/newsfirstlive-kannada/media/post_attachments/wp-content/uploads/2025/03/HIGHEST-AIRPORT.jpg)
ಪ್ರಯಾಣ ಪ್ರಪಂಚದಲ್ಲಿ ಭಾರತ ಇತ್ತೀಚಿಗೆ ತುಂಬಾ ಸುಧಾರಣೆಯನ್ನು ಕಂಡಿದೆ ಅದು ರೈಲ್ವೆ ಪ್ರಯಾಣ ಆಗಿರಬಹುದು.ಇಲ್ಲವೇ ವಿಮಾನಯಾನ ಆಗಿರಬಹುದು ಇವುಗಳಲ್ಲಿ ಮೂಲಸೌರ್ಯಗಳ ಅಭಿವೃದ್ಧಿ ಇತ್ತೀಚಿನ ದಿನಗಳಲ್ಲಿ ತಂಬಾ ಆಗಿದೆ. ವಿಮಾನ ನಿಲ್ದಾಣಗಳ ನವೀಕರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವುಗಳನ್ನು ಪುನಶ್ಚೇತನಗೊಳಿಸುವುದರಿಂದ ಹಿಡಿದು ಪ್ರಯಾಣಿಕರಿಗೆ ಅವಶ್ಯಕತೆ ಇರುವ ಎಲ್ಲ ಸೌಕರ್ಯಗಳು ಸಿಗುವ ನಿಟ್ಟಿನಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ದೇಶದ ಎಲ್ಲಾ ರಾಜ್ಯಗಳ ಪ್ರಮುಖ ನಗರಗಳು ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣಗಳನ್ನು ಹೊಂದಿವೆ. ಒಂದೊಂದು ರಾಜ್ಯಗಳಲ್ಲಂತೂ ಎರಡೆರಡು ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣಗಳು ಇವೆ. ಆದ್ರೆ ಈ ದೇಶದಲ್ಲಿ ಅತಿಹೆಚ್ಚು ಅಂದ್ರೆ ಒಟ್ಟು 5 ಏರ್ಪೋರ್ಟ್ಗಳನ್ನು ಹೊಂದಿರುವ ಏಕೈಕ ರಾಜ್ಯ ಯಾವುದು ಗೊತ್ತಾ| ಆ ರಾಜ್ಯ ಉತ್ತರಪ್ರದೇಶ.
ಇತ್ತೀಚೆಗೆ ಜೇವರ್ನಲ್ಲಿ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಮೂಲಕ ಉತ್ತರಪ್ರದೇಶಕ್ಕೆ ಒಟ್ಟು 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನೀಡಲಾದಂತಾಗಿದೆ. ನೊಯ್ಡಾಲ್ಲಿ ನಿರ್ಮಾಣಗೊಂಡ ಈ ಹೊಸ ಅಂತಾರಾಷ್ಟ್ಟೀಯ ವಿಮಾನ ನಿಲ್ದಾಣವು ಹೊಸ ದಾಖಲೆಯನ್ನೇ ಬರೆದಿದೆ. ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ಒಂದು ವಿಮಾನ ನಿಲ್ದಾಣ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 72 ಕಿಲೋ ಮೀಟರ್ ದೂರದಲ್ಲಿದೆ.
ಇದನ್ನೂ ಓದಿ:ವಂದೇ ಭಾರತ್, ಶತಾಬ್ದಿ, ತೇಜಸ್.. ಭಾರತದ ಈ ರೈಲುಗಳು 1ಕಿಮೀ ಓಡಲು ಎಷ್ಟು ಯುನಿಟ್ ವಿದ್ಯುತ್ ಬೇಕು?
2012ರಲ್ಲಿ ಉತ್ತರಪ್ರದೇಶದಲ್ಲಿದ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಂಖ್ಯೆ ಕೇವಲ ಎರಡೇ ಎರಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದವು. 2021ರಲ್ಲಿ ಖುಷಿನಗರದಲ್ಲಿ ಮೂರನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 2021, 20ನೇ ತಾರೀಖಿನಂದು ಲೋಕಾರ್ಪಣೆ ಮಾಡಿದರು.
ಮುಂದೆ 2023ರಲ್ಲಿ ಅಯೋಧ್ಯಯಲ್ಲಿಯೂ ಕೂಡ ಭವ್ಯವಾದ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರೆಡಿಯಾಯ್ತು. ಇದು ಉತ್ತರಪ್ರದೇಶದ 4ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿತು. ಈಗ ಐದನೇ ವಿಮಾನ ನಿಲ್ದಾಣವಾಗಿ ಜೇವರ್ ಬಳಿ ಇರುವ ನೊಯ್ಡಾ ಇಂಟರ್ನ್ಯಾಷನಲ್ ಏರ್ಪೋರ್ಟ್ ಗುರುತಿಸಿಕೊಂಡಿದೆ. ಈ ಮೂಲಕ ಉತ್ತರಪ್ರದೇಶ ವಿಶೇಷವಾದ ವಾಯು ಸಂಪರ್ಕವನ್ನು ಜಗತ್ತಿನೊಂದಿಗೆ ತನ್ನನ್ನು ತಾನು ಕಲ್ಪಿಸಿಕೊಂಡಿದೆ. ದೇಶದಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯ ಎಂದು ಈಗ ಉತ್ತರಪ್ರದೇಶ ಗುರುತಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ