newsfirstkannada.com

ತಂದೆಯಂತೆ ಮಗ.. 18 ವರ್ಷದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಡಿವೋರ್ಸ್ ಘೋಷಿಸಿದ್ದೇಕೆ?

Share :

Published August 3, 2023 at 1:12pm

    ದೇಶದ ಪ್ರಧಾನಿಯಾದರೂ ಹೆಂಡತಿಗೆ ಡಿವೋರ್ಸ್​ ಘೋಷಣೆ..!

    ಮೂವರು ಮಕ್ಕಳನ್ನು ಹೊಂದಿರುವ ದಂಪತಿ ಟ್ರೂಡೋ, ಸೋಫಿ

    ಡಿವೋರ್ಸ್ ಘೋಷಿಸಿದರು ಮುಂದಿನ ವಾರ ಒಟ್ಟಿಗೆ ಪ್ರವಾಸ

ಒಟ್ಟಾವ: ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೋ ಮತ್ತು ಪತ್ನಿ ಸೋಫಿ ಗ್ರೆಗೊರಿ ಅವರು ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಅಂದ್ರೆ, ಇಬ್ಬರು ದೂರವಾಗಲು ನಿರ್ಧಾರ ಮಾಡಿದ್ದಾರೆ. ಸದ್ಯದಲ್ಲೇ ಪ್ರಧಾನಿ ಟ್ರೂಡೋ ತಮ್ಮ ಪತ್ನಿಯಿಂದ ಡಿವೋರ್ಸ್​ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದು ನೆಟ್ಟಿಗರು ತಂದೆಗೆ ತಕ್ಕ ಮಗ ಎಂದು ಟೀಕೆ ಮಾಡುತ್ತಿದ್ದಾರೆ.

ಜಸ್ಟಿನ್ ಟ್ರೂಡೋ (51), ಪತ್ನಿ ಸೋಫಿ ಗ್ರೆಗೊರಿ (48) ಇಬ್ಬರು ಸೇರಿ ಹಿಂದಿನ ವೈವಾಹಿಕ ಸಂಬಂಧದಲ್ಲಿ ಬಂದಂತಹ ಕೆಲ ಚಾಲೆಂಜ್​ಗಳನ್ನು ಚರ್ಚೆ ಮಾಡಿದ್ದೇವೆ. ನಾವಿಬ್ಬರು ಒಬ್ಬರಿಗೊಬ್ಬರು ಮಾತನಾಡಲು ಕಷ್ಟಕರವಾಗಿದೆ. ನಾವಿಬ್ಬರು ಬೇರೆಯಾಗುವುದರ ಬಗ್ಗೆ ಇಬ್ಬರು ಚರ್ಚೆ ಮಾಡಿದ್ದೇವೆ ಎಂದು ಪ್ರಧಾನಿ ಜಸ್ಟಿನ್​ ಹೇಳಿದ್ದಾರೆ. ಅಲ್ಲದೇ ಇಬ್ಬರು ಕೂಡ ತಮ್ಮ ಇನ್​ಸ್ಟಾ ಅಕೌಂಟ್​ನಲ್ಲಿ ಈ ಬಗ್ಗೆ ಶೇರ್​ ಮಾಡಿದ್ದಾರೆ.

ಪ್ರಧಾನಿ ಜಸ್ಟಿನ್ ಟ್ರೂಡೋ, ಪತ್ನಿ ಸೋಫಿ ಗ್ರೆಗೊರಿ

2005ರಲ್ಲಿ ಮದುವೆಯಾಗಿದ್ದ ಈ ದಂಪತಿ ಇತ್ತೀಚೆಗೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಾಣಿಸುವುದು ಕಡಿಮೆ ಮಾಡಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. 2015ರಲ್ಲಿ ಜಸ್ಟಿನ್​ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಾದ 5 ವರ್ಷದ ಮೇಲೆ ಅಂದರೆ 2020ರಲ್ಲಿ ಮದುವೆ ವಾರ್ಷಿಕೋತ್ಸವದಲ್ಲಿ ನನ್ನ ರಾಕ್, ನನ್ನ ಸಂಗಾತಿ ಮತ್ತು ನನ್ನ ಉತ್ತಮ ಸ್ನೇಹಿತೆ ಎಂದು ಪತ್ನಿಯನ್ನು ಹಾಡಿ ಹೊಗಳಿದ್ದರು. ಇನ್ನು 2025ರಲ್ಲಿ ಬರುವ ಕೆನಡಾದ ಚುನಾವಣೆಗೆ ಇದು ಹೊಡೆತ ಕೊಡಬಹುದು ಎಂದು ಹೇಳಲಾಗುತ್ತಿದೆ.

ಕೆನಾಡದ ಪ್ರಧಾನಿ ಹುದ್ದೆಯಲ್ಲಿದ್ದಾಗಲೇ ಡಿವೋರ್ಸ್​ ನೀಡಿದ ದೇಶದ 2ನೇ ಪ್ರಧಾನಿ ಜಸ್ಟಿನ್ ಟ್ರೂಡೋ ಆಗಿದ್ದಾರೆ. ಅಂದರೆ ಈ ಮೊದಲು ಇವರ ತಂದೆಯೇ ಆಗಿದ್ದ ಪಿರೇರಾ ಟ್ರೂಡೋ ಅವರು ಪತ್ನಿ ಮಾರ್ಗರೇಟ್​ಗೆ 1977ರಲ್ಲಿ ಡಿವೋರ್ಸ್ ನೀಡಿ ವೈವಾಹಿಕ ಜೀವನದಿಂದ ಬೇರೆಯಾಗಿದ್ದರು. ಇನ್ನು ಡಿವೋರ್ಸ್​ ಘೋಷಣೆ ಮಾಡಿದರೂ ಮುಂದಿನ ವಾರ ಜಸ್ಟಿನ್ ಟ್ರೂಡೋ- ಪತ್ನಿ ಸೋಫಿ ಪ್ರವಾಸ ಹೋಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆಯಂತೆ ಮಗ.. 18 ವರ್ಷದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಡಿವೋರ್ಸ್ ಘೋಷಿಸಿದ್ದೇಕೆ?

https://newsfirstlive.com/wp-content/uploads/2023/08/Canada_PM_Justin_Trudeau.jpg

Load More