ನಾಯಕ ಮಾಡಿದ ತಪ್ಪುಗಳೇ ಹೊರೆಯಾದ್ವು.. ಪ್ಲಾನ್​-ಬಿ ಇಲ್ಲದೆ ಗಿಲ್ ಇದೆಂಥ ಯಡವಟ್ಟು..!

author-image
Ganesh
Updated On
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆಲ್ಲಲು ಬಲಿಷ್ಠ ಪ್ಲೇಯಿಂಗ್-11ಗೆ ಹೆಸರು ಸೂಚಿಸಿದ ರವಿ ಶಾಸ್ತ್ರಿ
Advertisment
  • ಮೊದಲ ‘ಟೆಸ್ಟ್’​​ನಲ್ಲಿ ಶುಭ್​ಮನ್​ ಗಿಲ್​ ಫೇಲ್​
  • ಲೀಡ್ಸ್​​ನಲ್ಲಿ ಗಿಲ್​ ಮಾಡಿದ ಯಡವಟ್ಟುಗಳೇನು..?
  • ನಾಯಕನ ತಪ್ಪುಗಳು ತಂಡಕ್ಕೆ ಹೊರೆಯಾದ್ವಾ..?

ಶುಭಾರಂಭದ ನಿರೀಕ್ಷೆಯಲ್ಲಿ ಇಂಗ್ಲೆಂಡ್​ ಫ್ಲೈಟ್​ ಹತ್ತಿದ್ದ ನೂತನ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಮೊದಲ ಟೆಸ್ಟ್​ನಲ್ಲೇ ಫೇಲ್​ ಆಗಿದ್ದಾರೆ. ನಾಯಕತ್ವದ ಮೊದಲ ಅಗ್ನಿ ಪರೀಕ್ಷೆಯಲ್ಲೇ ಶುಭ್​ಮನ್​ ಗಿಲ್ ತಡಬಡಾಯಿಸಿದ್ದಾರೆ. ಶುಭ್​ಮನ್​ ಅಸಲಿ ಸಾಮರ್ಥ್ಯ ಎಕ್ಸ್​ಪೋಸ್​ ಆಗಿದೆ. ಆನ್​​ಫೀಲ್ಡ್​ನಲ್ಲಿ ನಯಾ ಕ್ಯಾಪ್ಟನ್​​ ಮಾಡಿದ ಮಿಸ್ಟೇಕ್ಸ್​ ಒಂದೆರಡಲ್ಲ. ಸಾಲು ಸಾಲು ವೈಫಲ್ಯಗಳು ಸೋಲಿಗೆ ಗುರಿ ಮಾಡಿದ್ವು.

6ಕ್ಕೆ 6 ಡಿಆರ್​​ಎಸ್​​ಗಳು ಫೇಲ್

ಶುಭ್​ಮನ್​ ಗಿಲ್​ ಕಳಪೆ ನಾಯಕತ್ವಕ್ಕೆ ಇದಕ್ಕಿಂತ ದೊಡ್ಡ ಎಕ್ಸಾಂಪಲ್​ ಬೇಕಾ? ಲೀಡ್ಸ್​​ನ 2 ಇನ್ನಿಂಗ್ಸ್​ಗಳಿಂದ 6 ಡಿಆರ್​​ಎಸ್​ ನಿರ್ಧಾರಗಳನ್ನ ಗಿಲ್​ ತೆಗೆದುಕೊಂಡ್ರು. ಈ ಆರರ ಪೈಕಿ ಒಂದೇ ಒಂದು ಬಾರಿ ಕೂಡ ತೀರ್ಪು ಮರುಪರಿಶೀಲನೆಯಲ್ಲಿ ಗಿಲ್ ಸಕ್ಸಸ್​ ಅನ್ನೋದನ್ನ ಕಾಣಲಿಲ್ಲ. ಎಲ್ಲಾ ಡಿಆರ್​ಎಸ್​ಗಳು​​ ಅನ್​​ಸಕ್ಸಸ್​​ಫುಲ್​ ಆಗಿ ಮುಗಿದು ಹೋದ್ವು. ಇದು ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದು ಸುಳ್ಳಲ್ಲ.

ಬೌಲಿಂಗ್​ ರೋಟೆಶನ್​ನಲ್ಲಿ ವೈಫಲ್ಯ

ಬೌಲಿಂಗ್​ ರೋಟೆಶನ್​ ವಿಚಾರದಲ್ಲಂತೂ ಶುಭ್​ಮನ್​ ಗಿಲ್​​ ಚಾಣಾಕ್ಷತೆ ಮೆರೆಯಲೇ ಇಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ 8 ವಿಕೆಟ್​ ಕಳೆದುಕೊಂಡ ಸಂದರ್ಭದಲ್ಲಿ ಬೂಮ್ರಾಗೆ ಬೌಲಿಂಗ್​ ನೀಡಿ ಅಟ್ಯಾಕ್​ ಮಾಡೋದನ್ನ ಬಿಟ್ಟು ಬೇರೆಯವರಿಗೆ ನೀಡಿದ್ರು. ಪರಿಣಾಮ ಕ್ರಿಸ್​ವೋಕ್ಸ್​, ಜೋಸ್​​​​ ಟಂಗ್​ ಒಳ್ಳೆ ಪಾರ್ಟನರ್​ಶಿಪ್​ ಕಟ್ಟಿದ್ರು. ಅಂತಿಮವಾಗಿ ಇವರನ್ನ ಔಟ್​ ಮಾಡೋಕೆ ಬೂಮ್ರಾನೇ ಬರಬೇಕಾಯ್ತು. ಈ ಕೆಲಸ ಮೊದಲೇ ಮಾಡಿದ್ರೆ ರನ್ಸ್​ ಸೇವ್​ ಆಗಿತ್ತು.

ಇದನ್ನೂ ಓದಿ: ಭಾವುಕ ಪೋಸ್ಟ್ ಹಂಚಿಕೊಂಡ ಆರ್​ಸಿಬಿ ಸ್ಟಾರ್ ಕೃನಾಲ್ ಪಾಂಡ್ಯ..

publive-image

2ನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್​ ಕಬಳಿಸಿ ಮಿಂಚಿದ ಶಾರ್ದೂಲ್​ ಠಾಕೂರ್​ಗೆ ಫಸ್ಟ್​ ಇನ್ನಿಂಗ್ಸ್​​ನಲ್ಲಿ ಶುಭ್​ಮನ್​ ಗಿಲ್​ ಕೊಟ್ಟಿದ್ದು 6 ಓವರ್​ ಮಾತ್ರ. ಶಾರ್ದೂಲ್​ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆಮೇಲೆ ಶಾರ್ದೂಲ್​​ ಠಾಕೂ ಹೊಸ ಬಾಲ್​ನೊಂದಿಗೆ ಪರಿಣಾಮಕಾರಿ ಬೌಲಿಂಗ್​ ಮಾಡ್ತಾರೆ. ಶಾರ್ದೂಲ್​ಗೆ ಗಿಲ್​ 40ನೇ ಓವರ್​ನಲ್ಲಿ ಮೊದಲ ಬಾರಿಗೆ ಚೆಂಡು ನೀಡಿದ್ರು. ಸಿರಾಜ್​, ಪ್ರಸಿದ್ಧ್​ ಕೃಷ್ಣರನ್ನೂ ಅಷ್ಟೇ ಸರಿಯಾಗಿ ಬಳಸಿಕೊಳ್ಳಲಿಲ್ಲ.

ಕಳಪೆ ಫೀಲ್ಡ್​ ಪ್ಲೇಸ್​ಮೆಂಟ್​

ಟೀಮ್​ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಕ್ಯಾಚ್​ ಡ್ರಾಪ್​. ಅದ್ರಲ್ಲೂ ಯಶಸ್ವಿ ಜೈಸ್ವಾಲ್​ ಡ್ರಾಪ್​ ಮಾಡಿದ 4 ಕ್ಯಾಚ್​ಗಳು ತುಂಬಾ ದುಬಾರಿಯಾದ್ವು. ಸ್ಲಿಪ್​ನಲ್ಲಿ ಜೈಸ್ವಾಲ್​ ಪದೇ ಪದೇ ಮಿಸ್ಟೆಕ್ಸ್​ ಮಾಡಿದ್ರೂ ಬದಲಾವಣೆ ಮಾಡಲಿಲ್ಲ. ಗುಡ್​ ಸ್ಲಿಪ್​ ಫೀಲ್ಡರ್ ಸಾಯಿ ಸುದರ್ಶನ್​ ತಂಡದಲ್ಲಿದ್ರು. ಯಶಸ್ವಿ ಜೈಸ್ವಾಲ್​ ಆಸ್ಟ್ರೇಲಿಯಾ ಟೂರ್​​ನಲ್ಲಿ ಗಲ್ಲಿಯಲ್ಲಿ ಹೆಚ್ಚಾಗಿ ಫೀಲ್ಡ್​ ಮಾಡಿದ್ರು. ಸುದರ್ಶನ್​ನ ಸ್ಲಿಪ್​ಗೆ ಶಿಫ್ಟ್​ ಮಾಡಿ, ಜೈಸ್ವಾಲ್​ನ ಗಲ್ಲಿಯಲ್ಲಿ ನಿಲ್ಲಿಬಹುದಿತ್ತು. ಫೀಲ್ಡ್​ ಪ್ಲೇಸ್​ಮೆಂಟ್​ ವೈಫಲ್ಯಕ್ಕೆ ಇದೊಂದು ದೊಡ್ಡ ಎಕ್ಸಾಂಪಲ್​.

ಇದನ್ನೂ ಓದಿ: 148 ವರ್ಷ.. 2573 ಟೆಸ್ಟ್..​ ಇತಿಹಾಸದಲ್ಲೇ ಮೊದಲು; ಆದರೂ ಅಪಖ್ಯಾತಿಗೆ ಒಳಗಾದ ಗಿಲ್ ಪಡೆ..!

publive-image

ಅಗ್ರೆಸ್ಸಿವ್​ ಇಂಟೆಂಟ್​​ ಮಾಯ

ಲೀಡ್ಸ್​​ ಟೆಸ್ಟ್​ನಲ್ಲಿ ಬ್ಯಾಟಿಂಗ್​ನಲ್ಲಿ ಟೀಮ್​ ಇಂಡಿಯಾ ಒಳ್ಳೆ ಪರ್ಫಾಮೆನ್ಸ್​ ನೀಡಿ, ಬೌಲಿಂಗ್​ ಟೀಮ್​ ಇಂಡಿಯಾ ಎಡವಿತು. ಇದಕ್ಕೆ ಫೀಲ್ಡಿಂಗ್​ ವೇಳೆ ತಂಡದಲ್ಲಿದ್ದ ಬಾಡಿ ಲ್ಯಾಂಗ್ವೇಜ್​ ಕೂಡ ಒಂದು ಕಾರಣ. ಅಗ್ರೆಸ್ಸಿವ್​ ಇಂಟೆಂಟ್​ ಇರಲಿಲ್ಲ, ಗೆಲ್ಲಲೇಬೇಕು ಅನ್ನೋ ಛಲವು ಕಾಣಿಸಲಿಲ್ಲ. ಫೀಲ್ಡಿಂಗ್​ ವೇಳೆ ಟೀಮ್​ ಇಂಡಿಯಾ ಸಪ್ಪೆ ಅನಿಸಿಬಿಡ್ತಿ. ಆಟಗಾರರಿಗೆ ಸ್ಫೂರ್ತಿ ತುಂಬಬೇಕಾಗಿದ್ದ ನಾಯಕ ಗಿಲ್​, ಆ ಕೆಲಸವನ್ನ ಸಮರ್ಥವಾಗಿ ನಿಭಾಯಿಸಲಿಲ್ಲ.

ಪ್ಲಾನ್​-ಬಿ ಇಲ್ಲದೆ ಪರದಾಟ

371 ರನ್​ಗಳ ಬಿಗ್​ ಟಾರ್ಗೆಟ್​​ ಚೇಸಿಂಗ್​ಗಿಳಿದ ಇಂಗ್ಲೆಂಡ್​​ ಪರ ಓಪನರ್ಸ್​​ ದಿಟ್ಟ ಹೋರಾಟ ಶುರುವಿಟ್ಟುಕೊಂಡ್ರು. ಆಗ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ತಂತ್ರಗಾರಿಕೆ ವರ್ಕೌಟ್​ ಆಗಲಿಲ್ಲ. ವಿಕೆಟ್​ ಕಬಳಿಸಲು ಟೀಮ್​ ಇಂಡಿಯಾ ತಡಕಾಡಿತು. ಟೀಮ್​ ಇಂಡಿಯಾ ನಾಯಕನ ಬಳಿ ಪ್ಲಾನ್​ ಬಿ ಇರಲಿಲ್ಲ. ಇದು ಕೂಡ ದುಬಾರಿಯಾಯ್ತ. ಮೊದಲ ಟೆಸ್ಟ್​ನಲ್ಲೇ ಸಾಲು ಸಾಲು ತಪ್ಪುಗಳನ್ನ ಮಾಡಿ ಫೇಲ್​ ಆಗಿರೋ ಗಿಲ್​, ಮುಂದಿಗ ಪಂದ್ಯದಲ್ಲಿ ತಪ್ಪನ್ನ ತಿದ್ದಿಕೊಳ್ತಾರಾ ಕಾದು ನೋಡೋಣ.

ಇದನ್ನೂ ಓದಿಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ.. ಅಂದು ಏನೆಲ್ಲಾ ಆಯ್ತು..? ಪ್ರತ್ಯಕ್ಷದರ್ಶಿಗಳಿಗೂ ಹೇಳಿಕೆ ಸಲ್ಲಿಸಲು ಡಿ.ಸಿ. ಕರೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment