ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್​ ಫೇವರಿಟ್​​..!

author-image
Ganesh
Updated On
ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್​ ಫೇವರಿಟ್​​..!
Advertisment
  • 11 ಮಂದಿ ಆಂಗ್ಲರಿ​ಗೆ ಸೆಡ್ಡು ಹೊಡೆದ ಸಿಂಗಲ್​ ಶೇರ್​​​​
  • ಬೂಮ್ರಾ, ಸಿರಾಜ್​ ಜೊತೆಗೆ ಜಡ್ಡು ಜುಗಲ್​ಬಂದಿ
  • ಸರ್​​ ಜಡೇಜಾನೇ ಭಾರತದ ಬೆಸ್ಟ್​ ಆಲ್​​ರೌಂಡರ್

ಇಂಡೋ-ಇಂಗ್ಲೆಂಡ್​​ ಲಾರ್ಡ್ಸ್​ ಟೆಸ್ಟ್​ ಪಂದ್ಯ ಕ್ರಿಕೆಟ್​ ಅಭಿಮಾನಿಗಳಿಗೆ ಸಖತ್​ ಟ್ರೀಟ್​​ ನೀಡ್ತು. ಪಂದ್ಯದಲ್ಲಿ ಭಾರತ ಸೋತರೂ, ಸರ್​ ಜಡೇಜಾ ಫ್ಯಾನ್ಸ್​ ಹೃದಯ ಗೆದ್ರು. ಜಡ್ಡು ಕೆಚ್ಚೆದೆಯ ಹೋರಾಟಕ್ಕೆ ಫ್ಯಾನ್ಸ್​ ಸೆಲ್ಯೂಟ್​ ಅಂತಿದ್ದಾರೆ. ಕ್ರಿಕೆಟ್​ ಕಾಶಿಯಲ್ಲಿ ಭರ್ಜರಿ ಆಟವಾಡಿದ ಜಡೇಜಾ, ಸ್ಥಾನದ ಬಗ್ಗೆ ಪ್ರಶ್ನೆ ಮಾಡಿದವರಿಗೆ ಖಡಕ್​ ಆನ್ಸರ್​ ಕೊಟ್ಟಿದ್ದಾರೆ.

ಇಂಗ್ಲೆಂಡ್​​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋತಿರಬಹುದು. ಐಕಾನಿಕ್​ ಲಾರ್ಡ್ಸ್​​ ರಣಭೂಮಿಯಲ್ಲಿ ಟೀಮ್​ ಇಂಡಿಯಾ ನಡೆಸಿದ ಕೆಚ್ಚೆದೆಯ ಹೋರಾಟ ಇಡೀ ವಿಶ್ವದ ಮನ ಗೆದ್ದಿದೆ. ಕೆಲವೇ ನಿಮಿಷಗಳಲ್ಲಿ ಟೀಮ್​ ಇಂಡಿಯಾ ಖೇಲ್​ಖತಂ ಆಗುತ್ತೆ ಅನ್ನೋ ಹಂತದಿಂದ ಶುರುವಾದ ಟೀಮ್​ ಇಂಡಿಯಾ ಹೋರಾಟ, ಕೊನೆಯಲ್ಲಿ ಇಂಗ್ಲೆಂಡ್​ ತಂಡವನ್ನೇ​​ ಸೋಲಿಸೋ ಮಟ್ಟಕ್ಕೆ ಬಂದಿತ್ತು. ದುರಾದೃಷ್ಟ ಗೆಲುವಿನ ಹೊಸ್ತಿಲಲ್ಲಿ ಎಡವಿಬಿಡ್ತು.

ಇದನ್ನೂ ಓದಿಕರುಣ್ ನಾಯರ್​ ಸ್ಥಾನಕ್ಕಾಗಿ ರೇಸ್​​ನಲ್ಲಿ 4 ಯಂಗ್​ ಪ್ಲೇಯರ್ಸ್​.. ವಿಶ್ವಾಸ ಕಳೆದುಕೊಂಡ್ರಾ ಕನ್ನಡಿಗ?

publive-image

11 ಮಂದಿ ಆಂಗ್ಲರಿ​ಗೆ ಸೆಡ್ಡು ಹೊಡೆದ ಸಿಂಗಲ್​ ಶೇರ್​

ಲಾರ್ಡ್ಸ್​​ ಟೆಸ್ಟ್​ ಪಂದ್ಯದ ಅಂತಿಮ ದಿನದಾಟದಲ್ಲಿ ಇಡೀ ಇಂಗ್ಲೆಂಡ್​ ತಂಡ ಕೆರಳಿ ನಿಂತಿತ್ತು. ಆರಂಭದಲ್ಲೇ ಸಕ್ಸಸ್​​ ಸಿಕ್ಕ ಮೇಲಂತೂ ಆಟಗಾರರು ಎಲ್ಲೆ ಮೀರಿ ವರ್ತಿಸ್ತಿದ್ರು. ರನ್​ಭೂಮಿಯಲ್ಲಿ ಸ್ಲೆಡ್ಜಿಂಗ್​ ಯಥೇಚ್ಚವಾಗಿ ಸಾಗಿತ್ತು. ಹೀಗೆ​ ಅತಿಯಾದ ಆತ್ಮವಿಶ್ವಾಸದಲ್ಲಿ ಹಾರಾಡ್ತಿದ್ದ ಇಂಗ್ಲೆಂಡ್​ಗೆ ಸೆಡ್ಡು ಹೊಡೆದಿದ್ದು ಸಿಂಗಲ್​ ಶೇರ್​​ ರವೀಂದ್ರ ಜಡೇಜಾ.

ಪಂದ್ಯ ಸೋತರೂ ಹೃದಯ ಗೆದ್ದ ಜಡೇಜಾ

ಇಂಗ್ಲೆಂಡ್​​​ ಬೌಲರ್​​ಗಳ ಅಬ್ಬರಕ್ಕೆ ಟೀಮ್​ ಇಂಡಿಯಾದ ಟಾಪ್​ ಆರ್ಡರ್​​ ಬ್ಯಾಟರ್​​ಗಳೇ ಗಂಟುಮೂಟೆ ಕಟ್ಟಿದಾಗಿ ಜಡೇಜಾ ಹೋರಾಟಕ್ಕಿಳಿದ್ರು. ಜಸ್​​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​ರಂತ ಬೌಲರ್​​ಗಳ ಜೊತೆಗೂಡಿ. ಬೂಮ್ರಾ, ಸಿರಾಜ್​​ನ ಜೊತೆಗೂಡಿ ಜಡೇಜಾ ಕಟ್ಟಿದ ಪಾರ್ಟನರ್​​ಶಿಪ್​ ಇಂಗ್ಲೆಂಡ್​ ಆಟಗಾರರಲ್ಲಿ ನಡುಕ ಹುಟ್ಟಿಸಿತ್ತು. ಸೋಲಿನ ಆತಂಕ ಕ್ಯಾಂಪ್​ನ ಆವರಿಸಿತ್ತು. ಅಂತಿಮವಾಗಿ ಪಂದ್ಯ ಸೋತರೂ ಜಡೇಜಾ ಆಡಿದ ಆ ಒಂದು ಇನ್ನಿಂಗ್ಸ್​​ ಕ್ರಿಕೆಟ್​ ಅಭಿಮಾನಿಗಳ ಹೃದಯ ಗೆದ್ದಿದೆ.

ಸತತ 4ನೇ ಅರ್ಧಶತಕ ಸಿಡಿಸಿ ಮಿಂಚಿದ ‘ರಾಕ್​ಸ್ಟಾರ್​’

ಲಾರ್ಡ್ಸ್​​ ಟೆಸ್ಟ್​​ನ ಸೆಕೆಂಡ್​​ ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 181 ಎಸೆತ ಎದುರಿಸಿ 61 ರನ್​ಗಳಿಸಿದ್ರು. ಅಂದ್ಹಾಗೆ ಇದು ಜಡೇಜಾ ಬ್ಯಾಟ್​ನಿಂದ ಬಂದ ಸತತ 4ನೇ ಹಾಫ್​ ಸೆಂಚುರಿ. ಲಾರ್ಡ್ಸ್​ ಟೆಸ್ಟ್​​ ಮೊದಲ ಇನ್ನಿಂಗ್ಸ್​ನಲ್ಲೂ ಜಡೇಜಾ 71 ರನ್​ಗಳಿಸಿದ್ರು. ಅದಕ್ಕೂ ಹಿಂದಿನ ಬರ್ಮಿಂಗ್​​ಹ್ಯಾಮ್​ ಟೆಸ್ಟ್​​ನ ಎರಡೂ ಇನ್ನಿಂಗ್ಸ್​ಗಳಲ್ಲಿ ಜಡೇಜಾ ಹಾಫ್​​​​ ಸೆಂಚುರಿ ಬಾರಿಸಿದ್ರು.

ಇದನ್ನೂ ಓದಿ: ಲಾರ್ಡ್ಸ್​ ಟೆಸ್ಟ್​ ಮ್ಯಾಚ್​ ಫುಲ್​ ಥ್ರಿಲ್ಲಿಂಗ್​.. ಪಂದ್ಯಕ್ಕೆ ರೋಚಕ ಟಚ್ ಕೊಟ್ಟ ಈ ಕಿರಿಕ್​​ಗಳು..!

publive-image

ಜಡೇಜಾನೇ ಟೀಮ್​ ಇಂಡಿಯಾದ ಬೆಸ್ಟ್​ ಆಲ್​​ರೌಂಡರ್

ಇಂಗ್ಲೆಂಡ್​ ಪ್ರವಾಸದ ಮೊದಲ ಟೆಸ್ಟ್​ನಲ್ಲಿ ಫೇಲ್​ ಆಗಿದ್ದ ಜಡೇಜಾ ಟೀಕೆಗಳನ್ನ ಎದುರಿಸಿದ್ರು. ನಂತರದ ಎರಡು ಟೆಸ್ಟ್​​ಗಳಲ್ಲಿ ಜಡೇಜಾ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಸೌರವ್​ ಗಂಗೂಲಿ, ರಿಷಭ್​ ಪಂತ್​ ಬಿಟ್ರೆ, ಇಂಗ್ಲೆಂಡ್​​ನಲ್ಲಿ ಬೇರಾವ ಬ್ಯಾಟ್ಸ್​ಮನ್​​ ಕೈ ಸತತವಾಗಿ 4 ಹಾಫ್​​ ಸೆಂಚುರಿ ಹೊಡೆದಿರಲಿಲ್ಲ. ಜಡೇಜಾ ಆ ಸಾಧನೆ ಮಾಡಿದ್ದಾರೆ. ಲಾರ್ಡ್ಸ್​ ಪಂದ್ಯದ ಸಾಲಿಡ್​ ಇನ್ನಿಂಗ್ಸ್​ನೊಂದಿಗೆ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ 600 ವಿಕೆಟ್ಸ್​​ ಹಾಗೂ 7 ಸಾವಿರ ರನ್ ಪೂರೈಸಿದ ಆಲ್​​ರೌಂಡರ್​​ ಆಗಿ ಹೊರಹೊಮ್ಮಿದ್ದಾರೆ. ಕಪಿಲ್​ ದೇವ್​ ಬಿಟ್ರೆ ಬೇರಾರೂ ಕೂಡ ಈ ಸಾಧನೆ ಮಾಡಿಲ್ಲ.

ಎಲ್ಲರಿಗೂ ಜಡ್ಡುನೇ ಬೇಕು.. ಕ್ಯಾಪ್ಟನ್ಸ್​ ಫೇವರಿಟ್​​

ಲಾರ್ಡ್ಸ್​​ ಟೆಸ್ಟ್​ ಬಳಿಕ ಶುಭ್​ಮನ್​ ಗಿಲ್​ ಹೊಗಳಿದ್ದನ್ನ ಕೇಳಿಸಿಕೊಂಡ್ರಲ್ವಾ. ಇದ್ರಲ್ಲಿ ಉತ್ರೆಕ್ಷೇ ಏನಿಲ್ಲ. ಜಡೇಜಾ ಆಲ್​​​ರೌಂಡ್​ ಸ್ಕಿಲ್​ ಟೀಮ್​ ಇಂಡಿಯಾಗೆ ಬೇಕಿದೆ. ಬ್ಯಾಟಿಂಗ್​ ಇರಬಹುದು. ಬೌಲಿಂಗ್​ ಇರಬಹುದು. ಫೀಲ್ಡಿಂಗ್​ ಇರಬಹುದು. ಜಡೇಜಾ ರೂಲ್​ ಟೀಮ್​ಇಂಡಿಯಾ ಪಾಲಿಗೆ ಮೋಸ್ಟ್​ ಇಂಪಾರ್ಟೆಂಡ್​. ವೈಟ್​ ಬಾಲ್​​ ಹಾಗೂ ರೆಡ್​ ಬಾಲ್​ ಎರಡೂ ಫಾರ್ಮೆಟ್​ನಲ್ಲಿ ಹಲವು ವರ್ಷಗಳಿಂದ ಜಡೇಜಾ ರೋಲ್​ ನಿಭಾಯಿಸಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾದ ಪ್ರತಿಯೊಬ್ಬ ನಾಯಕನಿಗೂ ಜಡೇಜಾ ಬೇಕೆಬೇಕು.

ಇದನ್ನೂ ಓದಿ: RCB ಬೌಲರ್ ಯಶ್ ದಯಾಳ್‌ಗೆ ಬಿಗ್​ ರಿಲೀಫ್‌.. ಹೈಕೋರ್ಟ್​ ಹೇಳಿರುವುದು ಏನು..?

publive-image

ಶುಭ್​ಮನ್​ ಗಿಲ್​ ಮಾತ್ರವಲ್ಲ.. ಈ ಹಿಂದೆ ರೋಹಿತ್​ ಶರ್ಮಾ, ವಿರಾಟ್​​ ಕೊಹ್ಲಿ ಅಷ್ಟೇ ಏಕೆ ಎಮ್​.ಎಸ್​ ಧೋನಿ ಪಾಲಿಗೂ ಜಡೇಜಾನೇ ಮ್ಯಾಚ್​ ವಿನ್ನರ್​ ಆಗಿದ್ರು. ಟೀಮ್​ ಇಂಡಿಯಾ ನಾಯಕರಾಗಿ ಕೊಹ್ಲಿ, ಧೋನಿ, ರೋಹಿತ್​ ಕಂಡ ಯಶಸ್ಸಿನಲ್ಲಿ ಜಡೇಜಾ ಮೇಜರ್​ ರೋಲ್​​ ಪ್ಲೇ ಮಾಡಿದ್ದಾರೆ.

ಇಂಗ್ಲೆಂಡ್​ನ ಪೇಸ್​​ ಮತ್ತು ಬೌನ್ಸಿ ಕಂಡಿಷನ್ಸ್​ನಲ್ಲಿ ಜಡೇಜಾನ ನಿಜಕ್ಕೂ ಆಡಿಸಬೇಕಾ? ಜಡ್ಡು ಬದಲು ಸ್ಪೆಷಲಿಸ್ಟ್​ ಸ್ಪಿನ್ನರ್​​ನ ಆಡಿಸಬೇಕೆಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿತ್ತು. ಈ ಪ್ರಶ್ನೆಗೆ ರವೀಂದ್ರ ಜಡೇಜಾ ತನ್ನ ಬ್ಯಾಟ್​​ನಿಂದ ಆನ್ಸರ್​ ಕೊಟ್ಟಿದ್ದಾರೆ. ಬಾಲ್​ ಹಿಡಿದೂ ಮ್ಯಾಜಿಕ್​ ಮಾಡಿ ಸಾಮರ್ಥ್ಯ ನಿರೂಪಿಸಿದ್ದಾರೆ. ಇದೇ ಆಟವನ್ನ ಮುಂದಿನ ಪಂದ್ಯಗಳಲ್ಲೂ ಜಡೇಜಾ ಮುಂದುವರೆಸಲಿ.

ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment