/newsfirstlive-kannada/media/post_attachments/wp-content/uploads/2023/10/Canada-Pm-And-Modi-1.jpg)
ನವದೆಹಲಿ: ಭಾರತ, ಕೆನಡಾ ದೇಶದ ಮಧ್ಯೆ ಭುಗಿಲೆದ್ದ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುತ್ತಾ ಸಾಗಿದೆ. ಭಾರತದ ವಿರುದ್ಧ ಕೆರಳಿ ಕೆಂಡವಾಗಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳು ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರಿಗೆ ಕಷ್ಟಕರವಾಗಲಿದೆ. ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದಾರೆ.
ಭಾರತವು ಏಕಪಕ್ಷೀಯವಾಗಿ ಕೆನಡಾ ರಾಜತಾಂತ್ರಿಕರಿಗೆ ನೀಡಿದ್ದ ವಿನಾಯಿತಿಯನ್ನು ಹಿಂತೆಗೆದುಕೊಂಡಿದೆ. ಇದು ವಿಯೆನ್ನಾ ಸಮಾವೇಶದ ನಿಯಮಗಳಿಗೆ ವಿರುದ್ಧವಾಗಿವೆ. ಭಾರತದ ಈ ಕ್ರಮಗಳನ್ನು ಎಲ್ಲಾ ದೇಶಗಳು ಗಮನಹರಿಸುತ್ತಿವೆ. ನಾವು ಮಾಡಿದ ಆರೋಪವನ್ನು ಪಕ್ಕಕ್ಕೆ ಇಟ್ಟು ನೋಡುವುದಾದರೆ ಎಲ್ಲ ದೇಶಗಳು ಕಳವಳ ಹೊಂದಿವೆ ಎಂದು ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ತಿಳಿಸಿದ್ದಾರೆ.
ಭಾರತ ಸರ್ಕಾರವು 41 ರಾಜತಾಂತ್ರಿಕರಿಗೆ ನೀಡಿದ್ದ ವಿನಾಯಿತಿಯನ್ನು ಹಿಂತೆಗೆದುಕೊಂಡಿದೆ. ಇದು ಅಂತಾರಾಷ್ಚ್ಟೀಯ ಕಾನೂನಿಗೆ ವಿರುದ್ಧವಾಗಿವೆ. ಕೆನಡಾ ರಾಜತಾಂತ್ರಿಕರು ಪ್ರವಾಸ, ವ್ಯಾಪಾರಕ್ಕೂ ಅಡ್ಡಿಯಾಗಲಿದೆ. ಇದು ಲಕ್ಷಾಂತರ ಜೀವನದ ಮೇಲೆ ಪ್ರಭಾವ ಬೀರಲಿದೆ. ಪ್ರಮುಖವಾಗಿ ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಪರಿಣಾಮ ಬೀರಲಿದೆ. ಅಲ್ಲದೇ ಕೆನಡಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 5ರಷ್ಟು ಜನರು ಭಾರತೀಯ ಪರಂಪರೆಯನ್ನು ಹೊಂದಿದ್ದಾರೆ. ಹೀಗಾಗಿ ಭಾರತದ ಈ ಕ್ರಮಗಳು ಲಕ್ಷಾಂತರ ಜನರ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಸರ್ಕಾರ ಮಾಡಿದ್ದೇ ಅತಿದೊಡ್ಡ ತಪ್ಪು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ