newsfirstkannada.com

ರೋಹಿತ್ vs ಸ್ಟೋಕ್ಸ್​​​​ ದಂಗಲ್: ಯಾರ ಸ್ಟ್ರೆಂಥ್​​ ಏನು..? ಯಾರು ಕೊಡ್ತಾರೆ ಚೆಕ್​ಮೇಟ್..?

Share :

Published January 25, 2024 at 10:52am

    ಟೀಮ್ ಇಂಡಿಯಾ vs ಇಂಗ್ಲೆಂಡ್​ ಬ್ಯಾಟಲ್ ಅಲ್ಲ

    ಟ್ರೂ ಫೈಟರ್​ ಸ್ಟೋಕ್ಸ್​​​ ರೋಹಿತ್​ಗೆ ಟಕ್ಕರ್​ ಕೊಡ್ತಾರಾ..?

    ನಾಯಕರನಾಗಿ ರೋಹಿತ್ ಬೆಸ್ಟಾ? ಸ್ಟೋಕ್ಸ್ ಬೆಸ್ಟಾ..?

ಇಂದಿನಿಂದ ಟೆಸ್ಟ್​ ದಂಗಲ್​ ಆರಂಭಗೊಳ್ಳಲಿದ್ದು, ಕ್ಯಾಪ್ಟನ್ ರೋಹಿತ್​​ ಶರ್ಮಾ ಹಾಗೂ ಬೆನ್ ಸ್ಟೋಕ್ಸ್ ಹೈದ್ರಾಬಾದ್​ ಅಂಗಳದಲ್ಲಿ ತೊಡೆತಟ್ಟಲು ಸಜ್ಜಾಗಿದ್ದಾರೆ. ಕ್ಯಾಪ್ಟನ್ಸ್ ವಾರ್​ನಲ್ಲಿ ಯಾರು ಬೆಸ್ಟ್ ? ಯಾರ ಸ್ಟ್ರೆಂಥ್ ಏನು ಅನ್ನೋ ವಿವರ ಇಲ್ಲಿದೆ.

ಭಾರತ-ಇಂಗ್ಲೆಂಡ್ ತಂಡಗಳು ಕ್ರಿಕೆಟ್​ ಅಂಗಳದಲ್ಲಿ ಮುಖಾಮುಖಿಯಾಗಿವೆ. 2 ವರ್ಷಗಳ ನಂತ್ರ ಕ್ರಿಕೆಟ್​ ಜನಕರು ಭಾರತಕ್ಕೆ ಆಗಮಿಸಿದ್ದಾರೆ. ಶತಾಯಗತಾಯ ಹೈದ್ರಾಬಾದ್​ ಟೆಸ್ಟ್​ ಗೆಲ್ಲಲು ಉಭಯ ಟೀಮ್ಸ್ ಸರ್ವ ರೀತಿಯಲ್ಲಿ ಸಜ್ಜಾಗಿವೆ. ಗೆಲುವು-ಸೋಲಿನ ಟಾಪಿಕ್​​​​​​ ಜೊತೆ ಕ್ಯಾಪ್ಟನ್ಸ್​ ವಾರ್​​​​ನಿಂದ ಈ ಸರಣಿ ಸಖತ್ ಸೌಂಡ್​ ಮಾಡ್ತಿದೆ.

ಟೀಮ್ ಇಂಡಿಯಾ V/S ಇಂಗ್ಲೆಂಡ್​ ಬ್ಯಾಟಲ್ ಅಲ್ಲ
ಇಂಡೋ-ಇಂಗ್ಲೆಂಡ್​ ಟೆಸ್ಟ್​​​​​ ಸಮರ ಬರೀ ಉಭಯ ತಂಡಗಳ ನಡುವಿನ ವಾರ್​​ ಆಗಿ ಉಳಿದಿಲ್ಲ. ಕ್ಯಾಪ್ಟನ್ ರೋಹಿತ್​ ವರ್ಸಸ್​ ಕ್ಯಾಪ್ಟನ್ ಬೆನ್​ ಸ್ಟೋಕ್ಸ್​​ ಕದನವಾಗಿ ಮಾರ್ಪಟ್ಟಿದೆ. ಯಾಕಂದ್ರೆ ಇಬ್ಬರು ಚಾಣಾಕ್ಷ ಕ್ಯಾಪ್ಟನ್ಸ್​. ಆನ್ ಸ್ಪಾಟ್​​​ ಅಲ್ಲೆ ಗೇಮ್​​ ಪ್ಲಾನ್ ರೂಪಿಸಿ ಕಾರ್ಯ ತಂತ್ರ ಯಶಸ್ವಿಗೊಳಿಸುವ ನಿಪುಣರು. ಇಂತಹ ಚಾಣಾಕ್ಷ ಕ್ಯಾಪ್ಟನ್ಸ್ ಕಮಾಲ್​​ ನೋಡಲು ಕ್ರಿಕೆಟ್​ ಜಗತ್ತು ಕಾತುರದಿಂದ ಕಾಯ್ತಿದೆ.

ರೋಹಿತ್​​​ ಶರ್ಮಾಗೆ ಸಾಟಿ ಆಗ್ತಾರಾ ಬೆನ್​ ಸ್ಟೋಕ್ಸ್​​..?
ತವರಿನಲ್ಲಿ ಟೀಮ್ ಇಂಡಿಯಾ ಈ ಬಾರಿಯೂ ಸರಣಿ ಗೆಲ್ಲುವ ಫೇವರಿಟ್​ ತಂಡವೆನಿಸಿದೆ. ಅದಕ್ಕೆ ಕಾರಣ ಹಿಟ್​ಮ್ಯಾನ್​​ ಚುಕ್ಕಾಣಿ ಹಿಡಿದಿರೋದು ಹೌದು. ಯಶಸ್ವಿಯಾಗಿ ತಂಡ ಮುನ್ನಡೆಸ್ತಿರೋ ರೋಹಿತ್​​ ಇಂಗ್ಲೆಂಡ್​​​ ತಂಡವನ್ನ ಖೆಡ್ಡಾಗೆ ಕೆಡುವುವ ಎಲ್ಲಾ ಕೆಪಾಸಿಟಿ ಹೊಂದಿದ್ದಾರೆ.

ರೋಹಿತ್​​ ಶರ್ಮಾ ಸ್ಟ್ರೆಂಥ್​ ಏನು..?

  • ಅಪಾರ ಅನುಭವದ ನಾಯಕ
  • ಪ್ರತಿ ಪಂದ್ಯ ಗೆಲ್ಲುವ ಛಲದಿಂದ ಕಣಕ್ಕೆ
  • ರಿಸ್ಕ್​​ ತೆಗೆದುಕೊಳ್ಳಲು ಹಿಂಜರಿಯಲ್ಲ
  • ಆಟಗಾರರನ್ನ ನಿಭಾಯಿಸುವ ಕಲೆ ಕರಗತ
  • ತಾಳ್ಮೆಯಿಂದ ತಂಡ ಮುನ್ನಡೆಸುವ ಗುಣ
  • ಜವಾಬ್ದಾರಿಯಿಂದ ನುಣುಚಿಕೊಳ್ಳಲ್ಲ

ಇಂಗ್ಲೆಂಡ್ ಸಾರಥಿ ಬೆನ್ ಸ್ಟೋಕ್ಸ್​​ ಸಾಮಾನ್ಯ ನಾಯಕನಲ್ಲ. ರೋಹಿತ್​​​ರಷ್ಟೇ ಅನುಭವ ಸ್ಟೋಕ್ಸ್​​ಗಿದೆ. ಹಿಟ್​ಮ್ಯಾನ್​ ಒಂದು ಹೆಜ್ಜೆ ಮುಂದೆ ಇಟ್ರೆ ಈತ ಎರಡು ಹೆಜ್ಜೆ ಮುಂದಿಡುವ ಕಿಲಾಡಿ. ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ನಾಯಕತ್ವದ ಗುಣವಿದೆ.

ಬೆನ್ ಸ್ಟೋಕ್ಸ್​ ಸ್ಟ್ರೆಂಥ್​ ಏನು..?
ಬೆನ್ ಸ್ಟೋಕ್ಸ್ ಆಕ್ರಮಣಕಾರಿ ನಾಯಕತ್ವ ಹೊಂದಿದ್ದಾರೆ. ಇವರಲ್ಲಿ ಪ್ರತಿ ಪಂದ್ಯ ಗೆಲ್ಲುವ ಮನೋಭಾವವಿದೆ. ಜೊತೆಗೆ ತನ್ನ ಆಟದಿಂದಲೇ ಉಳಿದ ಆಟಗಾರರಿಗೆ ಹೇಗೆ ಆಟ ಬೇಕು ಅನ್ನೋ ಪಾಠ ಮಾಡೋ ಸಾಮರ್ಥ್ಯವಿದೆ. ದಶಕದ ಬಳಿಕ ಭಾರತದಲ್ಲಿ ಸರಣಿ ಗೆಲ್ಲುವ ತವಕ ಇದ್ದು, ಸೋಲಿಗೆ ಯಾವತ್ತೂ ಎದೆಗುಂದಲ್ಲ. ಎದುರಾಳಿಯ ವೀಕ್ನೆಸ್ ಚೆನ್ನಾಗಿ ಅರಿತು ಸೂಕ್ತ ಸ್ಟ್ರಾಟಜಿ ರೂಪಿಸುತ್ತಾರೆ. ಇಬ್ಬರ ಕ್ಯಾಪ್ಟನ್ಸಿ ಟ್ರ್ಯಾಕ್​ ರೆಕಾರ್ಡ್​ ಹೇಗಿದೆ ? ಉಭಯ ನಾಯಕರಲ್ಲಿ ಯಾರು ಬೆಸ್ಟ್​​ ? ರೋಹಿತ್​ ಶರ್ಮಾನಾ? ಬೆನ್ ಸ್ಟೋಕ್ಸಾ ? ಅಂತ ನೋಡಿದ್ರೆ ಇಂಗ್ಲೆಂಡ್​ ಕ್ಯಾಪ್ಟನ್​​​​ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.

ನಾಯಕರಾಗಿ ರೋಹಿತ್​​​-ಸ್ಟೋಕ್ಸ್
ರೋಹಿತ್​​​​ ಶರ್ಮಾ 11 ಟೆಸ್ಟ್​​ಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಆ ಪೈಕಿ 6 ರಲ್ಲಿ ಗೆದ್ದರೆ 3 ಪಂದ್ಯ ಸೋತಿದ್ದಾರೆ. ಎರಡು ಪಂದ್ಯ ಡ್ರಾ ಆಗಿವೆ. ಗೆಲುವಿನ ಪ್ರತಿಶತ 54.55 ಆಗಿದೆ. ಇನ್ನು ಬೆನ್ ಸ್ಟೋಕ್ಸ್​ 19 ಪಂದ್ಯಗಳಲ್ಲಿ ತಂಡ ಮುನ್ನಡೆಸಿ 13 ಪಂದ್ಯ ಗೆಲ್ಲಿಸಿಕೊಟ್ರೆ 5 ರಲ್ಲಿ ಸೋತಿದ್ದಾರೆ. 1 ಪಂದ್ಯ ಡ್ರಾ ಆಗಿದ್ದು, ಗೆಲುವಿನ ಪ್ರತಿಶತಕ ರೋಹಿತ್​ಗಿಂತ ಹೆಚ್ಚಿದೆ. 68.42 ವಿನ್ನಿಂಗ್ ಪರ್ಸಂಟೇಜ್​ ಹೊಂದಿದ್ದಾರೆ.
ಒಟ್ಟಿನಲ್ಲಿ, ಇಂಡೋ-ಆಂಗ್ಲ ಟೆಸ್ಟ್​ ಸಿರೀಸ್​​​, ರೋಹಿತ್​​​​​ ವರ್ಸಸ್​​ ಬೆನ್ ಸ್ಟೋಕ್ಸ್​​ ಕದನವಾಗಿ ಮಾರ್ಪಟ್ಟಿದೆ. ಫೈನಲಿ ಕ್ಯಾಪ್ಟನ್ಸ್ ವಾರ್​ನಲ್ಲಿ ಯಾರಿಗೆ ಯಾರು ಚೆಕ್​ಮೇಟ್​ ಕೊಡ್ತಾರೆ ಅನ್ನೊದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್ vs ಸ್ಟೋಕ್ಸ್​​​​ ದಂಗಲ್: ಯಾರ ಸ್ಟ್ರೆಂಥ್​​ ಏನು..? ಯಾರು ಕೊಡ್ತಾರೆ ಚೆಕ್​ಮೇಟ್..?

https://newsfirstlive.com/wp-content/uploads/2024/01/benstokes.jpg

Load More