/newsfirstlive-kannada/media/post_attachments/wp-content/uploads/2025/07/kapil_sharma_SALMAN_KHAN.jpg)
ಹಿಂದಿಯ ಪ್ರಸಿದ್ಧ ಕಾಮಿಡಿಯನ್ ಕಪಿಲ್ ಶರ್ಮಾ ಅವರು ಇತ್ತೀಚೆಗೆ ಕೆನಡಾದ ಸರ್ರೆ ನಗರದಲ್ಲಿ ಓಪನ್ ಮಾಡಿರುವ ಕೆಫೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅಪರಿಚಿತರಿಂದ ಕೆಫೆಯ ಕಟ್ಟಡದ ಮೇಲೆ ಹಲವು ಸುತ್ತಿನ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕಾರಿನಲ್ಲಿ ಬಂದ ಆಗಂತುಕರು ಕೆಫೆ ಮೇಲೆ ದಾಳಿ ಮಾಡುತ್ತಿದ್ದಂತಯೇ ಕ್ಷಣದಲ್ಲೇ ಎಸ್ಕೇಪ್ ಆಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಸಿಬ್ಬಂದಿ, ಗ್ರಾಹಕರು ಸೇರಿದಂತೆ ಯಾರಿಗೂ ಏನು ಆಗಿಲ್ಲ. ಹಿಂದಿ ಭಾಷೆಯ ಕಾಮಿಡಿಯನ್ ಆಗಿರುವ ಕಪಿಲ್ ಶರ್ಮಾ ಅವರು ಇತ್ತೀಚೆಗಷ್ಟೇ ಅಂದರೆ ಕಳೆದ ವಾರದಲ್ಲೇ ಕೆನಡಾದ ಸರ್ರೆ ನಗರದಲ್ಲಿ ಕ್ಯಾಪ್ಸ್ ಕೆಫೆ ( Kap’s Cafe) ಎನ್ನುವ ಹೆಸರಲ್ಲಿ ಓಪನ್ ಮಾಡಿದ್ದರು.
ಇದನ್ನೂ ಓದಿ:ಬಾಹುಬಲಿ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್.. ನಿರ್ದೇಶಕ ರಾಜಮೌಳಿ ಮತ್ತೆ ಮೂವಿ ಮಾಡ್ತಾರಾ?
ಇದು ಉದ್ದೇಶಿತ ದಾಳಿಯೇ ಅಥವಾ ಬೆದರಿಕೆ ಹಾಕಲು ದಾಳಿ ಮಾಡಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ದಾಳಿಯ ಹೊಣೆಯನ್ನು ಬಬ್ಬರ್ ಖಾಲ್ಸಾ ಸಂಘಟನೆ ಹೊತ್ತುಕೊಂಡಿದೆ. ಇದು ಭಾರತದ ತನಿಖಾ ಸಂಸ್ಥೆ ಎನ್ಐಎ ಮೋಸ್ಟ್ ವಾಂಟೆಡ್ ಉಗ್ರ ಬಬ್ಬರ್ ಖಾಲ್ಸಾ ಸಂಘಟನೆಯ ಹರ್ಜಿತ್ ಸಿಂಗ್ ಲಡ್ಡಿ ಹೊಣೆ ಹೊತ್ತುಕೊಂಡಿದ್ದಾರೆ. ಸದ್ಯ ಹಣಕ್ಕೆ ಬೇಡಿಕೆ ಇಟ್ಟು ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಖರವಾದ ಮಾಹಿತಿ ತನಿಖೆಯಿಂದ ಗೊತ್ತಾಗಬೇಕಿದೆ.
ಕಪಿಲ್ ಶರ್ಮಾ ಅವರ ಪ್ರಸಿದ್ಧ ಕಪಿಲ್ ಶರ್ಮಾ ಶೋ ಸೀಸನ್- 3 ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಮೊದಲ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರನ್ನು ಆಹ್ವಾನ ಮಾಡಲಾಗಿತ್ತು. ಸೆಕೆಂಡ್ ಶೋನಲ್ಲಿ ಮೆಟ್ರೋ ಇನ್ ಡಿನೋ ಸಿನಿಮಾ ತಂಡದವರು ಬಂದಿದ್ದರು. ಇನ್ನು 3ನೇ ಎಪಿಸೋಡ್ನಲ್ಲಿ ಟೀಮ್ ಇಂಡಿಯಾದ ಕ್ರಿಕೆಟರ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ