newsfirstkannada.com

ಸತತ 22 ವರ್ಷ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಿದ್ದ ಕ್ಯಾಪ್ಟನ್‌.. ಅರ್ಜುನನ ವೀರಮರಣಕ್ಕೆ ಕನ್ನಡಿಗರ ಕಣ್ಣೀರು

Share :

Published December 4, 2023 at 5:42pm

    ದ್ರೋಣ, ಬಲರಾಮನ ಬಳಿಕ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್‌ ಅರ್ಜುನ

    1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದ ಆನೆ

    ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ಜಂಬೂ ಸವಾರಿ. ಗಜಪಡೆ ರಾಜಗಾಂಭೀರ್ಯದಲ್ಲಿ ನಾಡದೇವತೆಯ ಅಂಬಾರಿ ಹೊತ್ತು ಸಾಗುತ್ತಿದ್ದರೆ ನೋಡೋದೇ ಒಂದು ಅದೃಷ್ಟ. ಇಂತಹ ಜಂಬೂ ಸವಾರಿಯಲ್ಲಿ ಸತತ 22 ವರ್ಷ ಭಾಗಿಯಾಗಿದ್ದ ಕ್ಯಾಪ್ಟನ್ ಅರ್ಜುನ ಇಂದು ಸಾವನ್ನಪ್ಪಿದ್ದಾನೆ. ಕಾಡಾನೆ ಜೊತೆ ಕಾದಾಡುತ್ತಾ ವೀರಮರಣವನ್ನಪ್ಪಿದ್ದಾನೆ.

ದಸರಾ ಅಂಬಾರಿ ಹೊತ್ತು ಕ್ಯಾಪ್ಟನ್ ಆಗಿದ್ದ ಅರ್ಜುನನ ಸಾವು ಕನ್ನಡಿಗರಿಗೆ ಆಘಾತ ತಂದಿದೆ. ರಾಜ್ಯಾದ್ಯಂತ ಅರ್ಜುನನ ಸಾವಿಗೆ ಕಂಬನಿ ಮಿಡಿಯಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅರ್ಜುನನ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸಂತಾಪ ಸೂಚಿಸಲಾಗುತ್ತಿದೆ.

ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

1960ರಲ್ಲಿ ಜನಿಸಿದ್ದ ಅರ್ಜುನನಿಗೆ 63 ವರ್ಷ ವಯಸ್ಸಾಗಿತ್ತು. 1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. ಮಾವುತರು ಅರ್ಜುನನ್ನು ಚೆನ್ನಾಗಿ ಪಳಗಿಸಿದ ನಂತರ 1990ರಲ್ಲಿ ಅರ್ಜುನನ್ನು ಮೈಸೂರಿನ ದಸರಾ ಉತ್ಸವದ ಶಿಬಿರಕ್ಕೆ ಕರೆತರಲಾಗಿತ್ತು. ಆನೆ ದ್ರೋಣ, ಬಲರಾಮನ ಬಳಿಕ ಅರ್ಜುನನೇ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ. ಅರ್ಜುನ 6040 ಕೆಜಿ ತೂಕ ಹೊಂದಿದ್ದು, 2.95 ಮೀಟರ್ ಉದ್ದ ಇದ್ದ. ಕ್ಯಾಪ್ಟನ್ ಅರ್ಜುನ ಸತತ 22 ವರ್ಷದಿಂದ ವಿಶ್ವವಿಖ್ಯಾತ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ.

ಅರ್ಜುನನ ವೀರಮರಣ! 

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಸಾಕಾನೆ ಅರ್ಜುನ ಒಂಟಿಯಾಗಿ ಕಾಳಗಕ್ಕಿಳಿದಿದ್ದ. ಈ ಮದಗಜಗಳ ಕಾಳಗದಲ್ಲಿ ವೀರಾವೇಷದಲ್ಲಿ ಹೋರಾಡಿದ ಅರ್ಜುನ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತತ 22 ವರ್ಷ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಿದ್ದ ಕ್ಯಾಪ್ಟನ್‌.. ಅರ್ಜುನನ ವೀರಮರಣಕ್ಕೆ ಕನ್ನಡಿಗರ ಕಣ್ಣೀರು

https://newsfirstlive.com/wp-content/uploads/2023/12/Arjuna-Elephant.jpg

Load More