2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಬಿಗ್​ ಶಾಕ್​​; ತಂಡದಿಂದಲೇ ಕ್ಯಾಪ್ಟನ್​​ಗೆ ಕೊಕ್

author-image
Ganesh Nachikethu
Updated On
2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಬಿಗ್​ ಶಾಕ್​​; ತಂಡದಿಂದಲೇ ಕ್ಯಾಪ್ಟನ್​​ಗೆ ಕೊಕ್
Advertisment
  • ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ
  • ಟ್ರೋಫಿ ಆರಂಭಕ್ಕೆ ಕೇವಲ ಒಂದೂವರೆ ತಿಂಗಳು ಬಾಕಿ
  • ಈ ಮುನ್ನವೇ ಆಸ್ಟ್ರೇಲಿಯಾ ಟೀಮ್​​ಗೆ ಶಾಕಿಂಗ್​​ ನ್ಯೂಸ್​

ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೆ ಇನ್ನೇನು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ಪಾಕಿಸ್ತಾನ ಚಾಂಪಿಯನ್ಸ್‌ ಟ್ರೋಫಿ ಆಯೋಜನೆ ಮಾಡಲಿದೆ. ಆಸ್ಟ್ರೇಲಿಯಾ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗಲಿದೆ. ಈ ಮುನ್ನವೇ ಆಸ್ಟ್ರೇಲಿಯಾ ಟೀಮ್​​ಗೆ ಶಾಕಿಂಗ್​​ ನ್ಯೂಸ್​ ಒಂದಿದೆ.

ಆಸ್ಟ್ರೇಲಿಯಾಗೆ ಬಿಗ್​ ಶಾಕ್​​

ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಆಸ್ಟ್ರೇಲಿಯಾಗೆ ದೊಡ್ಡ ಆಘಾತ ಎದುರಾಗಿದೆ. ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟವಾಗಿದೆ. ಆಸ್ಟ್ರೇಲಿಯಾ ತಂಡದಿಂದ ಕ್ಯಾಪ್ಟನ್​​​ ಪ್ಯಾಟ್ ಕಮ್ಮಿನ್ಸ್​ಗೆ ಕೊಕ್​ ನೀಡಲಾಗಿದೆ. ಇವರ ಬದಲಿಗೆ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ಲೀಡ್​ ಮಾಡಲಿದ್ದಾರೆ.

ಪ್ಯಾಟ್​ ಕಮಿನ್ಸ್​ಗೆ ಗಂಭೀರ ಗಾಯ

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ ಪ್ಯಾಟ್ ಕಮ್ಮಿನ್ಸ್ ಪಾದಕ್ಕೆ ಗಂಭೀರ ಗಾಯವಾಗಿತ್ತು. ಹಾಗಾಗಿ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ದಾಖಲು ಮಾಡಲಾಯ್ತು. ಇಷ್ಟೇ ಅಲ್ಲ ಕಮಿನ್ಸ್​ ಜೋಡಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಕಮ್ಮಿನ್ಸ್​ ಪಿತೃತ್ವ ರಜೆಯಲ್ಲಿದ್ದಾರೆ. ಇದೇ ಹೊತ್ತಲ್ಲೇ ಮುಂಬರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಕಮ್ಮಿನ್ಸ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.

ಕಮ್ಮಿನ್ಸ್​ ಬಗ್ಗೆ ಜಾರ್ಜ್ ಬೈಲಿ ಏನಂದ್ರು?

ಇನ್ನು, ಕಮ್ಮಿನ್ಸ್ ಗಾಯದ ಬಗ್ಗೆ ಆಸ್ಟ್ರೇಲಿಯಾ ಸೆಲೆಕ್ಷನ್​ ಕಮಿಟಿ ಅಧ್ಯಕ್ಷ ಜಾರ್ಜ್ ಬೈಲಿ ಮಾತನಾಡಿದ್ದಾರೆ. ಮುಂದಿನ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಮ್ಮಿನ್ಸ್ ಆಡೋದು ಡೌಟ್​. ಇವರು ಪ್ರಸ್ತುತ ಪಿತೃತ್ವ ರಜೆಯಲ್ಲಿದ್ದಾರೆ. ಜತೆಗೆ ಕಮ್ಮಿನ್ಸ್​​ ಪಾದಕ್ಕೆ ತೀವ್ರ ಗಾಯವಾಗಿದೆ. ಮುಂದಿನ ವಾರ ಸ್ಕ್ಯಾನ್ ಮಾಡಿಸಿದ ಬಳಿಕ ಇವರ ಲಭ್ಯತೆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದರು.

ಇದನ್ನೂ ಓದಿ:2025ರ ಚಾಂಪಿಯನ್ಸ್​ ಟ್ರೋಫಿ; ಸ್ಟಾರ್​ ಎಂಟ್ರಿಯಿಂದ ಟೀಮ್​ ಇಂಡಿಯಾಗೆ ಬಂತು ಆನೆಬಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment