Advertisment

ಭಾರತದ ವಿರೋಧಿ ಜಸ್ಟಿನ್ ಟ್ರುಡೋ ಕಿಕ್​ಔಟ್​.. ಕೆನಡಾದ ಹೊಸ ಪ್ರಧಾನಿಯಿಂದ ಭಾರತಕ್ಕೆ ಏನು ಲಾಭ?

author-image
Gopal Kulkarni
Updated On
ಭಾರತದ ವಿರೋಧಿ ಜಸ್ಟಿನ್ ಟ್ರುಡೋ ಕಿಕ್​ಔಟ್​.. ಕೆನಡಾದ ಹೊಸ ಪ್ರಧಾನಿಯಿಂದ ಭಾರತಕ್ಕೆ ಏನು ಲಾಭ?
Advertisment
  • 10 ವರ್ಷಗಳ ಕಾಲ ಕೆನಡಾ ಪ್ರಧಾನಿಯಾಗಿ ಟ್ರುಡೋ ಕಿಕ್​​ಔಟ್​
  • ಭಾರತದೊಂದಿಗೆ ವಿರೋಧಿ ನಿಲುವು ತಳೆದಿದ್ದ ಜಸ್ಟೀನ್ ಟ್ರುಡೋ
  • ಹೊಸ ಪ್ರಧಾನಿ ಮಾರ್ಕ್​ ಕಾರ್ನಿ ಮೂಡಿಸುತ್ತಿದ್ದಾರೆ ಹೊಸ ಭರವಸೆ

ಕೆನಾಡಾದಲ್ಲಿ ಭಾರತೀಯ ವಿರೋಧಿ ನಿಲುವಿಗೆ ಗೇಟ್‌ಪಾಸ್ ಸಿಕ್ಕಿದೆ. ಖಲಿಸ್ತಾನಿಯರ ಜೊತೆ ಕೈ ಜೋಡಿಸಿ ಎಗರಾಡುತ್ತಿದ್ದ ಜಸ್ಟೀನ್ ಟ್ರುಡೋ ಯುಗಾಂತ್ಯವಾಗಿದೆ. ಕೆನಡಾದಲ್ಲಿ ಆಡಳಿತದ ಹೊಸ ಅಲೆ ಶುರುವಾಗಿದೆ. ನೂತನ ಪ್ರಧಾನಿಯ ಆಯ್ಕೆಯಾಗಿದೆ. ಭಾರತದ ಜೊತೆ ಮತ್ತೆ ಉತ್ತಮ ಸಂಬಂಧ ವೃದ್ಧಿಯಾಗುವ ಆಶಾಕಿರಣ ಮೂಡಿದೆ.

Advertisment

publive-image

ಕೆನಡಾ ಅಂದಾಕ್ಷಣ, ಭಾರತೀಯ ವಿರೋಧಿ ಅಂತಲೇ ಭಾಸವಾಗ್ತಿತ್ತು. ಹಿಂದೂ ದೇವಾಲಯಗಳ ಮೇಲೆ ದಾಳಿ, ಖಲಿಸ್ತಾನಿಯರ ಜೊತೆ ಶಾಮೀಲಾಗಿ ಭಾರತದ ವಿರೋಧಿಯಾಗಿ ಕೆನಡಾ ಬದಲಾಗಿತ್ತು. ಇಷ್ಟಕ್ಕೆಲ್ಲಾ ಕಾರಣ, ಜಸ್ಟಿನ್ ಟ್ರುಡೋ. ಆದರೆ ಈಗ ಕೆನಡಾದಲ್ಲಿ ಆಡಳಿತ ನಡೆಸದೇ ಮಕಾಡೆ ಮಲಗಿದ್ದ ಟ್ರುಡೋ ಯುಗಾಂತ್ಯವಾಗಿದೆ. ಕೆನಡಾ ಪ್ರಧಾನಿ ಪಟ್ಟಕ್ಕೆ ಸಮರ್ಥ ನಾಯಕನ ಆಯ್ಕೆಯಾಗಿದೆ.

ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ!
ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡು, ಭಾರತದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿತ್ತು ಕೆನಡಾ. ಬಾಯಲ್ಲಿ ಬರೀ ಮಾತು.. ದೇಶದಲ್ಲಿ ಆರ್ಥಿಕತೆಯ ಆಪತ್ತಿಗೆ ತಳ್ಳಿದ್ದ ಟ್ರುಡೋ ಜನವರಿಯಲ್ಲಿ ರಾಜೀನಾಮೆ ಕೊಟ್ಟು ಪ್ರಧಾನಿ ಪಟ್ಟದಿಂದ ಕೆಳಗಿಳಿದಿದ್ರು. ಇದೀಗ ಕೆನಡಾದಲ್ಲಿ ಹೊಸ ಯುಗದ ಆರಂಭವಾಗಿದೆ. ಜಸ್ಟೀನ್ ಟ್ರುಡೋ ಎಂಬ ಭಾರತ ವಿರೋಧಿಯ ಆಡಳಿತ ಅಂತ್ಯವಾಗಿದೆ. ಕೆನಡಾ ಪ್ರಧಾನಿ ಪಟ್ಟದಿಂದ ಜಸ್ಟಿನ್ ಟ್ರುಡೋ ಕಿಕ್‌ಔಟ್ ಆಗಿದ್ದು, ಈ ಪಟ್ಟ ಮಾರ್ಕ್ ಕಾರ್ನಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಭಾರತದ ಕಾನೂನಿಂದ ಪಾರಾಗಲು ಯತ್ನಿಸಿದ್ದ ಲಲಿತ್ ಮೋದಿಗೆ ಭಾರೀ ಹಿನ್ನಡೆ; ಬಿಗ್ ಶಾಕ್ ಕೊಟ್ಟ ವನವಾಟು PM

Advertisment

ಲಿಬರಲ್ ಪಕ್ಷದ ನಾಯಕ, 59 ವರ್ಷದ ಮಾರ್ಕ್‌ ಕಾರ್ನಿ ಕೆನಡಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಲಿಬರಲ್ ಪಕ್ಷದ ಸಂಸದರು ಅಪಾರ ಪ್ರಮಾಣದಲ್ಲಿ ಮತ ಚಲಾಯಿಸಿ ಕಾರ್ನಿಯನ್ನ ಪಟ್ಟಕ್ಕೇರಿಸಿದ್ದಾರೆ. ಶೇ 85.9 ಪ್ರತಿಶತ ಮತಗಳ ಮೂಲಕ ಕಾರ್ನಿ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂದ್ಹಾಗೆ ಮಾರ್ಕ್‌ ಕಾರ್ನಿ ಬ್ಯಾಂಕ್ ಆಫ್ ಕೆನಡಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹಣಕಾಸು ಬಿಕ್ಕಟ್ಟುಗಳನ್ನು ಎದುರಿಸಲು ಕಾರ್ನಿಗೆ ಅಪಾರ ಅನುಭವವಿದೆ. 2008ರಲ್ಲಿ ಎದುರಾಗಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಕೆನಡಾ ಬೇಗ ಚೇತರಿಸಿಕೊಳ್ಳಲು ಕಾರ್ನಿಯೇ ಕಾರಣವಾಗಿದ್ರು.

publive-image

ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದುವ ಹಂಬಲ
ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆ ಮಾರ್ಕ್‌ ಕಾರ್ನಿ ಹಲವು ದಿಟ್ಟ ನಿಲುವುಗಳನ್ನ ಕೈಗೊಂಡಿದ್ದಾರೆ. ಕೆನಡಾವನ್ನ ಅಮೆರಿಕಾಕ್ಕೆ ಸೇರಿಸಿಕೊಳ್ಳುತ್ತೇವೆ ಎನ್ನುತ್ತಿದ್ದ ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ಕೊಟ್ಟಿದ್ದಾರೆ. ಕೆನಡಾ ಮೇಲೆ ಸುಂಕ ಸಮರ ಸಾರಿದ್ದ ವಿಶ್ವದ ದೊಡ್ಡಣ್ಣನಿಗೆ ಪ್ರತಿ ಸುಂಕದ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತ ಭಾರತದೊಂದಿಗೆ ಹದಗೆಟ್ಟಿರೋ ಸಂಬಂಧವನ್ನ ಸುಧಾರಣೆ ಮಾಡುವ ಮಾತನ್ನಾಡಿದ್ದಾರೆ.

ಇದನ್ನೂ ಓದಿ: ದಿಢೀರ್‌ ಭಾರತದ ಜೊತೆ ಸ್ನೇಹ ಹಸ್ತ ಚಾಚಿದ ಚೀನಾ; ಡ್ರ್ಯಾಗನ್ ಬದಲಾಗಲು ಕಾರಣವೇನು?

Advertisment

ಇದೇ ವರ್ಷ ಅಕ್ಟೋಬರ್ ವೇಳೆಗೆ ಕೆನಡಾದಲ್ಲಿ ಚುನಾವಣೆ ಎದುರಾಗಲಿದೆ. ಅಷ್ಟರಲ್ಲಿ ಹಲವು ಸವಾಲುಗಳನ್ನ ಮಾರ್ಕ್‌ ಕಾರ್ನಿ ಮೆಟ್ಟಿ ನಿಲ್ಲಬೇಕಿದೆ. ಜೊತೆಗೆ ಭಾರತದ ಜೊತೆ ಇನ್ಮೇಲೆ ಕೆನಡಾ ಸಂಬಂಧ ಹೇಗಿರಲಿದೆ ಎಂಬ ಕೌತುಕ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment