ಬಂಕರ್​​ಗಳಲ್ಲಿ ಪರಮಾಣು ದಾಳಿಯಿಂದ ರಕ್ಷಣೆ ಸಿಗುತ್ತಾ? ಗಡಿಯಲ್ಲಿರೋ ಬಂಕರ್​​ಗಳು ಎಷ್ಟು ಸೇಫ್..?

author-image
Ganesh
Updated On
ಬಂಕರ್​​ಗಳಲ್ಲಿ ಪರಮಾಣು ದಾಳಿಯಿಂದ ರಕ್ಷಣೆ ಸಿಗುತ್ತಾ? ಗಡಿಯಲ್ಲಿರೋ ಬಂಕರ್​​ಗಳು ಎಷ್ಟು ಸೇಫ್..?
Advertisment
  • ಹಳೆಯ ಬಂಕರ್​​ಗಳ ಸ್ವಚ್ಛತೆಯಲ್ಲಿ ತೊಡಗಿದ ಸ್ಥಳೀಯರು
  • ಬಂಕರ್ ರಕ್ಷಣಾತ್ಮಕ ಗುರಾಣಿಯಾಗಿ ಹೇಗೆ ಕೆಲಸ ಮಾಡ್ತದೆ?
  • ಹೇಡಿ ಪಾಕಿಸ್ತಾನದಿಂದಾಗಿ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ

ಹೇಡಿ ಪಾಕಿಸ್ತಾನದಿಂದಾಗಿ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪದೆ ಪದೇ ಭಾರತದ ಮೇಲೆ ಕುತಂತ್ರ ಮಸೆಯುವ ಪಾಕ್​ಗೆ ಬುದ್ಧಿ ಕಲಿಸಲು ದಿಟ್ಟ ಕ್ರಮಕೈಗೊಳ್ಳಲಾಗ್ತಿದೆ. ಹೀಗಾಗಿ ಎರಡೂ ದೇಶಗಳ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಯಾವಾಗ ಬೇಕಿದ್ದರೂ ಮಿಲಿಟರಿ ಆಪರೇಷನ್ ಶುರುವಾಗುವ ಸಾಧ್ಯತೆ ಇದೆ.

ಯುದ್ಧದ ಸಂದರ್ಭದಲ್ಲಿ ಎರಡೂ ದೇಶಗಳ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳ ಘರ್ಷಣೆ ಆಗಲಿದೆ. ಇದರಿಂದ ಸಾಮಾನ್ಯ ನಾಗರಿಕರು ಹಾಗೂ ಸೈನಿಕರ ಜೀವ ಅಪಾಯಕ್ಕೆ ಸಿಲುಕಲಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಭಾರತ ಗಡಿಯಲ್ಲಿ ಬಲಿಷ್ಠ ಬಂಕರ್‌ಗಳನ್ನು ನಿರ್ಮಿಸಿದೆ. ಈ ಬಂಕರ್‌ಗಳು ರಕ್ಷಣಾತ್ಮಕ ಗುರಾಣಿಯಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ನಮಗೆ ಬಹುಪರಾಕ್.. 15 ರಾಷ್ಟ್ರಗಳಲ್ಲಿ ಭಾರತದ ಬೆನ್ನಿಗೆ ನಿಂತ 13 ದೇಶಗಳು..!

publive-image

ಯುದ್ಧದ ಆತಂಕ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭದ್ರತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಹೆಚ್ಚಿಸಲಾಗಿದೆ. ಪಾಕಿಸ್ತಾನ ಗಡಿಯ ಪಕ್ಕದಲ್ಲಿರುವ ಹಳೆಯ ಬಂಕರ್‌ಗಳನ್ನು ಜನ ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆದಾಗ ಗ್ರಾಮಸ್ಥರು ಈ ಬಂಕರ್‌ಗಳಲ್ಲಿ ಆಶ್ರಯ ಪಡೆಯಬಹುದು. ಈ ಹಿಂದೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದಾಗಲೂ ಇದೇ ಬಂಕರ್​​ಗಳಲ್ಲಿ ಆಶ್ರಯ ಪಡೆದಿದ್ದಾರೆ.

ಬಂಕರ್‌ಗಳನ್ನು ಎಲ್ಲಿ ನಿರ್ಮಿಸಲಾಗಿದೆ?

ಬಂಕರ್‌ಗಳನ್ನು ಗಡಿಗಳ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗುತ್ತದೆ. ಕೆಲವೊಮ್ಮೆ ನಾಯಕರು ಅಥವಾ ರಾಷ್ಟ್ರ ಮುಖ್ಯಸ್ಥರ ನಿವಾಸದಲ್ಲಿ ಬಂಕರ್​ಗಳ ವ್ಯವಸ್ಥೆ ಇರುತ್ತದೆ. ಬಂಕರ್‌ಗಳು ಶತ್ರುಗಳಿಂದ ರಕ್ಷಣೆ ಸಿಗಲಿದೆ.

ಬಂಕರ್‌ಗಳ ನಿರ್ಮಾಣ ಹೇಗೆ?

ಭಾರತ ಮಾತ್ರವಲ್ಲ. ಜಗತ್ತಿನ ಎಲ್ಲಾ ಸೇನೆಗಳು ಬಂಕರ್‌ಗಳನ್ನು ನಿರ್ಮಿಸುತ್ತವೆ. ಬಂಕರ್‌ಗಳು ನೆಲದಡಿಯಲ್ಲಿ ನಿರ್ಮಿಸಲಾದ ಮನೆಗಳ ರೀತಿಯಲ್ಲಿ ಇರುತ್ತವೆ. ಅವುಗಳ ಗೋಡೆಗಳು ಹಲವಾರು ಅಡಿ ದಪ್ಪವಾಗಿರುತ್ತದೆ. ಇವು ಕಾಂಕ್ರೀಟ್ ಅಥವಾ ಕಬ್ಬಿಣದಿಂದ ನಿರ್ಮಾಣ ಮಾಡಲಾಗಿರುತ್ತದೆ. ಭಾರತದಲ್ಲಿ ಬಂಕರ್‌ಗಳನ್ನು ನಿರ್ಮಿಸಲು ಟಿಇಟಿಎಂ (Traditional earthbag techniques to modern) ವಿಧಾನ ಬಳಸಲಾಗುತ್ತದೆ. ಬಂಕರ್ ಗೋಡೆಗಳನ್ನು ಮತ್ತು ಛಾವಣಿಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: ಪಾಕ್​ ಅಣ್ವಸ್ತ್ರ ಬಳಸಿದ್ರೆ ಅದರ ಅಂತ್ಯ ಅದೇ ಆಹ್ವಾನಿಸಿಕೊಂಡಂತೆ.. 3 ಹಂತದಲ್ಲಿ ಪಾಕ್​ನ ಅಂತ್ಯ..!

publive-image

ಹೇಗೆ ನಮ್ಮನ್ನು ರಕ್ಷಿಸುತ್ತದೆ..?

ಬಂಕರ್ ನಿರ್ಮಾಣದ ಜೊತೆಗೆ ಅದರ ಭದ್ರತೆಗೂ ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ. ಬಂಕರ್​​ಗಳ ಮೇಲೂ ಶತ್ರುಗಳ ದಾಳಿ ನಡೆಸುತ್ತವೆ. ಹೀಗಾಗಿ ನೀರು ಮತ್ತು ಕೀಟಕಿಗಳಿಂದ ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ. ಈ ಬಂಕರ್‌ಗಳಲ್ಲಿ ಗಾಳಿಗಾಗಿ ಬ್ಲಾಸ್ಟ್ ಕವಾಟ ಅಳವಡಿಸಲಾಗುತ್ತದೆ. ಅವು ಸ್ಕೈಲೈಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಹತ್ತಿರದಲ್ಲಿ ಸ್ಫೋಟ ಸಂಭವಿಸಿದರೆ ಈ ಕವಾಟಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತವೆ. ಇವುಗಳಲ್ಲಿ ಸೈನಿಕರು ಹಾಗೂ ಸಾಮಾನ್ಯ ಜನರು ಸುರಕ್ಷತವಾಗಿ ರಕ್ಷಣೆ ಪಡೆಯಬಹುದು. ಇವು ಸಾಮಾನ್ಯ ಬಂಕರ್​​ಗಳಾಗಿದ್ದು, ಗುಂಡು ನಿರೋಧಕ ಬಂಕರ್​ಗಳಾಗಿವೆ. ಗಡಿಯಲ್ಲಿರುವ ಬಂಕರ್​ಗಳು ಅಣ್ವಸ್ತ್ರ ದಾಳಿಯಿಂದ ರಕ್ಷಣೆ ಕೊಡಲ್ಲ.

ಆದರೆ, ಪರಮಾಣು ದಾಳಿಯಿಂದ ರಕ್ಷಿಸಿಕೊಳ್ಳಲು ಬಂಕರ್​ಗಳನ್ನು ವಿಭಿನ್ನವಾಗಿ ನಿರ್ಮಾಣ ಮಾಡಲಾಗುತ್ತದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೈಬೀರಿಯಾದಲ್ಲಿ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಪರಮಾಣು ಬಂಕರ್‌ಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ತಾನೇ ದೊಣ್ಣೆ ಕೊಟ್ಟು ಹೊಡೆಸಿಕೊಂಡ ಪಾಕ್.. ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH ಮತ್ತು Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment