ಮಹತ್ವದ ಪಂದ್ಯಕ್ಕೆ ಡೆಲ್ಲಿ ಕ್ಯಾಪ್ಟನ್​ ಅಕ್ಷರ್ ಪಟೇಲ್ ಕೈ ಕೊಟ್ಟಿದ್ದು ಯಾಕೆ.. ಕಾರಣ ಇಲ್ಲಿದೆ!

author-image
Bheemappa
Updated On
ಮಹತ್ವದ ಪಂದ್ಯಕ್ಕೆ ಡೆಲ್ಲಿ ಕ್ಯಾಪ್ಟನ್​ ಅಕ್ಷರ್ ಪಟೇಲ್ ಕೈ ಕೊಟ್ಟಿದ್ದು ಯಾಕೆ.. ಕಾರಣ ಇಲ್ಲಿದೆ!
Advertisment
  • ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಷರ್ ಪಟೇಲ್ ನಿನ್ನೆ ಯಾಕೆ ಆಡಲಿಲ್ಲ?
  • ಪಂದ್ಯವನ್ನ ಸೋತು ಪ್ಲೇ ಆಫ್​ನಿಂದ ಹೊರ ಬಿದ್ದಿರುವ ಡೆಲ್ಲಿ ತಂಡ
  • ಮುಖ್ಯವಾದ ಮ್ಯಾಚ್​ನಿಂದಲೇ ಹೊರಗುಳಿದಿದ್ದ ಅಕ್ಷರ್ ಪಟೇಲ್

ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅದ್ಭುತವಾಗಿ ಗೆಲುವು ಸಾಧಿಸಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಐಪಿಎಲ್​​ನ ಆರಂಭದಲ್ಲಿ ಟೇಬಲ್ ಟಾಪರ್ ಆಗಿದ್ದ ಡೆಲ್ಲಿ ಕ್ಯಾಪಿಟಲ್​ ಬರು ಬರುತ್ತಾ ಹೀನಾಯ ಪ್ರದರ್ಶನ ನೀಡಿ ಇದೀಗ ಪ್ಲೇ ಆಫ್​ಗೆ ಹೋಗುವ ಒಂದೊಳ್ಳೆ ಅವಕಾಶ ಕೈಚೆಲ್ಲಿದೆ. ಈ ಎಲ್ಲದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಅಕ್ಷರ್ ಪಟೇಲ್​ ಪಂದ್ಯಕ್ಕೆ ಗೈರು ಹಾಜರಾಗಿದ್ದು ಏಕೆ?.

ತಂಡದ ನಾಯಕ ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​​​​​, ಮುಂಬೈ ವಿರುದ್ಧ ಅಖಾಡಕ್ಕೆ ಇಳಿದು ಸೋಲೋಪ್ಪಿಕೊಂಡಿದೆ. ಅಕ್ಷರ್ ಪಟೇಲ್ ಅವರ ಜವಾಬ್ದಾರಿಯನ್ನು ಫಾಫ್​ ಡುಪ್ಲೆಸಿಸ್​ ವಹಿಸಿಕೊಂಡಿದ್ದರು. ನಾಯಕನಾಗಿ ಟಾಸ್ ಗೆದ್ದ ಫಾಫ್​, ಪಂದ್ಯವನ್ನು ಗೆಲ್ಲಲು ಆಗಲಿಲ್ಲ. ಮುಂಬೈ ಇಂಡಿಯನ್ಸ್ ನೀಡಿದ್ದ ಸಾಧಾರಣ ಮೊತ್ತದ ಟಾರ್ಗೆಟ್ ತಲುಪಲಾಗದೇ ಡೆಲ್ಲಿ ತಂಡ ಮಂಡಿಯೂರಿದೆ.

ಇದನ್ನೂ ಓದಿ:ಪ್ಲೇ ಆಫ್​​ ರೇಸ್​​; ಡೆಲ್ಲಿ ಟೀಮ್ ಅನ್ನು ಹೊರ ದಬ್ಬಿದ​ ಪಾಂಡೆ ಪಡೆ.. ಮುಂಬೈ ಗೆಲುವಿಗೆ ಕಾರಣ?

publive-image

2025ರ ಐಪಿಎಲ್ ಆರಂಭದಿಂದಲೂ ಡೆಲ್ಲಿ ತಂಡದ ನಾಯಕನಾಗಿದ್ದ ಅಕ್ಷರ್ ಪಟೇಲ್ ಅವರು ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಇದರಿಂದ ಆಗಿಯೇ ಮುಂಬೈ ಇಂಡಿಯನ್ಸ್​ ಜೊತೆಗಿನ ಅತಿ ಮುಖ್ಯವಾದ ಪಂದ್ಯದಿಂದ ಹೊರಗುಳಿದಿದ್ದರು. ತೀವ್ರ ಜ್ವರದಿಂದ ಬಳಲುತ್ತಿರುವ ಅಕ್ಷರ್​ ಪಟೇಲ್​, ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಆಲ್​​ರೌಂಡರ್ ಪ್ರದರ್ಶನ ನೀಡುವ ಅಕ್ಷರ್ ಪಟೇಲ್​ ತಂಡದಲ್ಲಿ ಇದ್ದಿದ್ದರೇ ಗೆಲುವಿಗೆ ಮುಖ್ಯ ಪಾತ್ರವಹಿಸುತ್ತಿದ್ದರು. ಅತ್ಯುತ್ತಮ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡುವ ಅಕ್ಷರ್​ ಪಟೇಲ್ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡುವ ಚಾಣಕ್ಷರಾಗಿದ್ದಾರೆ. ಡೆಲ್ಲಿ ತಂಡದ ಸೋಲಿಗೆ ಈ ಆಲ್​​ರೌಂಡರ್​ ಅನುಪಸ್ಥಿತಿಯು ಒಂದು ಕಾರಣ ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment