newsfirstkannada.com

IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

Share :

Published June 29, 2024 at 11:54am

Update June 29, 2024 at 12:25pm

  ಆಫ್ರಿಕಾ ಫೈನಲ್​ಗೆ ಬರುತ್ತೆಂದು ಯಾರೂ ಅಂದುಕೊಂಡಿರಲಿಲ್ಲ!

  ಎಂಟೂ ಪಂದ್ಯ ಗೆದ್ದ ಆಫ್ರಿಕಾ ಭಾರತಕ್ಕೆ ಸಡ್ಡು ಹೊಡೆಯುತ್ತಾ?

  ಫಸ್ಟ್​ ವಿಶ್ವಕಪ್​ನಲ್ಲಿ ದುರಾದೃಷ್ಟವಶಾತ್ ರೀತಿ ಸೋತಿದ್ದ ಆಫ್ರಿಕಾ

ಒಂದಲ್ಲ.. ಎರಡಲ್ಲ.. ಬರೋಬ್ಬರಿ 32 ವರ್ಷ ವಿಶ್ವ ಕ್ರಿಕೆಟ್​ನಲ್ಲಿ ಜೋಕರ್ಸ್ ಆಗಿ ಕರೆಸಿಕೊಳ್ತಿದ್ದ ಟೀಮ್, 7 ಬಾರಿ ಸೆಮೀಸ್​ನಲ್ಲೇ ಮುಖಭಂಗ ಅನುಭವಿಸಿದ್ದ ಆಫ್ರಿಕಾ, ಐಸಿಸಿ ಈವೆಂಟ್​ನಲ್ಲಿ ಒಮ್ಮೆಯೂ ಫೈನಲ್ಸ್​ ಕಂಡಿರಲಿಲ್ಲ. ಐತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ಸ್​ ತಲುಪಿ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡಿದೆ. ಇದಕ್ಕೆ ಕಾರಣ ಈ ಲಕ್ಕಿ ಕ್ಯಾಪ್ಟನ್ ಏಡನ್ ಮಾಕ್ರಮ್​.

ವಿಶ್ವ ಶ್ರೇಷ್ಠ ಆಟಗಾರರು.. ಘಟಾನುಘಟಿ ನಾಯಕರು.. ವಿಶ್ವ ದರ್ಜೆಯ ಭಯಾನಕ ಬೌಲರ್​ಗಳು.. ಅಪಾಯಕಾರಿ ಟೀಮ್ ಎಂಬ ಹೆಗ್ಗಳಿಕೆ. ಒಂದೇ ಒಂದು ಕೊರಗು ನಿನ್ನೆಯ ತನಕ ಸೌತ್ ಆಫ್ರಿಕಾಗೆ ಕಾಡಿತ್ತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 32 ವರ್ಷಗಳಿಂದ ಸೆಮೀಸ್​​​ ಎಂಬ ಚಕ್ರವ್ಯೂಹವ ಗೆಲ್ಲದ ನೋವು, ಯಾತನೆ, ಕೊರಗು, ಆಟಗಾರರು ಹಾಕಿದ್ದ ಕಣ್ಣೀರು ಅಷ್ಟಿಷ್ಟಲ್ಲ. ಈ ಎಲ್ಲ ನೋವಿಗೆ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​​ ಗೆಲುವಿನ ಮುಲಾಮು ಸಿಕ್ಕಿದೆ.

ಆಫ್ಘಾನ್​ ಎದುರು ಅಮೋಘ ಜಯ ಸಾಧಿಸಿದ ಆಫ್ರಿಕಾ, ವಿಶ್ವಕಪ್​ ಇತಿಹಾಸದಲ್ಲೇ ಮೊದಲ ಬಾರಿಗೆ ಐಸಿಸಿ ಈವೆಂಟ್​ನಲ್ಲಿ ಫೈನಲ್ ತಲುಪಿದೆ. 32 ವರ್ಷಗಳ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿದೆ. ಇದರೊಂದಿಗೆ ನಾಯಕ ಮಾಕ್ರಮ್, ಸೌತ್ ಆಫ್ರಿಕಾ ಪಾಲಿನ ಲಕ್ಕಿ ಕ್ಯಾಪ್ಟನ್ ಆಗಿದ್ದಾರೆ. ಇದಕ್ಕೆಲ್ಲ ಕಾರಣ ಗೆಲುವು.

ಈ T20 ವಿಶ್ವಕಪ್​ನಲ್ಲಿ ಎಲ್ಲ ಪಂದ್ಯಗಳಲ್ಲಿ ಗೆಲುವು

ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಸೌತ್​ ಆಫ್ರಿಕಾ ಪ್ರದರ್ಶನ ಅದ್ಭುತ. ಟೂರ್ನಿಯ ಆರಂಭದಲ್ಲಿ ದಿಗ್ಗಜ ಕ್ರಿಕೆಟಿಗರು, ಸೌತ್ ಆಫ್ರಿಕಾವನ್ನು ಲೆಕ್ಕಕ್ಕೂ ಇಟ್ಟಿರಲಿಲ್ಲ. ಸೂಪರ್-8 ಸ್ಟೇಜ್​ ಕೊನೆ ಅಂತಾನೇ ಭವಿಷ್ಯ ನುಡಿಯಲಾಗಿತ್ತು. ಈ ಎಲ್ಲ ಭವಿಷ್ಯವನ್ನೂ ಸುಳ್ಳಾಗಿಸಿದ ಸೌತ್ ಆಫ್ರಿಕಾ, ಎಂಟಕ್ಕೆ ಎಂಟೂ ಪಂದ್ಯಗಳಲ್ಲೂ ಗೆದ್ದು ಸಾಧಿಸಿದೆ.

ಚೋಕರ್ಸ್​ ಪಟ್ಟ ಕಳಚಿದ ಮಾಕ್ರಮ್

ಏಡನ್ ಮಾಕ್ರಮ್, ಸೌತ್ ಆಫ್ರಿಕನ್ ಲಕ್ಕಿ ಕ್ಯಾಪ್ಟನ್​​.​​​​​​ ಇದಕ್ಕೆ ಕಾರಣ ಮಾಕ್ರಮ್ ನಾಯಕತ್ವದಲ್ಲಿ ಮಾಡಿದ ಸಾಧನೆ. 1992, 1999, 2007, 2015, 2023ರ ಏಕದಿನ ವಿಶ್ವಕಪ್​, 2009ರ ಟಿ20, 2014 ಟಿ20 ವಿಶ್ವಕಪ್​​​ಗಳಲ್ಲಿ ಸೆಮೀಸ್ ತಲುಪಿದ್ದರು. ಸೆಮೀಸ್​ನಲ್ಲೇ ನಿರಾಸೆ ಅನುಭವಿಸಿತ್ತು. ಈ ಕಾರಣಕ್ಕೆ 32 ವರ್ಷಗಳಿಂದ ವಿಶ್ವ ಕ್ರಿಕೆಟ್​ನಲ್ಲಿ ಚೋಕರ್ಸ್ ಹಣೆಪಟ್ಟಿ ಹೊಂದಿತ್ತು.

ಆಫ್ರಿಕಾದ ಯಾವ ನಾಯಕನೂ ಮಾಡಿಲ್ಲ ಸಾಧನೆ

ಬ್ಯಾನ್ ಬಳಿಕ 1992ರಲ್ಲಿ ವಿಶ್ವ ಕ್ರಿಕೆಟ್​​ಗೆ ಮರಳಿದ್ದ ಸೌತ್ ಆಫ್ರಿಕಾ. ಅಂದಿನಿಂದ ಹಲವು ನಾಯಕರನ್ನು ನೋಡಿದೆ. ಮೊದಲ ವಿಶ್ವಕಪ್​​ನಲ್ಲೇ ಕೆಪ್ಲರ್ ವೆಸಲ್ಸ್ ನಾಯಕತ್ವದಲ್ಲಿ ದುರಾದೃಷ್ಟವಶಾತ್ ರೀತಿಯಲ್ಲಿ ಸೋತಿತ್ತು. ಸೌತ್ ಆಫ್ರಿಕಾದ ಸಕ್ಸಸ್​ಫುಲ್ ನಾಯಕರು ಎನಿಸಿಕೊಂಡಿದ್ದ ಹ್ಯಾನ್ಸಿ ಕ್ರೊನ್ಯೆ, ಗ್ರೇಮ್​ ಸ್ಮಿತ್, ಮಾರ್ಕ್​ ಬೌಷರ್, ಡಿವಿಲಿಯರ್ಸ್​, ಫಾಫ್ ಡುಪ್ಲೆಸಿ ನಾಯಕತ್ವದಲ್ಲೂ ಸೆಮೀಸ್​ನಲ್ಲೇ ಪಯಣ ಅಂತ್ಯಗೊಳಿಸಿದ್ದ ಸೌತ್ ಆಫ್ರಿಕಾ, 2023ರ ಏಕದಿನ ವಿಶ್ವಕಪ್​ನಲ್ಲಿ ತೆಂಬಾ ಬಾವುಮಾ ನೇತೃತ್ವದಲ್ಲೂ ಮುಗ್ಗರಿಸಿ ಚೋಕರ್ಸ್​ ಹಣೆಪಟ್ಟಿ ಕಳಚುವಲ್ಲಿ ವಿಫಲವಾಗಿತ್ತು.

2023 ಏಕದಿನ ವಿಶ್ವಕಪ್​ನಲ್ಲಿ 2 ಪಂದ್ಯಗಳಲ್ಲಿ ಗೆಲುವು

2023ರ ಏಕದಿನ ವಿಶ್ವಕಪ್​ನಲ್ಲಿ ಸೌತ್ ಆಫ್ರಿಕಾ ಸೋತಿದ್ದರು, ಮಾಕ್ರಮ್ ನಾಯಕತ್ವಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ರು. ಇದಕ್ಕೆ ಕಾರಣ ತೆಂಬಾ ಬಾವುಮಾ ಅಲಭ್ಯತೆಯಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾ ತಂಡವನ್ನು ಸೋಲಿಸಿದ್ದ ಮಾಕ್ರಮ್, ಏಕದಿನ ವಿಶ್ವಕಪ್​ನಲ್ಲಿ ಆಫ್ರಿಕಾ ತಂಡದ ಸೆಮಿಫೈನಲ್​ ಹಾದಿ ಸುಲಭವಾಗಿಸಿದ್ರು. ಪ್ರಸಕ್ತ ವಿಶ್ವಕಪ್​​ನಲ್ಲೂ ಸೋಲನ್ನೇ ಅರಿಯದ ನಾಯಕರಾಗಿ ಮುನ್ನುಗ್ಗುತ್ತಿದ್ದಾರೆ.

ಸನ್​ರೈಸರ್ಸ್​ ಈಸ್ಟನ್ ಕೇಪ್​​​ SAT20 ಚಾಂಪಿಯನ್ಸ್​

ಐಸಿಸಿ ಈವೆಂಟ್​ನಲ್ಲಿ ಮಾತ್ರವೇ ಅಲ್ಲ, 2023ರ ಚೊಚ್ಚಲ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲೂ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಚೊಚ್ಚಲ ಸೀಸನ್​ನಲ್ಲೇ ನಾಯಕರಾಗಿ ಅದ್ಭುತವಾದ ಪರ್ಫಾಮೆನ್ಸ್​ ನೀಡಿದ್ದ ಮಾಕ್ರಮ್, ಸನ್ ರೈಸರ್ಸ್ ಫ್ರಾಂಚೈಸಿಗೆ ಗೆಲುವಿನ ಸಿಹಿಯನ್ನ ನೀಡಿದ್ರು ಅನ್ನೋದು ಮರೆಯುವಂತಿಲ್ಲ.

ಇದನ್ನೂ ಓದಿ: IND vs SA; ಹಿಟ್​​​ಮ್ಯಾನ್ ಇಂದಿನ ಬಿಗ್ ಮ್ಯಾಚ್​ ವಿನ್ನರ್.. ಇದಕ್ಕೆ ಅಸಲಿ ಕಾರಣ ಇಲ್ಲಿದೆ!

ದ.ಆಫ್ರಿಕಾಕ್ಕೆU-19 ವರ್ಲ್ಡ್​ಕಪ್ ಗೆದ್ದು ಕೊಟ್ಟ ನಾಯಕ..!

ಟಿ20 ವಿಶ್ವಕಪ್​ ಜಯಿಸಿಕೊಡುವ ನಿರೀಕ್ಷೆ ಹುಟ್ಟಿಹಾಕಿದ ಮಾಕ್ರಮ್, 19ರ ವಯಸ್ಸಿನಲ್ಲಿ ಆಫ್ರಿಕಾಗೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದರು. 2014ರಲ್ಲಿ ಅಂಡರ್​​-19 ನಾಯಕರಾಗಿದ್ದ ಮಾಕ್ರಮ್, ಪಾಕ್ ಎದುರಿನ ಫೈನಲ್​ನಲ್ಲಿ ಅಜೇಯ 66 ರನ್ ಬಾರಿಸಿ ವಿಶ್ವ ಕಿರೀಟಕ್ಕೆ ಮುತ್ತಿಡುವಂತೆ ಮಾಡಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ 6ಕ್ಕೆ ಆರೂ ಪಂದ್ಯವನ್ನ ಗೆದ್ದು ಸೌತ್ ಆಫ್ರಿಕಾ, ಟೂರ್ನಿಯಲ್ಲಿ ಅಜೇಯವಾಗಿತ್ತು. ವಿಶ್ವಕಪ್​ನಲ್ಲಿ ಸೋಲನ್ನರಿಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ತಂಡವನ್ನ ಅದ್ಭುತವಾಗಿ ಮುನ್ನಡೆಸ್ತಿರುವ ಮಾಕ್ರಮ್​​​​​​, ತಂಡಕ್ಕೆ ಚೊಚ್ಚಲ ವಿಶ್ವಕಪ್​ ತಂದುಕೊಡುವ ಕನಸು ಕಾಣ್ತಿದ್ದು. ಎಷ್ಟರ ಮಟ್ಟಿಗೆ ಸಕ್ಸಸ್ ಕಾಣ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

https://newsfirstlive.com/wp-content/uploads/2024/06/SA_IND_Rohit.jpg

Load More