/newsfirstlive-kannada/media/post_attachments/wp-content/uploads/2025/07/MS_DHONI.jpg)
ಬ್ಯಾಟಿಂಗ್​, ಕೀಪಿಂಗ್​, ಕ್ಯಾಪ್ಟನ್ಸಿ ಎಲ್ಲದರಲ್ಲೂ ಸಕ್ಸಸ್​ ಕಂಡ ಮಿಸ್ಟರ್​ ಕೂಲ್​ ಧೋನಿ. ಆಫ್​​ ದ ಫೀಲ್ಡ್​ನಲ್ಲೂ ಒಬ್ಬ ಸಕ್ಸಸ್​ಫುಲ್​ ಆಲ್​​ರೌಂಡರ್​. ಕೆಲ ದಿನಗಳ ಹಿಂದೆ ಕ್ಯಾಪ್ಟನ್​ ಕೂಲ್​ ಅನ್ನೋ ಟ್ಯಾಗ್​ಲೈನ್​ ರಿಜಿಸ್ಟ್ರೇಷನ್​ಗೆ ಧೋನಿ ಅರ್ಜಿ ಸಲ್ಲಿಸಿದ್ದು ನಿಮಗೆ ಗೊತ್ತಿರಬಹುದು. ಆದ್ರೆ, ಅದರ ಹಿಂದಿನ ರೀಸನ್​ ಏನು ಅನ್ನೋದು ನಿಮಗೆ ಗೊತ್ತಾ.? ಮಾಹಿ ಮಾಸ್ಟರ್​​ ಪ್ಲಾನ್​ ಇದು.
ಏಕದಿನ ವಿಶ್ವಕಪ್​, ಟಿ20 ವಿಶ್ವಕಪ್​, ಚಾಂಪಿಯನ್ಸ್​ ಟ್ರೋಫಿ, 5 ಐಪಿಎಲ್​ ಟ್ರೋಫಿ. ಒಬ್ಬನೇ ಒಬ್ಬ ನಾಯಕ. ಎಮ್​.ಎಸ್​ ಧೋನಿ. ವಿಶ್ವ ಕ್ರಿಕೆಟ್​​ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್​, ಚಾಣಾಕ್ಷ ವಿಕೆಟ್​​ ಕೀಪರ್​​, ಪರ್ಫೆಕ್ಟ್​​ ಫಿನಿಶರ್​. ಅಬ್ಬರದ ಆಟಕ್ಕಿಂತ ಧೋನಿ ಅತಿ ಹೆಚ್ಚು ಸೆಳೆದಿದ್ದು ಕೂಲ್​ & ಕಾಮ್​ ವ್ಯಕ್ತಿತ್ವದಿಂದ. ಇದೇ ಕಾರಣಕ್ಕೆ ಕ್ರಿಕೆಟ್​ ಲೋಕ ಕ್ಯಾಪ್ಟನ್ ಕೂಲ್​​ ಎಂದೇ ಕರೆದಿದೆ. ಇದೀಗ ಆ ಕ್ಯಾಪ್ಟನ್ ಕೂಲ್​​ ಅನ್ನೋ ಟ್ಯಾಗ್​ಲೈನ್​ ಅನ್ನೇ ರಿಜಿಸ್ಟರ್​​​ ಮಾಡಿಸೋಕೆ ಅರ್ಜಿ ಸಲ್ಲಿಸಿದ್ದರು ಎಮ್​.ಎಸ್​ ಧೋನಿ.
ಬ್ಯುಸಿನೆಸ್​ ಸಾಮ್ರಾಜ್ಯ ವಿಸ್ತರಿಸಲು ಮಾಹಿ ಮಾಸ್ಟರ್​ ಪ್ಲಾನ್​.!
ಕ್ಯಾಪ್ಟನ್​ ಕೂಲ್​ ಅನ್ನೋ ಟ್ಯಾಗ್​ ಲೈನ್​ನ ರಿಜಿಸ್ಟ್ರೇಷನ್​ಗೆ ಧೋನಿ ಅರ್ಜಿ ಸಲ್ಲಿಸಿ ವಾರವೇ ಕಳೆಯಿತು. ಇದೀಗ ಆ ರಿಜಿಸ್ಟ್ರೇಷನ್​ ಹಿಂದಿನ ಮರ್ಮ ರಿವೀಲ್​ ಆಗಿದೆ. ಆನ್​ಫೀಲ್ಡ್​ನಲ್ಲಿ ಹಲವು ರೋಲ್​ಗಳನ್ನ ನಿಭಾಯಿಸಿ ಸಕ್ಸಸ್​ ಕಂಡ ಮಿಸ್ಟರ್​ ಕೂಲ್​, ಆಫ್​ ದ ಫೀಲ್ಡ್​​ನಲ್ಲೂ ಬ್ಯುಸಿನೆಸ್​​ ಲೋಕದಲ್ಲಿ ಸಕ್ಸಸ್​ ಕಂಡ ಕಥೆ ನಿಮಗೆ ಗೊತ್ತಿದೆ. ಇದೀಗ ಆ ಬ್ಯುಸಿನೆಸ್​​ ಸಾಮ್ರಾಜ್ಯವನ್ನ ಮತ್ತಷ್ಟು ವಿಸ್ತರಿಸಲು ಧೋನಿ ಮುಂದಾಗಿದ್ದಾರೆ. ಹೀಗಾಗಿಯೇ ಹೊಸ ಟ್ರೇಡ್​​ಮಾರ್ಕ್​​ ರಿಜಿಸ್ಟ್ರೇಷನ್​ಗೆ ಧೋನಿ ಅರ್ಜಿ ಸಲ್ಲಿಸಿರೋದು.
ಧೋನಿ ಈಗಾಗಲೇ ತಮಗಿರೋ ಫೇಮಸ್​​ ಟ್ಯಾಗ್​ಲೈನ್​ಗಳ ಅಡಿಯಲ್ಲಿ ಬ್ಯುಸಿನೆಸ್​ಗಳನ್ನ ನಡೆಸ್ತಿದ್ದಾರೆ. ಧೋನಿ ಜೆರ್ಸಿ ನಂಬರ್​ 7 ಎಷ್ಟು ಫೇಮಸ್​​ ಅನ್ನೋದು ನಿಮಗೆ ಗೊತ್ತು. ಹೀಗಾಗಿ ಈ ನಂಬರ್​ 7 ಇಟ್ಟುಕೊಂಡು 7 ಇಂಕ್​​ ಬ್ರೇವ್ಸ್​​ ಅನ್ನೋ ಕಂಪನಿ ತೆರೆದಿದ್ದಾರೆ. ಇನ್ನು ಸೆವೆನ್​ ಅನ್ನೋ ಸ್ಪೋರ್ಟ್ಸ್​​ & ಫಿಟ್​ನೆಸ್​​ ಆ್ಯಕ್ಟಿವ್​​ ಲೈಫ್​​ಸ್ಟೈಲ್​ನ ಕಂಪನಿಗೂ ಧೋನಿ ಒಡೆಯರಾಗಿದ್ದಾರೆ. ಇದೀಗ ಕ್ಯಾಪ್ಟನ್​ ಕೂಲ್​ ಅನ್ನೋ ಟ್ರೇಡ್​​ಮಾರ್ಕ್​ ರಿಜಿಸ್ಟ್ರೇಷನ್​ಗೆ ಮುಂದಾಗಿರೋದ್ರ ಹಿಂದೆಯೂ ಹೊಸ ಸ್ಟಾರ್ಟ್​​ಅಪ್​ ಸ್ಟಾರ್ಟ್​​ ಮಾಡೋ ಉದ್ದೇಶವಿದೆಯಂತೆ. ಅಂದ್ಹಾಗೆ, ಕ್ರಿಕೆಟರ್​ ಧೋನಿಯದ್ದೇ ಒಂದು ಅಧ್ಯಾಯವಾದ್ರೆ, ಬ್ಯುಸಿನೆಸ್​ಮನ್​ ಧೋನಿಯದ್ದು ಇನ್ನೊಂದು ಅಧ್ಯಾಯ.
ಡ್ರೋನ್​, ಫಿಟ್​ನೆಸ್​​, ಹೆಲ್ತ್​​.. ‘ಆಲ್​​​ರೌಂಡರ್​​’ ಧೋನಿ.!
ಧೋನಿ ಈಗಾಗಲೇ ಹಲವು ಸ್ಟಾರ್ಟ್​​ಅಪ್​ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗುರುಡ ಏರೋಸ್ಪೆಸ್​ ಅನ್ನೋ ಚೆನ್ನೈ ಮೂಲದ ಡ್ರೋನ್​ ತಯಾರಿಕಾ ಕಂಪನಿಯಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಧೋನಿ, ಇದ್ರ ಬ್ರ್ಯಾಂಡ್​ ಅಂಬಾಸಿಡರ್​ ಕೂಡ ಹೌದು.! ಬೆಂಗಳೂರು ಮೂಲದ ಖಾತಾಬುಕ್​ ಹಾಗೂ ತಗ್ದಾ ರಹೋ ಎಂಬ ಸ್ಟಾರ್ಟ್​​ಅಪ್​ಗಳಲ್ಲೂ ಧೋನಿಯ ಬಂಡವಾಳವಿದೆ. ಖಾತಾಬುಕ್​ ಫಿನ್​ಟೆಕ್​​​ ಕಂಪನಿಯಾಗಿದ್ರೆ, ತಗ್ದಾ ರಹೋ ಫಿಟ್​ನೆಸ್​ ಸಂಬಂಧಿತ ಕಂಪನಿಯಾಗಿದೆ.
2022ರಲ್ಲಿ ಆರಂಭವಾದ ಸೆಲಬ್ರಿಟಿ ಮ್ಯಾನೇಜ್​ಮೆಂಟ್​ ಕಂಪನಿ ರಿಗಿಯಲ್ಲೂ ಧೋನಿ ಹೂಡಿಕೆ ಮಾಡಿದ್ದಾರೆ. ಹೆಲ್ದಿ ಲೈಫ್​ ಸ್ಟೈಲ್​ನ ಪೋಕಸ್​ ಮಾಡಿ ಬಂದ ಶಾಕಾಹಾರಿಯಲ್ಲೂ ಮಾಹಿಯ ಬಂಡವಾಳವಿದೆ. ಸೆಕೆಂಡ್​​ ಹ್ಯಾಂಡ್​ ಕಾರ್​​ ಸೇಲ್​​ & ಬೈ ಕಂಪನಿಯಾದ CARS 24, ಹೋಮ್​ ಇಂಟಿರಿಯರ್​ಗೆ ಸಂಭಂದಿಸಿದ ಹೋಮ್​ ಲೇನ್​, ಎಲೆಕ್ಟ್ರಿಕ್​ ಬೈಸಿಕಲ್​ ಕಂಪನಿ EMotoradಗಳಲ್ಲೂ ಧೋನಿ ಇನ್ವೆಸ್ಟ್​ ಮಾಡಿದ್ದಾರೆ.
ಇದನ್ನೂ ಓದಿ: ಮಲೇಷ್ಯಾ ಖ್ಯಾತ ಮಾಡೆಲ್‌ಗೆ ದೇವಾಲಯದ ಅರ್ಚಕನಿಂದ ಕಿರುಕುಳ.. ಕೇಸ್ ದಾಖಲಾಗ್ತಿದ್ದಂತೆ ಪರಾರಿ!
ಮಿಸ್ಟರ್​ ಕೂಲ್​​ ಒಡೆತನದಲ್ಲಿ ಹಲವು ತಂಡಗಳು​.!
ಕ್ರಿಕೆಟ್ ಲೋಕದ ಕ್ಯಾಪ್ಟನ್​ ಕೂಲ್​ ಧೋನಿ ವಿವಿಧ ಕ್ರೀಡೆಗಳಲ್ಲೂ ಬಂಡವಾಳ ಹೂಡಿದ್ದಾರೆ. ಐಎಸ್​​ಲ್​ನ ಚೆನ್ನೈಯನ್​ ಎಫ್​ ಸಿ, ಹಾಕಿ ಇಂಡಿಯಾ ಲೀಗ್​ನಲ್ಲಿ ರಾಂಚಿ ರಾಯ್ಸ್​, ಮೋಟಾರ್​ ಸೈಕಲ್ ರೇಸಿಂಗ್​ನಲ್ಲಿ ಮಹಿ ರೇಸಿಂಗ್​ ಟೀಮ್​ ಇಂಡಿಯಾ ತಂಡಗಳ ಮಾಲೀಕರಾಗಿದ್ದಾರೆ. ಇದ್ರ ಹೊರತಾಗಿ ರಾಂಚಿಯಲ್ಲಿ ಹೋಟೆಲ್​ ಮಹಿ ರೆಸಿಡೆನ್ಸಿ ಅನ್ನೋ ಹೋಟೆಲ್​ ಹೊಂದಿದ್ದು, ನಿರ್ಮಾಪಕನಾಗಿ ಸಿನೆಮಾ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟು ಪ್ರೊಡ್ಯೂಸರ್​ ಆಗಿದ್ದಾರೆ.
ಕ್ರಿಕೆಟ್​ ಫೀಲ್ಡ್​​ನಲ್ಲಿ ಬ್ಯಾಟಿಂಗ್​, ಫೀಲ್ಡಿಂಗ್​, ಕ್ಯಾಪ್ಟನ್ಸಿ ಎಲ್ಲದರಲ್ಲೂ ಸಕ್ಸಸ್​ ಕಂಡ ಧೋನಿ, ಇದೀಗ ಬ್ಯುಸಿನೆಸ್​ ಫೀಲ್ಡ್​ನಲ್ಲೂ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಆಲ್​​ರೌಂಡರ್​ ಧೋನಿ ಯಶಸ್ಸನ್ನೂ ಕಂಡಿದ್ದಾರೆ. ಇದೀಗ ‘ಕ್ಯಾಪ್ಟನ್​ ಕೂಲ್​​’ ಟ್ರೇಡ್​ ಮಾರ್ಕ್​ನೊಂದಿಗೆ ಬ್ಯುಸಿನೆಸ್​ ಲೋಕದಲ್ಲಿ ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿದ್ದು, ಧೋನಿಯ ನೆಕ್ಸ್ಟ್​ ಬ್ಯುಸಿನೆಸ್​ ಏನು ಅನ್ನೋದು ತೀವ್ರ ಕುತೂಹಲ ಹುಟ್ಟುಹಾಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ