಯಿ ಪಾರ್ವತಿಯ ರೂಪ. ಅಂದ ಚೆಂದದಿ ಶೃಂಗಾರಗೊಳ್ಳುವುದು. ಇದು ಸತಿ. ಇದು ಶಿವ. ನೋಡಿ, ಅರ್ಧ ಶೃಂಗಾರ ಸ್ತ್ರೀಯಂತೆ, ಅರ್ಧ ಶೃಂಗಾರ ಪುರುಷನಂತಿದೆ. ಇದಕ್ಕೇ ಶಿವ ಶಕ್ತಿ ಅಂತಾರೆ. ಅರ್ಧನಾರೀಶ್ವರ. ನಾವು ಎಲ್ಲಾ ದೇವತೆಗಳನ್ನೂ ಆರಾಧಿಸುತ್ತೇವೆ. ಭಕ್ತಿಯಲ್ಲೇ ಶಕ್ತಿ ಇದೆ. ನಿಮ್ಮ ಮನಸ್ಸನ್ನು ಶುಭ್ರವಾಗಿಟ್ಟುಕೊಳ್ಳಿ. ಎಲ್ಲಾ ದೇವರು ಒಂದೇ ಎಂದು ಹೇಳುತ್ತಾರೆ ಸಾಧ್ವಿ ಈಶ್ವರಿನಂದ ಮಹಾರಾಜ್, ಎಲ್ಲಾ ದೇವರು ಒಂದೇ.. ಎಲ್ಲಾ ದೇವರನ್ನೂ ನಾವು ಪೂಜಿಸ್ತೀವಿ ಅನ್ನೋ ಸಾಧ್ವಿ ಈಶ್ವರಿನಂದ ಮಹಾರಾಜ್ ಕಿನ್ನರ ಅಖಾಡದ ಮುಂದಾಳುವಾಗಿ ಸಾಕಷ್ಟು ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..

ಕಿನ್ನರ ಅಖಾಡ ಅರ್ಧನಾರೀಶ್ವರನ ಪೌರಾಣಿಕ ಹಿನ್ನೆಲೆಯನ್ನು ನೆನಪಿಸುತ್ತದೆ.. ತಮ್ಮೊಳಗೆ ಸಾಕ್ಷಾತ್​ ಶಿವ ಹಾಗೂ ಪಾರ್ವತಿಯರ ಶಕ್ತಿ ಅಡಗಿದೆ.. ಇಡೀ ಜಗತ್ತನ್ನು ತಂದೆಯಂತೆ ಪೊರೆಯುವ ತಾಯಿಯಂತೆ ಹಾರೈಕೆ ಮಾಡುವ ಹೊಣೆ ನಮ್ಮ ಮೇಲಿದೆ.. ಹಾಗಾಗಿಯೇ ಎಲ್ಲರಿಗೂ ಶುಭವನ್ನೇ ಕೋರುವ ಕಾರಣಕ್ಕೆ ಆಶೀರ್ವಾದ ಮಾಡುತ್ತೇವೆ ಅನ್ನೋ ಈ ಕಿನ್ನರ ಅಖಾಡ ಒಂದಷ್ಟು ಕಾರಣಗಳಿಗೆ ನಿಗೂಢ ಅನಿಸುತ್ತದೆ.. ಇವರ ಸಂಸ್ಕಾರ ಹಾಗೂ ಪೂಜೆ ಅಚ್ಚರಿ ಮೂಡಿಸುತ್ತವೆ.. ಅದೇ ರೀತಿಯಲ್ಲೇ ಇವರು ನೀಡುವ ಕನ್ನರ ನಾಣ್ಯ ಕೂಡ ರಹಸ್ಯ ಸಂಗತಿಗಳನ್ನು ಹೇಳುತ್ತದೆ..

ಕಿನ್ನರ ಅಖಾಡದ ಸಾಧ್ವಿಗಳಿಂದ ಬುಧವಾರ ಒಂದೇ ಒಂದು ನಾಣ್ಯ ಪಡೆಯೋದಕ್ಕೆ ಜನ ಸಾಲುಗಟ್ಟಿ ನಿಲ್ಲುತ್ತಾರೆ.. ಯಾಕಂದ್ರೆ, ಬುಧ ಗ್ರಹದಿಂದಾಗಿ ಎದುರಾಗುವ ಮನೋ ಸಮಸ್ಯೆಗಳನ್ನು ಬಗೆಹರಿಸೋ ತಾಕತ್ತು ಕಿನ್ನರರ ಆಶೀರ್ವಾದಕ್ಕಿದೆ.. ಇನ್ನು, ಇದೇ ಕಿನ್ನರರಿಂದ ಬುಧವಾರ ಒಂದು ರೂಪಾಯಿ ನಾಣ್ಯ ಪಡೆದುಕೊಂಡರೇ ಸಾಕ್ಷಾತ್​ ಮಹಾಲಕ್ಷ್ಮಿಯೇ ಮನೆಯಲ್ಲಿ ನೆಲೆಸುತ್ತಾಳೆ ಅನ್ನೋ ಪ್ರತೀತಿ ಇದೆ.

publive-image

ಬುಧವಾರ ಕಿನ್ನರರು ನಾಣ್ಯ ಕೊಟ್ಟರೇ ಕುಬೇರ ಆಗೋದು ಫಿಕ್ಸ್!?

ಕಿನ್ನರ ಅಖಾಡದ ಸಾಧ್ವಿಗಳು ಸರಸ್ವತಿ, ಲಕ್ಷ್ಮಿ ಹಾಗೂ ತಾಯಿ ಪಾರ್ವತಿಯರ ಪ್ರತಿರೂಪ ಎಂದೇ ಹೇಳಲಾಗುತ್ತದೆ.. ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಶಕ್ತಿಯೂ ಇವರಲ್ಲಿರುತ್ತದೆ ಅನ್ನೋದು ನಂಬಿಕೆ.. ಹಾಗಾಗಿಯೇ ಬುಧ ಗ್ರಹದಂತೆಯೇ ಜ್ಞಾನ ಹಾಗೂ ಧನ ತಂದುಕೊಡುವ ತಾಕತ್ತು ಇವರು ನೀಡುವ ನಾಣ್ಯಕ್ಕಿದೆ ಎಂಬುದು ಹಲವರ ವಿಶ್ವಾಸ. ಇದೇ ಮಾತನ್ನೇ ಕಿನ್ನರ ಅಖಾಡದ ಸಾಧ್ವಿ ಇಂದೂ ಹೇಳುತ್ತಾರೆ.

publive-image

ಒಂದು ರೂಪಾಯಿಯ ಮಹತ್ವ ಏನಂದ್ರೆ, ನಿಮ್ಮ ಮನೆಗೆ ತಾಯಿ ಮಹಾಲಕ್ಷ್ಮಿ ಕೃಪೆ ಸಿಗಲಿದೆ. ಮೊದಲಿಗೆ ಇದು ನಕಲಿ ನಾಣ್ಯ ಅಂತಿದ್ರು. ಈ ನಾಣ್ಯ ನಕಲಿಯೋ? ಅಸಲಿಯೋ? ಅನ್ನೋದನ್ನ ಜನರೇ ನೋಡಿಕೊಳ್ಳಬಹುದು. ನಾವು ವಿಭಿನ್ನ ರೂಪದ ನಾಣ್ಯವನ್ನು ನೀಡುತ್ತೇವೆ. ಇದು ಮಹಾಲಕ್ಷ್ಮಿಯ ಪ್ರತೀಕ. ಇದು ಅಶೀರ್ವಾದದ ರೂಪವಾಗಿದೆ. ಇದು ನಿಮ್ಮ ಮನೆಯಲ್ಲಿ ಸಂಪತ್ತಿನ ಖಜಾನೆಯನ್ನೇ ತುಂಬಿಸಬಹುದು. ಎನ್ನುತ್ತಾರೆ ಸಾಧ್ವಿ ಇಂದೂ.

ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಐಐಟಿ ಬಾಬಾ.. ಏರೋಸ್ಪೇಸ್ ಇಂಜಿನಿಯರ್ ಆಗಿದ್ದವರು ಈಗ ಸಾಧು

ಕಿನ್ನರ ಅಖಾಡ ಆಧ್ಯಾತ್ಮದ ಸೇವೆ ನಮಗೂ ಸಿಗಬೇಕು ಅನ್ನೋದನ್ನ ಪ್ರತಿಪಾದಿಸುತ್ತದೆ.. ಮಹಾಕುಂಭಮೇಳದಲ್ಲಿ ಇವರದ್ದೂ ರಥ ಮುಖ್ಯಬೀದಿಗಳಲ್ಲಿ ಸಾಗುತ್ತದೆ.. ಆ ಸಂದರ್ಭ ಅತ್ಯಂತ ಸುಂದರವಾಗಿ ಸಿಂಗರಿಸಿಕೊಂಡ ಕಿನ್ನರ ಸಾಧ್ವಿಯರು ಸಾಗಿ ಬರ್ತಾರೆ.. ಕುಂಭಮೇಳದ ಎಲ್ಲಾ ಅಖಾಡಗಳಿಗಿಂತ್ಲೂ ಕಿನ್ನರ ಅಖಾಡ ಭಿನ್ನ ಅನಿಸೋದು ಇವರ ದೃಷ್ಟಿಕೋನದಿಂದಾಗಿ.

publive-image

ಜೈ ಮಹಾಕಾಳ. ಭಾರತ ನಿಧಾನವಾಗಿ ವಿಶ್ವಗುರು ಆಗುವತ್ತ ಸಾಗುತ್ತಿದೆ. ಆದಷ್ಟು ಬೇಗ ವಿಶ್ವಗುರು ಆಗಲಿ ಅಂತ ಆಶಿಸುತ್ತೇನೆ. ಪ್ರತೀ ಸಮಾಜ, ಪ್ರತೀ ವ್ಯಕ್ತಿಯ ಅಭಿವೃದ್ಧಿ ಆಗುತ್ತಿದೆ. ಭೇದ ಭಾವ ಇಲ್ಲದಂತಾಗಿದೆ. ಈ ಮೊದಲೇ ಸತಿ ಪದ್ಧತಿ ನಿರ್ಮೂಲನೆ ಆಗಿದೆ. ಕೆಟ್ಟ ಆಚರಣೆಗಳು ನಿಧಾನವಾಗಿ ಕಣ್ಮರೆ ಆಗುತ್ತಿವೆ. ನೀವು ಹೇಳಿದ್ರೆ, ಕಿನ್ನರರನ್ನ ಹೇಗೆ ನೋಡ್ತಿದೆ ಅಂತ. ಕಿನ್ನರರು ಸಾಕ್ಷಾತ್​ ದೇವರ ಸಮಾನ. ಕಿನ್ನರರಿಗೆ ಗೌರವ ಸಿಗುತ್ತಿದೆ. ಸಿಗುತ್ತಲೇ ಇರುತ್ತದೆ. ಜಗತ್ತಿಗೆ ಆಶೀರ್ವದರಿಸೋದಕ್ಕೆ ಸಾಕ್ಷಾತ್​ ಶಿವನೇ ನಮ್ಮನ್ನು ಭೂಮಿಗೆ ಕಳುಹಿಸಿದ್ದಾನೆ. ಎಲ್ಲರಿಗೂ ನಾವು ಆಶೀರ್ವದಿಸುತ್ತೇವೆ ಎನ್ನುತ್ತಾರೆ ಈಶ್ವರಿನಂದ ಮಹಾರಾಜ್

ಇದನ್ನೂ ಓದಿ:ಮಹಾಕುಂಭ ಸ್ನಾನದ ನಂತರ ಈ ವಸ್ತು ದಾನ ಮಾಡಿದ್ರೆ ಶುಭ.. ಪೂರ್ವಜರ ಆತ್ಮಕ್ಕೂ ಸಂತೋಷ..!

ಕಿನ್ನರ ಅಖಾಡ ಲಿಂಗ ತಾರತಮ್ಯ ಸನಾತನ ಧರ್ಮದಲ್ಲಿ ಇಲ್ಲ ಅನ್ನೋದನ್ನ ವಿಶ್ವಕ್ಕೇ ನೀಡುತ್ತಿದೆ.. ಅಷ್ಟೇ ಅಲ್ಲ, ಪೌರಾಣಿಕವಾಗಿ ಸಾಕ್ಷಾತ್​ ಶಿವನೇ ಅರ್ಧನಾರೀಶ್ವರನಾಗಿ ವ್ಯಕ್ತಗೊಂಡ ವಿಚಾರವನ್ನು ಹೇಳುತ್ತದೆ.. ಅದೇ ವಿಚಾರ ಬಹುದೊಡ್ಡ ಪಂಥ, ಮಹಾನ್ ಸಿದ್ಧಾಂತ ಅನ್ನೋದಕ್ಕೆ ಕಿನ್ನರ ಅಖಾಡ ಸಾಕ್ಷಿ ನುಡಿಯುತ್ತಿದೆ. ಮಹಾಕುಂಭಮೇಳ 4000 ಎಕರೆ ಭೂಮಿಯಲ್ಲಿ ನಡೀತಿದೆ.. ಇಲ್ಲಿನ ಪ್ರತೀ ಕಣಕಣದಲ್ಲೂ ಇಂಥಾ ಆಧ್ಯಾತ್ಮದ ಅಸಂಖ್ಯಾತ ಅಚ್ಚರಿಗಳ ಆಗರವೇ ತುಂಬಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment