newsfirstkannada.com

×

ಪ್ರೇಮ ಚುಂಬನ ನಿಮ್ಮ ಬಾಯಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಲಿದೆಯಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

Share :

Published October 15, 2024 at 11:48am

    ಪ್ರೇಮ ಚುಂಬನವೂ ನಿಮ್ಮ ಬಾಯಿಯ ಅನಾರೋಗ್ಯಕ್ಕೆ ಕಾರಣವಾಗಬಹುದು

    ಚುಂಬಿಸುವುದರಿಂದ ಆಗಲಿರುವ ಸಮಸ್ಯೆಗಳ ಬಗ್ಗೆ ವೈದ್ಯರು ಏನು ಹೇಳುತ್ತಾರೆ?

    ಒಂದು ಚುಂಬನದಿಂದ ವಿನಿಮಯವಾಗಲಿರುವ ಬ್ಯಾಕ್ಟಿರಿಯಾಗಳ ಸಂಖ್ಯೆ ಎಷ್ಟು?

ಚುಂಬನ, ಉನ್ಮತ್ತ ಪ್ರೇಮದ ಮೊದಲ ಅಧ್ಯಾಯ. ಪ್ರೇಮದ ಹೊಸ ಹರಿವನ್ನು ತೆರೆದಿಡುವ ಮೋಹಕ ಶಕ್ತಿ. ಆಲಿಂಗನ, ಚುಂಬನ ಇವು ಒಲವಿನ ಪುಟದ ಮಧುರ ಅಕ್ಷರಗಳು. ಚುಂಬನದೊಂದಿಗೆ ಪ್ರೀತಿ, ಪ್ರೇಮಗಳ ಅಧ್ಯಾಯ ಮತ್ತೊಂದು ಹಂತಕ್ಕೆ, ಮತ್ತೊಂದು ಎತ್ತರಕ್ಕೆ ಬಂದು ನಿಲ್ಲುತ್ತದೆ. ಆದ್ರೆ ಚುಂಬನದಿಂದಲೂ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗುತ್ತದೆ.
ಅದರಕ್ಕೆ ಅದರ ಬೆಸೆದುಕೊಂಡಾಗ ಹಲವು ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ತುಟಿಗಳ ನಮ್ಮ ಒಟ್ಟು ಆರೋಗ್ಯದ ಮಹಾದ್ವಾರ ಎನ್ನುತ್ತಾರೆ ವೈದ್ಯರು. ಓರಲ್ ಹೆಲ್ತ್​ ಇಡೀ ದೇಹದ ಆರೋಗ್ಯವನ್ನು ನಿಯಂತ್ರಿಸುತ್ತದೆ.  ಬಾಯಿಯ ಕಡಿಮೆ ಆರೋಗ್ಯದಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಅದು ಚುಂಬನದಿಂದಲೂ ಕೂಡ ಶುರುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ಆಹಾರಗಳಿಂದ ನೀವು ದೂರ ಉಳಿಯಿರಿ; ಪಿತ್ತಕೋಶದಲ್ಲಿ ಕಲ್ಲು ಸೃಷ್ಟಿಯಾಗುವುದನ್ನು ತಡೆಯಿರಿ

ಒಸಡಿನ ಸಮಸ್ಯೆಗಳು ಬಾಯಿಯಲ್ಲಿ ಹಲವು ಬ್ಯಾಕ್ಟಿರಿಯಾಗಳನ್ನು ಸೃಷ್ಟಿಸುತ್ತವೆ. ಇವು ಹಲ್ಲುಗಳು ಉದುರಿ ಬೀಳುವಂತಹ ಮಟ್ಟಕ್ಕೂ ಕೂಡ ಹೋಗಬಹುದು. ಇಂತಹ ಸಮಸ್ಯೆಗಳು ಕಿಸ್ ಮಾಡುವುದರಿಂದಲೂ ಕೂಡ ಶುರುವಾಗುತ್ತವೆ .ಅದರಕ್ಕೆ ಅದರ ಬೆಸೆದ ಒಂದು ಮುತ್ತು ಲಕ್ಷಾಂತರ ಸೂಕ್ಷ್ಮಾಣುಜೀವಿಗಳನ್ನು ಜನರ ನಡುವೆ ವಿನಿಮಯಕ್ಕೆ ಕಾರಣವಾಗುತ್ತವೆ. ನಮ್ಮ ಬಾಯಿ ಒಳ್ಳೆಯ ಹಾಗೂ ಕೆಟ್ಟ ಎರಡು ತರದ ಬ್ಯಾಕ್ಟಿರಿಯಾಗಳನ್ನು ಹೊಂದಿರುತ್ತವೆ. ಒಂದು ವೇಳೆ ಸ್ವಚ್ಛವಲ್ಲದ ಬಾಯಿಯವರು ನಿಮ್ಮನ್ನು ಚುಂಬಿಸಿದರೆ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇವು ನಿಮ್ಮ ಬಾಯಿಯಲ್ಲಿ ರೋಗಕಾರಕ ಬ್ಯಾಕ್ಟಿರಿಯಾಗಳು ಸೃಷ್ಟಿಯಾಗಲು ಕಾರಣವಾಗುತ್ತವೆ. ಇದರಿಂದ ಒಸಡಿನ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ನಿದ್ದೆಯಿಲ್ಲದೇ ಬಳಲುತ್ತಿರುವವರಿಗೆ ಹೆಚ್ಚು ಮಾನಸಿಕ ಸಮಸ್ಯೆ! ಆ ಹೆಲ್ಪ್​ಲೈನ್ ನೀಡಿದ ಅಸಲಿ ಮಾಹಿತಿ ಏನು?

ಇದೇ ವಿಷಯದ ಬಗ್ಗೆ ಮಾತನಾಡಿರುವ ಡಾ ಮುಲ್ಲಾ ಅವರು. ಕೇವಲ ಕಿಸ್​ ಮಾಡುವುದರಿಂದ ಮಾತ್ರ ಅಪಾಯಕಾರಿ ಬ್ಯಾಕ್ಟಿರಿಯಾಗಳು ಬಾಯಿ ಸೇರುತ್ತವೆ ಅನ್ನೋದು ಒಂದು ಸುಳ್ಳು. ಕಿಸ್ ಮಾಡುವ ಮೊದಲು ನಮ್ಮ ಬಾಯಿ ಎಷ್ಟು ಸ್ವಚ್ಛವಿದೆ ಎಂಬುದನ್ನು ನಾವು ನೋಡಿಕೊಳ್ಳಬೇಕು. ಪೂರ್ ಓರಲ್ ಹೈಜಿನ್​ನಿಂದ ಬಳಲುತ್ತಿದ್ದವರ ನಡುವೆ ಚುಂಬನವಾದಲ್ಲಿ ಮಾತ್ರ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ. ಹೀಗಾಗಿ ಬಾಯಿಯ ಆರೋಗ್ಯದಕ ಕಡೆ ಗಮನವಿರಬೇಕು. ಆಗಾಗ ಹಲ್ಲುಗಳ ಪರೀಕ್ಷೆಯನ್ನು ಮಾಡಿಸಬೇಕು. ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ಬ್ರಶ್ ಮಾಡಬೇಕು ಹಾಗೂ ನಿರಂತರ ಎರಡು ನಿಮಿಷಗಳ ಕಾಲ ಬ್ರಶ್ ಮಾಡುವುದನ್ನು ಮರೆಯಬಾರದು. ನಿತ್ಯ ಒಂದು ಬಾರಿಯಾದರೂ ಮೌತ್​ವಾಶ್ ಮಾಡಬೇಕು. ಇದರಿಂದ ಬಾಯಿಯಲ್ಲಿ ಸೃಷ್ಟಿಯಾಗುವ ಅನಾರೋಗ್ಯಕರ ಬ್ಯಾಕ್ಟಿರಿಯಾಗಳನ್ನು ತಡೆಯಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮ ಚುಂಬನ ನಿಮ್ಮ ಬಾಯಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಲಿದೆಯಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

https://newsfirstlive.com/wp-content/uploads/2024/10/KISS-GUM-DISEASES.jpg

Load More