BBK11: ಐಶ್ವರ್ಯಾ ಮೇಲೆ ದ್ವೇಷ ಸಾಧಿಸಿ ಗೆಲುವು ಸಾಧಿಸಿದ್ರಾ ಕ್ಯಾಪ್ಟನ್ ಭವ್ಯಾ?

author-image
Veena Gangani
Updated On
BBK11: ಐಶ್ವರ್ಯಾ ಮೇಲೆ ದ್ವೇಷ ಸಾಧಿಸಿ ಗೆಲುವು ಸಾಧಿಸಿದ್ರಾ ಕ್ಯಾಪ್ಟನ್ ಭವ್ಯಾ?
Advertisment
  • ಎಲ್ಲರ ಮುಂದೆಯೇ ಭವ್ಯಾ ಗೌಡಗೆ ಗೆಳತಿ ಹೇಳಿದ್ದೇನು ಗೊತ್ತಾ?
  • ಕಿಚ್ಚ ಸುದೀಪ್​ ಕೊಟ್ಟ ಟಾಸ್ಕ್​ ಮೂಲಕ ಸತ್ಯ ಆಚೆ ಬಂತಾ?
  • ಈ ವಾರ ತ್ರಿವಿಕ್ರಮ್ ​ಐಶ್ವರ್ಯಾ ಮೇಲೆ ದ್ವೇಷ ಸಾಧಿಸಿದ್ದು ನಿಜಾನಾ?

ಕನ್ನಡದ ಬಿಗ್​ಬಾಸ್​ ಸೀಸನ್ 11ರಲ್ಲಿ ಸ್ಪರ್ಧಿಗಳು ಒಬ್ಬರ ಮೇಲೆ ಒಬ್ಬರು ದ್ವೇಷ ಸಾಧಿಸಿ ಗೆಲುವು ಸಾಧಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಭಾನುವಾರದ ಸಂಚಿಕೆಯಲ್ಲಿ ನಡೆದ ಚಟುವಟಿಕೆಯಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಗೆ ಬಿಗ್ ಶಾಕ್‌.. ಗಂಟು ಮೂಟೆ ಕಟ್ಟಿದ್ದು ಯಾರು?

ಹೌದು, ಕನ್ನಡ ಬಿಗ್​ಬಾಸ್​ ಸೀಸನ್​ 11ಕ್ಕೆ ಕಿರುತೆರೆ ನಟಿಯರು ಎಂಟ್ರಿ ಕೊಟ್ಟಿದ್ದು ವೀಕ್ಷಕರಿಗೆ ಖುಷಿ ಕೊಟ್ಟಿತ್ತು. ಆದ್ರೆ, ಕಿಚ್ಚ ಸುದೀಪ್​  ಮನೆಯವರಿಗೆ ಒಂದು ಚಟುವಟಿಕೆ ಕೊಟ್ಟಿದ್ದರು. ಸ್ಪರ್ಧಿಗಳ ಮುಂದೆ ಅವರಲ್ಲಿ ಇದು ಇಷ್ಟ ಇಲ್ಲ, ಇದನ್ನು ಅವರು ಬದಲಾಯಿಸಿಕೊಳ್ಳಬೇಕು ಎಂಬುವುದನ್ನು ಹೇಳಿ ಆ ತಟ್ಟೆಗೆ ಸುತ್ತಿಗೆಯಿಂದ ಹೊಡೆದು ಬ್ರೇಕ್​ ಮಾಡಬೇಕು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.

publive-image

ಒಬ್ಬೊಬ್ಬರಾಗಿ ಬಂದು ಯಾವ ಸ್ಪರ್ಧಿ ಆಟವನ್ನು ಬದಲಾಯಿಸಿಕೊಳ್ಳಬೇಕು ಅಂತ ಫೋಟೋ ಅಂಟಿಸಿ ಸುತ್ತಿಗೆಯಿಂದ ಹೊಡೆದು ಬ್ರೇಕ್​ ಮಾಡಿದ್ದಾರೆ. ಆಗ ಐಶ್ವರ್ಯಾ ಭವ್ಯಾ ಹಾಗೂ ತ್ರಿವಿಕ್ರಮ್​ ಫೋಟೋವನ್ನು ತಟ್ಟೆಗೆ ಹಚ್ಚಿ ಸುತ್ತಿಗೆಯಿಂದ ಹೊಡೆದು ಬ್ರೇಕ್​ ಮಾಡಿದ್ದಾರೆ. ಆಗ ಇದಕ್ಕೆ ಕಾರಣ ಕೊಟ್ಟ ಐಶ್ವರ್ಯಾ, ಎಲ್ಲ ಟಾಸ್ಕ್​ನಲ್ಲಿ ತುಂಬಾ ಚೆನ್ನಾಗಿ ಆಡುತ್ತಾರೆ. ಇಲ್ಲಿ ಇರೋದೇ ಒಂದು ಕಪ್​ ಅದಕ್ಕಾಗಿ ಗಮನ ಕೊಡಿ. ಇದರ ಮಧ್ಯೆ ಎಲ್ಲೋ ಒಬ್ಬರ ಜೊತೆಗೆ ನೀವು ಕಳೆದು ಹೋಗುತ್ತಿದ್ದೀರಿ, ಅದರಿಂದ ಆಚೆ ಬಂದು ಎಲ್ಲರ ಜೊತೆಗೆ ಇರಿ ಅಂತ ಭವ್ಯಾ ಗೌಡಗೆ ಹೇಳಿದ್ದಾರೆ.

ಇದಾದ ಬಳಿಕ ತ್ರಿವಿಕ್ರಮ್ ಬಗ್ಗೆ ಮಾತಾಡಿದ ಐಶ್ವರ್ಯಾ, ಈ ವಾರದಲ್ಲಿ ನೀವು ತುಂಬಾ ವೈಯಕ್ತಿವಾಗಿ ತೆಗೆದುಕೊಂಡಿದ್ದೀರಿ. ಆದ್ರೆ, ನೀವು ಈ ವಾರ ಕೊಟ್ಟ ಟಾಸ್ಕ್​ನಲ್ಲಿ ನನ್ನ ಮೇಲೆ ದ್ವೇಷ ಸಾಧಿಸಿದ್ರಿ. ಇದನ್ನೂ ಬಿಟ್ಟು ನೀವು ಹೊಸ ವರ್ಷವನ್ನು ಶುರು ಮಾಡಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment