/newsfirstlive-kannada/media/post_attachments/wp-content/uploads/2024/12/CROW-BIRIYANI.jpg)
ಬಿರಿಯಾನಿ ಎಂಬುದು ನಾನ್​ ವೆಜ್​ ಪ್ರಿಯರ ಅಚ್ಚುಮೆಚ್ಚಿನ ಆಹಾರದಲ್ಲಿ ಮೊದಲ ಸಾಲಿಗೆ ಬಂದು ನಿಲ್ಲುವ ಭೋಜ್ಯ. ಬಿರಿಯಾನಿ ಎಂಬುದು ಕೇವಲ ಒಂದು ಆಹಾರವಾಗಿ ಜನಮಾನಸದಲ್ಲಿ ಉಳಿದಿಲ್ಲ. ಅದೊಂದು ಎಮೋಷನ್ ಆಗಿ ಜನರ ಜೊತೆ ಕನೆಕ್ಟ್ ಆಗಿದೆ. ಮಾಂಸಾಹಾರ ಸೇವಿಸದವರೂ ಸಹ ವೆಜ್​ ಬಿರಿಯಾನಿಗೆ ಮಾರು ಹೋಗುತ್ತಾರೆ. ಅಂತಹ ಬಿರಿಯಾನಿಯನ್ನು ಕಲುಷಿತಗೊಳಿಸುವೆ ನೀಚ ಜನರು ಕೂಡ ನಮ್ಮ ನಡುವೆ ಇದ್ದಾರೆ.
ತಮಿಳುನಾಡಿನ ತಿರುವಲ್ಲೂರಿನಲ್ಲಿ ದಂಪತಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವಾರ್ನಿಂಗ್ ಕೊಡುವುದರ ಜೊತೆಗೆ ದಂಡವನ್ನು ಕೂಡ ಹಾಕಿದ್ದಾರೆ. ಕಾರಣ ಈ ದಂಪತಿ ಜನರಿಗೆ ಚಿಕನ್ ಬಿರಿಯಾನಿ ಹೆಸರಿನಲ್ಲಿ ಕಾಗೆ ಬಿರಿಯಾನಿ ಮಾಡಿ ಉಣಬಡಿಸುತ್ತಿದ್ದರು ಎಂದು ತಿಳಿದು ಬಂದಿದೆ. ರಮೇಶ್ ಹಾಗೂ ಭಚ್ಚಮ್ಮ ಎಂಬ ದಂಪತಿ ತೊರೈಪಕ್ಕಮ್ ಗ್ರಾಮದಲ್ಲಿ ಕಾಗೆಗಳನ್ನು ಕೊಲ್ಲುವು ನೀಚ ಕೆಲಸದಲ್ಲಿ ತೊಡಗಿದ್ದರು ಎಂಬುದು ತಿಳಿದು ಬಂದಿದೆ. ಕೂಡಲೇ ಅವರ ಮನೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಸುಮಾರು 19 ಮೃತಪಟ್ಟ ಕಾಗೆಗಳು ಇರುವುದು ಕಂಡು ಬಂದಿದೆ. ವಿಚಾರಿಸಿ ನೋಡಿದಾಗ ಇವರು ರೋಡ್​​ ಸೈಡ್​ನಲ್ಲಿ ಹೋಗುತ್ತಿದ್ದ ಪ್ರಯಾಣಿಕರಿಗೆ ಬಿರಿಯಾನಿ ಹೆಸರಿನಲ್ಲಿ ಕಾಗೆ ಬಿರಿಯಾನಿಯನ್ನ ನೀಡುತ್ತಿದ್ದರು ಎಂಬದುದು ತಿಳಿದು ಬಂದಿದೆ.
ಈಗಾಗಲೇ ಕಾಗೆ ಸಂತತಿಯು ನಾಶವಾಗುತ್ತಿದೆ ಎಂದು ಅರಣ್ಯ ಇಲಾಖೆಗಳು ಕಳವಳ ವ್ಯಕ್ತಪಡಿಸುತ್ತಿವೆ. ಇಂತಹ ಸಮಯದಲ್ಲಿ ಕಾಗೆಗಳನ್ನು ಕೊಲ್ಲುವ ಇಂತಹ ಪದ್ಧತಿಗಳನ್ನು ಜನರು ತಮ್ಮದಾಗಿಸಿಕೊಳ್ಳುತ್ತಿರುವುದರಿಂದ ಈ ಸಂತತಿ ಇನ್ನಷ್ಟು ಕ್ಷೀಣಿಸುವ ಸಾಧ್ಯತೆ ಇದೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಕಾಯ್ದೆ 1972ರ ಪ್ರಕಾರ ಕಾಗೆಯನ್ನು ಹಾನಿಕಾರಕ ಪಕ್ಷಿಯ ಪ್ರಬೇಧಗಳಿಗೆ ಸೇರಿಸಲಾಗಿದೆ. ಸದ್ಯ ರಮೇಶ್​​ ಹಾಗೂ ಬಚ್ಚಮ್ಮರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿಲ್ಲ. ಬದಲಿಗೆ 5 ಸಾವಿರ ರೂಪಾಯಿ ದಂಡ ಹಾಕಿ ಈ ವಿಷಯವನ್ನು ಕಾನೂನಾತ್ಮಕವಾಗಿ ಬಗೆಹರಿಸಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ:ಅಂಬಾನಿ ಶಾಲೆಯಲ್ಲಿ ಕರೀನಾ, ಸೈಫ್ ಅಲಿ ಖಾನ್ ಪುತ್ರನ ವಿದ್ಯಾಭ್ಯಾಸ; ತಿಂಗಳಿಗೆ ಫೀಸ್ ಎಷ್ಟು ಲಕ್ಷ?
ಬಚ್ಚಮ್ಮ ಹಾಗೂ ರಮೇಶ್​ ಅವರನ್ನು ವಿಚಾರ ಮಾಡಿದಾಗ ಈ ಜೋಡಿ ಕಾಗೆಗಳನ್ನು ಕೊಂದು ಅವುಗಳನ್ನು ಹೆದ್ದಾರಿಯ ಸುತ್ತಮುತ್ತಲಿನ ಹೋಟೆಲ್​ಗಳಿಗೆ ಕೂಡ ಪೂರೈಕೆ ಮಾಡುತ್ತಿದ್ದರು ಎಂಬ ಅನುಮಾನವಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us